ಇದೇ ತಿಂಗಳ ಅಂತ್ಯದಲ್ಲಿ ಬೋರಿಸ್ ಜಾನ್ಸನ್, ಪ್ರಧಾನಿ ಮೋದಿ ಅಮೆರಿಕ ಪ್ರವಾಸ!

masthmagaa.com:

ಯುನೈಟೆಡ್​ ಕಿಂಗ್​​ಡಮ್ ಪ್ರಧಾನಿ ಬೋರಿಸ್ ಜಾನ್ಸನ್​ ಇದೇ ತಿಂಗಳ ಅಂತ್ಯದಲ್ಲಿ ಅಮೆರಿಕ ಪ್ರವಾಸ ಕೈಗೊಳ್ತಿದ್ದಾರೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ವೈಟ್​​ಹೌಸ್​​ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭೇಟಿಯಾಗಿ ಚರ್ಚಿಸೋ ಸಾಧ್ಯತೆ ಇದೆ ಅಂತ ಮೂಲಗಳು ತಿಳಿಸಿವೆ. ಇನ್ನು ಪ್ರಧಾನಿ ಮೋದಿ ಕೂಡ ಇದೇ ತಿಂಗಳ 23-24ರಂದು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ ಅಂತ ಮೂಲಗಳು ತಿಳಿಸಿವೆ. ಈ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ರನ್ನು ಕೂಡ ಭೇಟಿಯಾಗೋ ಸಾಧ್ಯತೆ ಇದೆ. ಈ ಹಿಂದೆ 2019ರಲ್ಲಿ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ರು. ಹೌಡಿ ಮೋದಿ ಕಾರ್ಯಕ್ರಮದಲ್ಲಿ ಆಗ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್​​ರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು ಅಂತ ಕೂಡ ಕರೆ ನೀಡಿದ್ರು. ಒಂದ್ವೇಳೆ ಈ ತಿಂಗಳಾಂತ್ಯದಲ್ಲಿ ಹೋಗಿ ಜೋ ಬೈಡೆನ್ ಭೇಟಿಯಾದ್ರೆ, ಬೈಡೆನ್ ಅಧ್ಯಕ್ಷರಾದ ಬಳಿಕ ಉಭಯನಾಯಕರ ಮೊದಲ ಭೇಟಿ ಇದಾಗಲಿದೆ. ಅಂದಹಾಗೆ ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆ ಅಧಿವೇಶನ ಸೆಪ್ಟೆಂಬರ್ 14 ಅಂದ್ರೆ ನಾಳೆಯಿಂದಲೇ ಶುರುವಾಗಲಿದೆ. ಆದ್ರೆ ಕೊನೆಯ ವಾರ ಅಂದ್ರೆ ಸೆಪ್ಟೆಂಬರ್ 21ರಿಂದ 27 ತುಂಬಾ ಮಹತ್ವದ್ದಾಗಿದೆ. ಈ ಸಲ ವಿಡಿಯೋ ಸಂದೇಶ ಕಳುಹಿಸೋ ಬದಲು ಬಂದು ಅಧಿವೇಶನದಲ್ಲೇ ಭಾಗಿಯಾಗಿ ಅಂತ ಅಮೆರಿಕ 150 ದೇಶಗಳಿಗೆ ಮನವಿ ಮಾಡಿದೆ.

-masthmagaa.com

Contact Us for Advertisement

Leave a Reply