ಅತ್ಯಾಚಾರ ಆರೋಪದಡಿ ಅಂದರ್‌ ಆದ ನೇಪಾಳದ “ಬುದ್ದ ಬಾಯ್”!

masthmagaa.com:

ಬುದ್ದನ ಹೆಸರಲ್ಲಿ ಇಂಟರ್‌ ನ್ಯಾಷನಲ್‌ ಲೆವೆಲ್‌ನಲ್ಲಿ ಹೆಸರಾಗಿದ್ದ ವ್ಯಕ್ತಿ ಇದೀಗ ಅತ್ಯಾಚಾರದ ಆರೋಪದಡಿ ನೇಪಾಳದ ತನಿಖಾ ದಳ, CIB ಬಲೆಗೆ ಬಿದ್ದಿದ್ದಾನೆ. ರಾಮ್‌ ಬಹದೂರ್‌ ಬೊಮ್‌ಜಾನ್‌ ಅನ್ನೊ 33 ವರ್ಷದ ವ್ಯಕ್ತಿ ಬುದ್ದನ ಪತ್ರಿರೂಪದಂತೆ ವರ್ತಿಸಿ ಜನರನ್ನ ಮರುಳು ಮಾಡ್ತಿದ್ದ. ಇದೀಗ ಈ ಭೂಪನ ವಿಕೃತ ಕೆಲ್ಸಗಳು ಬಯಲಾಗಿ ಈತನ ಭಕ್ತರಿಗೆ ದಿಗಿಲು ಬಡ್ದಂಗಾಗಿದೆ. ಈ ಭೂಪ ಹಲವು ದಿನಗಳವರೆಗೆ ನೀರು, ಆಹಾರ ಇಲ್ದೇನೇ ಧ್ಯಾನ ಮಾಡ್ತಿದ್ದ ಅಂತ 2005ರ ಟೈಮಲ್ಲಿ ಭಾರಿ ಸದ್ದು ಮಾಡಿದ್ದ. ಆಧ್ಯಾತ್ಮದ ಹೆಸರಲ್ಲಿ ಭಕ್ತರನ್ನ ಬುಟ್ಟಿಗೆ ಹಾಕೋಳ್ತಿದ್ದ ಈತ ನೇಪಾಳದ ಕಾಡಿನಲ್ಲಿ 1 ಲಕ್ಷಕ್ಕೂ ಅಧಿಕ ಜನರಿಗೆ ಧ್ಯಾನ ಮಾಡೋದನ್ನ ಹೇಳಿಕೊಡ್ತಿದ್ನಂತೆ. ಆದ್ರೆ ಸದ್ಯ ಈತ ಅತ್ಯಾಚಾರ ಹಾಗೂ ಲೈಂಗಿಕ ನಿಂದನೆ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಪೊಲೀಸರು ಮನೆಯೊಂದ್ರ ಮೇಲೆ ದಾಳಿ ನಡೆಸಿದಾಗ ಈತ ಕಿಟಕಿ ಹಾರಿ ಎಸ್ಕೇಪ್‌ ಆಗೋಕೆ ಟ್ರೈ ಮಾಡ್ತಿದ್ದಾಗ ಲಾಕ್‌ ಆಗಿದ್ದಾನೆ.

-masthmagaa.com

Contact Us for Advertisement

Leave a Reply