ಪುಟಿನ್‌ ಮೇಲಿನ ಮಿಸೈಲ್‌ ಬೆದರಿಕೆ ಆರೋಪ ಸುಳ್ಳು, ಬೋರಿಸ್‌ ಹೇಳಿದ್ದು ಸತ್ಯವಲ್ಲ: ರಷ್ಯಾ

masthmagaa.com:

ಇತ್ತೀಚೆಗೆ ವಿಶೇಷವಾದ ಫೋನ್‌ ಕಾಲ್‌ ಮೂಲಕ ರಷ್ಯಾ ಅಧ್ಯಕ್ಷ ಪುಟಿನ್ ಮಿಸೈಲ್‌ ದಾಳಿಯ ಬೆದೆರಿಕೆ ನೀಡಿದ್ರು ಅಂತ ಬ್ರಿಟನ್‌ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್‌ ಆರೋಪ ಮಾಡಿದ್ರು. ಇದಕ್ಕೆ ಕ್ರೆಮ್ಲಿನ್‌ ಅಂದ್ರೆ ಪುಟಿನ್‌ರ ಅರಮನೆ ಪ್ರತಿಕ್ರಿಯಿಸಿದ್ದು, ಬೋರಿಸ್‌ ಹೇಳಿರೋದು ಸುಳ್ಳು ಅಂತ ತಳ್ಳಿಹಾಕಿದೆ. ಜಾನ್ಸನ್‌ ಈ ರೀತಿ ಹೇಳಿದ್ದು ಯಾವ ಉದ್ದೇಶಕ್ಕೆ ಅನ್ನೋದು ಗೊತ್ತಿಲ್ಲ. ಪುಟಿನ್‌ ಅವರೊಂದಿಗೆ ಯಾವ ವಿಷಯದ ಬಗ್ಗೆ ಮಾತಾಡುತ್ತಿದ್ರು ಅನ್ನೊದು ಜಾನ್ಸನ್‌ ಅವ್ರಿಗೆ ಅರ್ಥವಾಗಿದೆಯಾ ಇಲ್ವಾ ಅನ್ನೊದನ್ನ ಜಾನ್ಸನ್‌ಗೆ ಕೇಳುವ ಅವಶ್ಯಕತೆಯಿದೆ ಅಂತ ಕ್ರೆಮ್ಲಿನ್‌ನ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಹೇಳಿದ್ದಾರೆ. ಜೊತೆಗೆ ಫೋನ್‌ ಕಾಲ್‌ನಲ್ಲಿ ಏನು ಚರ್ಚೆ ಮಾಡಲಾಗಿದೆ ಅನ್ನೊದು ನನಗೆ ಗೊತ್ತು. ಅದ್ರಲ್ಲಿ ಯಾವುದೇ ಮಿಸೈಲ್‌ ಬೆದರಿಕೆ ಇರ್ಲಿಲ್ಲ ಅಂತ ಹೇಳಿ ಪೆಸ್ಕೋವ್‌, ಬೋರಿಸ್‌ ಅವರ ಆರೋಪವನ್ನ ಸಂಪೂರ್ಣವಾಗಿ ಅಲ್ಲಗೆಳೆದಿದ್ದಾರೆ.

-masthmagaa.com

Contact Us for Advertisement

Leave a Reply