ರೂಪಾಂತರಿ ಕೊರೋನಾ ಆಟ: ಪ್ರೆಗ್ನೆನ್ಸಿ ಮುಂದೂಡಿ ಎಂದ ಸರ್ಕಾರ

masthmagaa.com:

ಬ್ರೆಜಿಲ್​ನಲ್ಲಿ ಕೊರೋನಾ ಹಾವಳಿ ಎಷ್ಟು ಮಿತಿ ಮೀರಿದೆ ಅಂದ್ರೆ ಸದ್ಯದ ಪರಿಸ್ಥಿತಿಯಲ್ಲಿ ಮಹಿಳೆಯರು ಪ್ರೆಗ್ನೆಂಟ್ ಆಗೋದನ್ನ ಮುಂದೂಡುವಂತೆ ಅಲ್ಲಿನ ಸರ್ಕಾರವೇ ಕರೆ ಕೊಟ್ಟಿದೆ. ಬ್ರೆಜಿಲ್​ನಲ್ಲಿ ಆರ್ಭಟಿಸುತ್ತಿರೋ P1 ಅನ್ನೋ ರೂಪಾಂತರಿ ವೈರಾಣು ಗರ್ಭಿಣಿಯರಿಗೆ ತೊಂದರೆ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮಹಾಮಾರಿಯ ಕೆಟ್ಟ ಸಮಯ ಕಳೆಯುವವರೆಗೆ ಗರ್ಭಧಾರಣೆಗೆ ಮುಂದಾಗಬೇಡಿ ಅಂತ ಬ್ರೆಜಿಲ್ ಸರ್ಕಾರ ಹೇಳಿದೆ. ಬ್ರೆಜಿಲ್​ನಲ್ಲಿ ಕಳೆದ ಕೆಲ ದಿನಗಳಿಂದ ಪ್ರತಿದಿನ 3ರಿಂದ 4 ಸಾವಿರ ಜನ ಮೃತಪಡುತ್ತಿದ್ದಾರೆ. ಜಗತ್ತಿನಲ್ಲಿ ಅತಿಹೆಚ್ಚು ಸಾವು ಸಂಭವಿಸುತ್ತಿರೋದು ಬ್ರೆಜಿಲ್​ನಲ್ಲೇ. ಅಲ್ಲಿನ ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದು, ಔಷಧ ಇಲ್ಲದೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಹಾಯ ಮಾಡುವಂತೆ ತನ್ನ ಮಿತ್ರ ರಾಷ್ಟ್ರಗಳ ಬಳಿ ಸಹಾಯಕ್ಕೆ ಕೈ ಚಾಚಿದೆ ಬ್ರೆಜಿಲ್.

-masthmagaa.com

Contact Us for Advertisement

Leave a Reply