ಕಾಬೂಲ್​​ನಲ್ಲಿ ಉಗ್ರ ದಾಳಿ ಭೀತಿ! ಎಲ್ಲರೂ ವಾಪಸ್ ಹೋಗಿ ಅಂತ ಕರೆ!

masthmagaa.com:

ಅಮೆರಿಕದ ಡೆಡ್​ಲೈನ್ ಹತ್ತಿರ ಬರ್ತಿದ್ದಂತೆ ಕಾಬೂಲ್​ನ ಹಮೀದ್ ಖರ್ಝೈ ಏರ್​ಪೋರ್ಟ್​ ಕಡೆಗೆ ಸಾವಿರಾರು ಸಂಖ್ಯೆಯಲ್ಲಿ ಜನ ಬರ್ತಿದ್ದಾರೆ. ಆದ್ರೆ ಏರ್​ಪೋರ್ಟ್​ ಸುತ್ತಮುತ್ತಲಿನ ಪ್ರದೇಶದಿಂದ ಹೊರಟು ಹೋಗಿ. ಭಯೋತ್ಪಾದನೆ ದಾಳಿಯ ಸಾಧ್ಯತೆ ಇದೆ ಅಂತ ಪಾಶ್ಚಿಮಾತ್ಯ ಸೇರಿದಂತೆ ಹಲವು ದೇಶಗಳು ತಮ್ಮ ಪ್ರಜೆಗಳಿಗೆ ಎಚ್ಚರಿಕೆ ನೀಡಿವೆ. ಸದ್ಯ ಕಾಬೂಲ್​ ಏರ್​ಪೋರ್ಟ್​​ಗೆ ಯಾರೂ ಬರಬೇಡಿ. ಆ ಪ್ರದೇಶದಲ್ಲಿ ಇದ್ರೆ ಈಗಿಂದೀಗಲೇ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಆಗಿ.. ಮುಂದಿನ ಸೂಚನೆವರೆಗೆ ಕಾಯಿರಿ ಅಂತ ಎಚ್ಚರಿಕೆ ನೀಡಲಾಗಿದೆ. ಜಿ7 ಶೃಂಗಸಭೆಯಲ್ಲಿ ಜೋ ಬೈಡೆನ್ ಕೂಡ ಕಾಬೂಲ್ ಏರ್​ಪೋರ್ಟ್​ನಲ್ಲಿ ಇಸ್ಲಾಮಿಕ್ ಸ್ಟೇಟ್​ ಖೋರಾಸನ್ ಉಗ್ರರಿಂದ ಭಯೋತ್ಪಾದನೆ ದಾಳಿಯ ಅಪಾಯವಿದೆ ಅಂತ ಹೇಳಿದ್ರು. ಅಂದಹಾಗೆ ಇಸ್ಲಾಮಿಕ್ ಸ್ಟೇಟ್​​ನ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ವಿಭಾಗ ಈ ದೇಶಗಳಲ್ಲಿ ಕಳೆದ ಹಲವು ವರ್ಷಗಳಲ್ಲಿ ದೊಡ್ಡಮಟ್ಟದ ದಾಳಿಗೆ ಕಾರಣವಾಗಿದೆ. ಮಸೀದಿ, ಆಸ್ಪತ್ರೆ, ಸಾರ್ವಜನಿಕ ಸ್ಥಳ ಸೇರಿದಂತೆ ಹಲವೆಡೆ ದಾಳಿ ನಡೆಸಿ ಹಲವರನ್ನು ಬಲಿ ಪಡೆದುಕೊಂಡಿದೆ. ಸುನ್ನಿ ಮುಸ್ಲಿಮರಾದ ಈ ಸಂಘಟನೆಯವರು ಹೆಚ್ಚು ಟಾರ್ಗೆಟ್ ಮಾಡೋದು ಶಿಯಾ ಮುಸ್ಲಿಮರನ್ನು.. ಹಾಗೆ ನೋಡೋಕೆ ಹೋದ್ರೆ ಈ ತಾಲಿಬಾನಿಗಳು ಕೂಡ ಸುನ್ನಿ ಮುಸ್ಲಿಮರೇ.. ಆದ್ರೂ ತಾಲಿಬಾನ್ ಮತ್ತು ಅಫ್ಘಾನಿಸ್ಥಾನದ ಇಸ್ಲಾಮಿಕ್ ಸ್ಟೇಟ್ ಅಂದ್ರೆ ಇಸ್ಲಾಮಿಕ್ ಸ್ಟೇಟ್ ಖೊರಾಸನ್​​ಗೂ ಆಗಿ ಬರಲ್ಲ.. ಈ ಎರಡೂ ಸಂಘಟನೆಗಳು ಬದ್ಧ ವೈರಿಗಳಾಗಿವೆ. ಅಫ್ಘಾನಿಸ್ತಾನದ ಮತ್ತೊಂದು ಉಗ್ರ ಸಂಘಟನೆ ಹಕ್ಕಾನಿ ಗ್ರೂಪ್​ ತಾಲಿಬಾನ್​​ಗೆ ಸಪೋರ್ಟ್ ಮಾಡಿದ್ರೆ, ಈ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ತಾಲಿಬಾನ್ ವಿರೋಧಿಗಳಿಗೆ ಸಪೋರ್ಟ್ ಮಾಡಿಕೊಂಡು ಬಂದಿದೆ.

-masthmagaa.com

Contact Us for Advertisement

Leave a Reply