ಅಫ್ಘಾನಿಸ್ತಾನವನ್ನು ಬ್ಲಾಕ್​ಲಿಸ್ಟ್​ಗೆ ಸೇರಿಸಲು ಬ್ರಿಟನ್ ಪ್ಲಾನ್!

masthmagaa.com:

ತಾಲಿಬಾನ್ ಟೇಕೋವರ್ ಬಳಿಕ ಅಫ್ಘಾನಿಸ್ತಾನವನ್ನು ಬ್ಲಾಕ್​ಲಿಸ್ಟ್​​ಗೆ ಸೇರಿಸಲು ಬ್ರಿಟನ್ ಸರ್ಕಾರ ಪ್ಲಾನ್ ಮಾಡ್ತಿದೆ. ಒಂದು ವೇಳೆ ಅಫ್ಘಾನಿಸ್ತಾನವನ್ನು ಬ್ಲಾಕ್​ಲಿಸ್ಟ್​​ಗೆ ಸೇರಿಸಿದ್ರೆ, ಆ ದೇಶಕ್ಕೆ ಹೋಗೋಕೆ ಅನುಮತಿ ಇರೋದಿಲ್ಲ. ಒಂದು ವೇಳೆ ಯಾರಾದ್ರೂ ಪ್ರಜೆಗಳು ಅಫ್ಘಾನಿಸ್ತಾನಕ್ಕೆ ಹೋಗಿ ಬಂದಿದ್ದು ಸಾಬೀತಾದ್ರೆ 10 ವರ್ಷ ಜೈಲು ಶಿಕ್ಷೆ ವಿಧಿಸೋಕೆ ಅವಕಾಶ ಇರುತ್ತೆ. ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ಮೇಲೆ ಹಲವು ನಿರ್ಬಂಧಗಳನ್ನು ಹೇರೋ ಆಯ್ಕೆ ನಮ್ಮ ಮುಂದಿದ್ದು, ಅವುಗಳಲ್ಲಿ ಇದೂ ಒಂದಾಗಿದೆ ಅಂತ ಸರ್ಕಾರ ತಿಳಿಸಿದೆ.

-masthmagaa.com

Contact Us for Advertisement

Leave a Reply