ಬಿಜೆಪಿಯಲ್ಲಿ ಲಿಂಗಾಯತರ ಕಡೆಗಣನೆ: ಬಿಎಸ್​ವೈ ಆಪ್ತ ಸಿಡಿಮಿಡಿ

ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಅಂತ ಸಿಎಂ ಬಿ.ಎಸ್.ಯಡಿಯೂರಪ್ಪ ಬೆಂಬಲಿಗ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ಯಡಿಯೂರಪ್ಪ ಬೆಂಬಲಿಗ ನಂಜುಂಡಸ್ವಾಮಿ, ಲಿಂಗಾಯರು ಬಿಎಸ್​ವೈ ಕಡೆಯವರು ಅನ್ನೋ ಕಾರಣಕ್ಕೆ ನಮಗೆ ಕಚೇರಿ ಪ್ರವೇಶಕ್ಕೂ ಅವಕಾಶ ನೀಡುತ್ತಿಲ್ಲ. ಬಿಜೆಪಿ ಕಚೇರಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನೂ ಲಿಂಗಾಯತ ಎಂಬ ಕಾರಣಕ್ಕೆ ತೆಗೆಯಲಾಗಿದೆ. ಈ ಮೂಲಕ ಬಿಎಸ್​​ವೈ ಬೆಂಬಲಿಗರನ್ನು ಟಾರ್ಗೆಟ್​ ಮಾಡಲಾಗ್ತಿದೆ ಎಂದು ಕಿಡಿಕಾರಿದ್ದಾರೆ. ನಾವು ಈವರೆಗೆ 10-12 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದೇವೆ. ಯಡಿಯೂರಪ್ಪ ಸಿಎಂ ಆದ ಬಳಿಕ ಎಲ್ಲರೂ ಒಳ್ಳೆಯದಾಗುತ್ತೆ ಎಂದು ಭಾವಿಸಿದ್ದೆವು. ಆದ್ರೆ ಬಿಎಸ್​​ವೈ ಸಿಎಂ ಆದ ಬಳಿಕ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ. ಅಧ್ಯಕ್ಷರ ಬದಲಾವಣೆ ಬೆನ್ನಲ್ಲೇ  ಲಿಂಗಾಯತರನ್ನು ನಿರ್ಲಕ್ಷಿಸಲು ಆರಂಭಿಸಲಾಯ್ತು ಎಂದು ಆರೋಪಿಸಲಾಗಿದೆ.

 

Contact Us for Advertisement

Leave a Reply