ಬ್ರಿಟಿಷ್ ಅಧಿಕಾರಿಗಳ ಜೊತೆ ತಾಲಿಬಾನ್ ಮೀಟಿಂಗ್!

masthmagaa.com:

ಬ್ರಿಟಿಷ್ ಹಿರಿಯ ಅಧಿಕಾರಿಗಳು ತಾಲಿಬಾನಿಗಳ ಜೊತೆಗೆ ಕಾಬೂಲ್​​ನಲ್ಲಿ ಸಭೆ ನಡೆಸಿದ್ದಾರೆ. ವಿದೇಶಿ ಪಡೆಗಳು ಹೊರಹೋದ ಬಳಿಕ ನಡೆದ ಮೊದಲ ಸಭೆ ಇದಾಗಿದೆ. ಸಭೆ ಬಳಿಕ ಫೋಟೋವನ್ನು ಟ್ವೀಟ್ ಮಾಡಿರೋ ತಾಲಿಬಾನ್, ಅಫ್ಘಾನಿಸ್ತಾನದಲ್ಲಿ ಬ್ರಿಟನ್ ವಿಶೇಷ ಪ್ರತಿನಿಧಿಯಾಗಿರೋ ಸಿಮನ್ ಗ್ಯಾಸ್, ಅಫ್ಘಾನಿಸ್ತಾನದ ಉಪ ಪ್ರಧಾನಿಯಾದ ಅಬ್ದುಲ್ ಘನಿ ಬರಾದರ್ ಮತ್ತು ಅಬ್ದುಲ್ ಸಲಾಂ ಹನಾಫಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಅಂತ ಮಾಹಿತಿ ನೀಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಬಂದಿರೋ ಹೊಸ ಸರ್ಕಾರ ಅಂತಾರಾಷ್ಟ್ರೀಯವಾಗಿ ಮೂಲೆಗುಂಪಾಗೋ ಅಪಾಯ ಇದೆ. ಇದ್ರ ನಡುವೆಯೇ ಈ ಮೀಟಿಂಗ್ ನಡೆದಿದ್ದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಅಂದಹಾಗೆ ಆಗಸ್ಟ್​ 15ರಂದು ಅಫ್ಘಾನಿಸ್ತಾನವನ್ನು ಕಂಪ್ಲೀಟಾಗಿ ಓವರ್​​ಟೇಕ್ ಮಾಡಿರೋ ತಾಲಿಬಾನಿಗಳು ಸರ್ಕಾರವನ್ನೇನೋ ರಚಿಸಿದ್ದಾರೆ. ಆದ್ರೆ 20 ವರ್ಷಗಳ ಕಾಲ ವಿದೇಶಿ ನೆರವಿನಿಂದಲೇ ಉಸಿರಾಡಿದ್ದ ಅಫ್ಘಾನಿಸ್ತಾನಕ್ಕೆ ಈಗ ಅಂತಾರಾಷ್ಟ್ರೀಯ ನೆರವು ಬಂದ್ ಆಗಿದೆ. ಯಾರೂ ಸಹಾಯ ಮಾಡೋಕೆ ಮುಂದಾಗ್ತಿಲ್ಲ. ಎಷ್ಟರ ಮಟ್ಟಿಗೆ ಅಂದ್ರೆ ದೇಶದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ನಾಗರಿಕ ಸೇವಾ ಅಧಿಕಾರಿಗಳಿಗೆ ಸಂಬಳ ಕೊಡೋಕೂ ದುಡ್ಡಿಲ್ಲದ ಪರಿಸ್ಥಿತಿ ಇದೆ. ಹೀಗಾಗಿ ತಾಲಿಬಾನಿಗಳು ದೇಶಕ್ಕೆ ಆರ್ಥಿಕ ನೆರವು ಮತ್ತೆ ಮೊದಲಿನಂತೆ ಬರುವಂತೆ ಮಾಡೋಕೆ ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಮನವೊಲಿಕೆಗೆ ಯತ್ನಿಸ್ತಿದ್ದಾರೆ. ಈ ಸಭೆ ಕೂಡ ಅದರದ್ದೇ ಭಾಗವಾಗಿದೆ. ಈ ಮಹತ್ವದ ಸಭೆ ಬಳಿಕ ತಾಲಿಬಾನಿಗಳು ವಶಕ್ಕೆ ಪಡೆದಿದ್ದ ಮಾಜಿ ಬ್ರಿಟಿಷ್ ಯೋಧನನ್ನು ಬಿಡುಗಡೆ ಮಾಡಿದ್ದಾರೆ. ಬೆನ್ ಸ್ಲೇಟರ್ ಕೂಡ ಬ್ರಿಟಿಷ್ ಅಧಿಕಾರಿಗಳ ಜೊತೆಗೆ ದೋಹಾಗೆ ಪ್ರಯಾಣ ಬೆಳೆಸಿದ್ದಾರೆ.

-masthmagaa.com

Contact Us for Advertisement

Leave a Reply