ಪ್ರಧಾನಿ ಮನೆಯನ್ನೇ ಬಾಡಿಗೆಗೆ ಕೊಟ್ಟ ಪಾಕಿಸ್ತಾನ!

masthmagaa.com:

ಯಾವಾಗ ನೋಡಿದ್ರೂ ಉಗ್ರರಿಗೆ ಬೆಂಬಲ ನೀಡೋ ಪಾಕಿಸ್ತಾನ ಆರ್ಥಿಕವಾಗಿ ಎಂಥಾ ದಾರಿದ್ರ್ಯದ ಸ್ಥಿತಿಗೆ ಬಂದು ನಿಂತಿದೆ ಅಂತ ಈ ಸುದ್ದಿ ನೋಡಿದ್ರೆ ನಿಮಗೇ ಅರ್ಥವಾಗುತ್ತೆ. ನಿರಂತರವಾಗಿ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರೋ ಪಾಕಿಸ್ತಾನ ಇಸ್ಲಾಮಾಬಾದ್​​ನಲ್ಲಿರೋ ಪ್ರಧಾನ ಮಂತ್ರಿಯ ಅಧಿಕೃತ ನಿವಾಸವನ್ನೇ ಬಾಡಿಗೆಗೆ ಕೊಟ್ಟಿದೆ. 2019ರ ಆಗಸ್ಟ್​ನಲ್ಲಿ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಸರ್ಕಾರ ಪ್ರಧಾನ ಮಂತ್ರಿಯ ನಿವಾಸವನ್ನು ಯುನಿವರ್ಸಿಟಿಯಾಗಿ ಬದಲಿಸ್ತೀವಿ ಅಂತ ಘೋಷಿಸಿತ್ತು. ಇದ್ರ ಬೆನ್ನಲ್ಲೇ ಇಮ್ರಾನ್ ಖಾನ್ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಕೂಡ ಮಾಡಿದ್ರು. ಆದ್ರೆ ಈಗ ವಿಶ್ವವಿದ್ಯಾಲಯ ಯೋಜನೆ ಕೈಬಿಟ್ಟಿರೋ ಸರ್ಕಾರ ಪ್ರಧಾನ ಮಂತ್ರಿ ನಿವಾಸವನ್ನು ಬಾಡಿಗೆಗೆ ನೀಡಿದೆ. ಅಂದ್ರೆ ಇಲ್ಲಿ ಯಾರೆಲ್ಲಾ ಸಾಂಸ್ಕೃತಿಕ, ಫ್ಯಾಷನ್, ಶೈಕ್ಷಣಿಕ ಮತ್ತು ಇತರೆ ಕಾರ್ಯಕ್ರಮಗಳನ್ನು ಆಯೋಜಿಸುವವರಿಗೆ ಬಾಡಿಗೆಗೆ ನೀಡಲು ನಿರ್ಧರಿಸಲಾಗಿದೆ. ಇದೇ ಉದ್ದೇಶಕ್ಕಾಗಿ ಸಮಿತಿಯೊಂದನ್ನು ಕೂಡ ರಚಿಸಲಾಗಿದೆ. ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಾಗ ಪ್ರಧಾನ ಮಂತ್ರಿ ನಿವಾಸದ ರೂಲ್ಸ್ ಮತ್ತು ಘನತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳೋದು ಈ ಸಮಿತಿಯ ಕೆಲಸವಾಗಿದೆ. ಹಾಗಂತ ಇಡೀ ನಿವಾಸವನ್ನೇ ಬಾಡಿಗೆಗೆ ಕೊಟ್ಟು ಬಿಡೋದಿಲ್ಲ.. ಬದಲಿಗೆ ಕೆಲವೊಂದು