ತಾಲಿಬಾನಿಗಳ ವಿರುದ್ಧ ನಿರ್ಬಂಧ ಹೇರಲು ಜಿ7ಗೆ ಬ್ರಿಟನ್ ಒತ್ತಾಯ

masthmagaa.com:

ಇವತ್ತು ಜಿ7 ರಾಷ್ಟ್ರಗಳು ಸಭೆ ಸೇರಲಿದ್ದು, ಇದ್ರಲ್ಲಿ ತಾಲಿಬಾನಿಗಳ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೇರಲು ಸದಸ್ಯ ದೇಶಗಳನ್ನು ಒತ್ತಾಯಿಸಲು ಬ್ರಿಟನ್ ಮುಂದಾಗಿದೆ. ಸದ್ಯ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಈ ಜಿ7 ಒಕ್ಕೂಟದ ಅಧ್ಯಕ್ಷತೆಯನ್ನು ಹೊಂದಿದ್ದಾರೆ. ಇದೊಂದು ಶ್ರೀಮಂತ ದೇಶಗಳ ಕೂಟವಾಗಿದ್ದು, ಇದ್ರಲ್ಲಿ ಅಮೆರಿಕ, ಫ್ರಾನ್ಸ್​, ಇಟಲಿ, ಜರ್ಮನಿ, ಜಪಾನ್ ಮತ್ತು ಕೆನಡಾ ಸದಸ್ಯತ್ವ ಹೊಂದಿವೆ. ಉಗ್ರರು ನೆಲೆಯಾಗಲು ತಾಲಿಬಾನ್ ಬಿಟ್ರೆ ಅಥವಾ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ರೆ ಜಿ7 ದೇಶಗಳು ಅಫ್ಘಾನಿಸ್ತಾನದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಬೇಕು. ಮತ್ತು ಆರ್ಥಿಕ ನೆರವನ್ನು ಕೂಡ ತಡೆಹಿಡಿಯಬೇಕು ಅಂತ ಬ್ರಿಟನ್ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ.

-masthmagaa.com

 

Contact Us for Advertisement

Leave a Reply