ಸದ್ಯಕ್ಕಿಲ್ಲ ಬಳ್ಳಾರಿ ವಿಭಜನೆ.. ಈ ನಿರ್ಧಾರಕ್ಕೆ ಕಾರಣ ಏನು..?

ಬಳ್ಳಾರಿ ವಿಭಜಿಸಿ ವಿಜಯನಗರ ಜಿಲ್ಲೆ ರಚನೆ ನಿರ್ಧಾರವನ್ನು ಸದ್ಯಕ್ಕೆ ಕೈಬಿಡಲಾಗಿದೆ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬಳ್ಳಾರಿ ಜನಪ್ರತಿನಿಧಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಉಪಚುನಾವಣೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಉಪಚುನಾವಣೆ ಬಳಿಕ ಜಿಲ್ಲೆ ವಿಭಜನೆಗೆ ಕೈ ಹಾಕೋ ಸಾಧ್ಯತೆ ಇದೆ. ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಈ ಸಭೆಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಶಾಸಕರಾದ ಶ್ರೀರಾಮುಲು, ಕರುಣಾಕರ ರೆಡ್ಡಿ, ಅನರ್ಹ ಶಾಸಕ ಆನಂದ್ ಸಿಂಗ್, ಸೋಮಶೇಖರ್ ರೆಡ್ಡಿ, ನಾಗೇಂದ್ರ, ಭೀಮಾನಾಯ್ಕ್, ಅಲ್ಲಂ ವೀರಭದ್ರಪ್ಪ, ಕೆ.ಸಿ ಕೊಂಡಯ್ಯ ಭಾಗಿಯಾಗಿದ್ರು. ಆದ್ರೆ ಶಾಸಕರಾದ ತುಕಾರಾಂ ಮತ್ತು ಕಂಪ್ಲಿ ಶಾಸಕ ಗಣೇಶ್ ಈ ಸಭೆಗೆ ಗೈರಾಗಿದ್ರು. ಮಧ್ಯಾಹ್ನ 3.30ಕ್ಕೆ ಸಭೆ ನಿಗದಿಪಡಿಸಲಾಗಿತ್ತು. ಆದ್ರೆ ಅನರ್ಹ ಶಾಸಕ ಆನಂದ್ ಸಿಂಗ್ ಅಂತೂ ಅರ್ಧ ಗಂಟೆ ಮೊದಲೇ ಬಂದು ಕಾಯುತ್ತಿದ್ದರು.

Contact Us for Advertisement

Leave a Reply