ಭಾಗಗಳನ್ನು ಮಾತ್ರವೇ ಈ ರೀತಿ ಬಾಡಿಗೆಗೆ ನೀಡಲಾಗುತ್ತೆ. ಆಡಿಟೋರಿಯಂ, 2 ಗೆಸ್ಟ್​ ವಿಂಗ್ ಮತ್ತು ಒಂದು ಲಾನ್​​ನ್ನು ಬಾಡಿಗೆಗೆ ನೀಡಲು ನಿರ್ಧರಿಸಲಾಗಿದೆ. ಅಂದಹಾಗೆ ಪಾಕಿಸ್ತಾನದ ಬಳಿ ದುಡ್ಡಿಲ್ಲ ಅಂತ ನಾವ್ ಹೇಳ್ತಿಲ್ಲ.. ಇಮ್ರಾನ್ ಖಾನ್ ಪ್ರಧಾನಿಯಾದಾಗ ಅವರೇ ಹೇಳಿದ್ದ ಮಾತಿದು.. ಸರ್ಕಾರದ ಬಳಿ ಜನಪರ ಕಾರ್ಯಕ್ರಮಗಳಿಗೆ ದುಡ್ಡೇ ಇಲ್ಲ. ಇಂಥಹ ಪರಿಸ್ಥಿತಿಯಲ್ಲೂ ಜಗತ್ತಿನ ಕೆಲವರು ಮಾತ್ರ ವಸಾಹತುಶಾಹಿ ಮಾಲೀಕರ ರೀತಿ ಜಾಮ್ ಜೂಮಾಗಿ ಬದುಕ್ತಿದ್ದಾರೆ ಅಂತ ಹೇಳಿದ್ರು. ಇದಾದ ಬಳಿಕ ಇಮ್ರಾನ್ ಖಾನ್ ತಮ್ಮದೇ ನಿವಾಸದಲ್ಲಿ ವಾಸಿಸೋಕೆ ಶುರು ಮಾಡಿದ್ರು. ಪ್ರಧಾನ ಮಂತ್ರಿ ಕಚೇರಿಯನ್ನು ಮಾತ್ರವೇ ಬಳಸಿಕೊಳ್ತಿದ್ರು. ದೇಶದ ಅರ್ಥಿಕತೆ ಸುಧಾರಿಸಲು ಹಲವಾರು ರೀತಿಯಲ್ಲಿ ಸರ್ಕಾರಿ ವೆಚ್ಚಗಳನ್ನು ಕಡಿತಗೊಳಿಸಿದ್ರು. ಹಲವಾರು ಕ್ರಮ ಕೈಗೊಂಡ್ರು. ಆದ್ರೂ ಕೂಡ ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದ ಬಳಿಕ ಪಾಕ್ ಆರ್ಥಿಕತೆ ಸುಧಾರಿಸಿಲ್ಲ. ಬದಲಿಗೆ ಕಳೆದ ಮೂರು ವರ್ಷಗಳ ಇವರ ಅಧಿಕಾರಾವಧಿಯಲ್ಲಿ ಪಾಕಿಸ್ತಾನದ ಆರ್ಥಿಕತೆಯು 19 ಬಿಲಿಯನ್ ಡಾಲರ್​​ನಷ್ಟು ಕುಸಿತ ಕಂಡಿದೆ. ಇತ್ತೀಚೆಗಷ್ಟೇ ಮಾಜಿ ಹಣಕಾಸು ಸಚಿವ ಮಿಫ್ತಾ ಇಸ್ಮೈಲ್​, ಪಾಕ್ ಪ್ರಧಾನಿ ಇಮ್ರಾನ್ ಖಾನ್ ದೇಶದ ಆರ್ಥಿಕತೆ ಜೊತೆಗೆ ಆಟವಾಡ್ತಿದ್ದಾರೆ. ಸರ್ಕಾರ ಮತ್ತು ಇತರೆ ಸರ್ಕಾರಿ ಸಂಸ್ಥೆಗಳ ಒಟ್ಟು ಸಾಲ 45,00,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಅಂತ ಆರೋಪಿಸಿದ್ರು.

-masthmagaa.com

Contact Us for Advertisement

Leave a Reply