ಮೋದಿ ಕ್ಯಾಬಿನೆಟ್​ ಮೀಟಿಂಗ್​: ಯಾವ ಕ್ಷೇತ್ರಕ್ಕೆ ಸಿಕ್ಕಿತು ಎಷ್ಟು ಕೋಟಿ!

masthmagaa.com:
ಪ್ರಧಾನಿ ಮೋದಿ ನೇತೃತ್ವದಲ್ಲಿ ಇವತ್ತು ಕೇಂದ್ರ ಸಚಿವ ಸಂಪುಟ ಸಭೆ ನಡೀತು. ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನ ತೆಗೆದುಕೊಳ್ಳಲಾಗಿದೆ.
– ದೇಶದಲ್ಲಿ ಸೆಮಿಕಂಡಕ್ಟರ್ಸ್ ಉತ್ಪಾದನೆಗೆ ಉತ್ತೇಜನ ನೀಡೋ ಉದ್ದೇಶದಿಂದ 76 ಸಾವಿರ ಕೋಟಿ ರೂಪಾಯಿ ಮೌಲ್ಯದ ಇನ್ಸೆಂಟಿವ್ ಸ್ಕೀಂ ಅನ್ನ ಘೋಷಿಸಲಾಗಿದೆ. 6 ವರ್ಷಗಳ ಈ ಪ್ರಾಜೆಕ್ಟ್​ ಮೇಲೆ 76 ಸಾವಿರ ಕೋಟಿ ಖರ್ಚು ಮಾಡಲಾಗುತ್ತೆ.
– ಇನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆಯನ್ನ 2021ರಿಂದ 2026ರವರೆಗೆ ಮುಂದುವರಿಸಲು​ ಕ್ಯಾಬಿನೆಟ್​ ಅನುಮೋದನೆ ಕೊಟ್ಟಿದೆ. ಇದಕ್ಕೆ 93 ಸಾವಿರ ಕೋಟಿ ವೆಚ್ಚವಾಗಲಿದೆ. ಸುಮಾರು 22 ಲಕ್ಷ ರೈತರಿಗೆ ಲಾಭವಾಗಲಿದೆ ಅಂತ ಅಂದಾಜಿಸಲಾಗಿದೆ.
– ಇನ್ನು ರೂಪೇ ಕಾರ್ಡ್ ಮತ್ತು BHIM UPI ಮೂಲಕ ಸಣ್ಣ ಮೊತ್ತದ ಡಿಜಿಟಲ್​ ಟ್ರಾನ್ಸಾಕ್ಷನ್ಸ್ ಅನ್ನ ಉತ್ತೇಜಿಸಲು ಇನ್ಸೆಂಟಿವ್​ ನೀಡುವ ಸ್ಕೀಂಗೆ ಅನುಮೋದನೆ ಕೊಡಲಾಗಿದೆ. ಇದಕ್ಕಾಗಿ 1,300 ಕೋಟಿ ಖರ್ಚಾಗಲಿದೆ.
-masthmagaa.com

Contact Us for Advertisement

Leave a Reply