ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಕಿರುಕುಳ: ಬ್ರಿಟನ್ ಸಂಸದೀಯ ಸಮಿತಿ ಟೀಕೆ

masthmagaa.com:

ಪಾಕಿಸ್ತಾನದಲ್ಲಿರುವ ಹಿಂದೂಗಳು ಸೇರಿದಂತೆ ಅಲ್ಪ ಸಂಖ್ಯಾತರಿಗೆ ಕಿರುಕುಳ ಕೊಡ್ತಾ ಇರೋದನ್ನ ಬ್ರಿಟಿಷ್‌ ಸಂಸದೀಯ ಕಮಿಟಿ ಖಂಡಿಸಿದೆ. ಪಾಕಿಸ್ತಾನದಲ್ಲಿ ಹಿಂದೂ, ಕ್ರಿಶ್ಚಿಯನ್‌, ಸಿಖ್ಖ್‌, ಬೌದ್ದರು, ಅಹಮದೀ ಮುಸ್ಲೀಮರು ಸೇರಿ ಕೆಲವೊಂದು ಧಾರ್ಮಿಕ ಅಲ್ಪಸಂಖ್ಯಾತರಿದ್ದಾರೆ. ಇವರ ಮೇಲೆ ಪದೇ ಪದೇ ಬೇರೆ ಬೇರೆ ವಿಚಾರಕ್ಕೆ ದಾಳಿ ನಡೆಯುತ್ತಲೆ ಇರುತ್ತೆ. ಇದನ್ನ ತಡೆಯಲು ರಾಜತಾಂತ್ರಿಕ ಮಾತುಕತೆಗೆ ಜೊತೆಗೆ ಯುನೈಟೆಡ್‌ ಕಿಂಗ್ಡಮ್‌ ಸಹಾಯ ಮಾಡೋದಾಗಿ ಹೇಳಿದೆ. ಹಾಗೆ ಧರ್ಮ ನಿಂದನೆಯ ಆರೋಪದ ಮೇಲೆ ಯಾವುದೇ ಆಧಾರವಿಲ್ಲದೆ ಧಾರ್ಮಿಕ ಅಲ್ಪ ಸಂಖ್ಯಾತರನ್ನ ಶಿಕ್ಷೆಗೆ ಒಳಪಡಿಸಲಾಗ್ತಇದೆ. ಇದೆಲ್ಲದ್ರ ಕುರಿತು ತನಿಖೆ ನಡಿಬೇಕು ಅಂತ ಯುಕೆ ಪಾಕಿಸ್ತಾನಕ್ಕೆ ಆಗ್ರಹಿಸಿದೆ.

-masthmagaa.com

Contact Us for Advertisement

Leave a Reply