ಬಜೆಟ್‌ನಲ್ಲಿ ಆಹಾರ, ರಸಗೊಬ್ಬರಗಳಿಗೆ ₹4 ಲಕ್ಷ ಕೋಟಿ ಸಬ್ಸಿಡಿ!

masthmagaa.com:

ಮುಂದಿನ ತಿಂಗಳು ಬಿಜೆಪಿ ಸರ್ಕಾರ ಈ ಅವಧಿಯ ಕೊನೆಯ ಬಜೆಟ್‌ನ್ನ ಘೋಷಿಸಲಿದೆ. ಅದ್ರಲ್ಲಿ 48 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 4 ಲಕ್ಷ ಕೋಟಿ ರೂಪಾಯಿಯನ್ನ ಆಹಾರ ಹಾಗೂ ರಸಗೊಬ್ಬರಗಳಿಗೆ ಸಬ್ಸಿಡಿ ಕೊಡೊಕೆ ಎತ್ತಿಡಲಾಗುತ್ತೆ ಅಂತ ಹೇಳಲಾಗ್ತಿದೆ. ಮಾರ್ಚ್‌ 31 ರಂದು ಅಂತ್ಯವಾಗುವ 2023-24ರ ಒಟ್ಟು ಬಜೆಟ್‌ ವೆಚ್ಚದಲ್ಲಿ ಅಂದ್ರೆ 45 ಲಕ್ಷ ಕೋಟಿ ರೂಪಾಯಿಯಲ್ಲಿ ಸುಮಾರು 9ನೇ ಒಂದು ಭಾಗ (1/9) ಆಹಾರ ಹಾಗೂ ರಸಗೊಬ್ಬರಗಳ ಮೇಲಿನ ಸಬ್ಸಿಡಿ ಕೊಡುಗೆ ನೀಡುತ್ತೆ ಹೇಳಲಾಗಿದೆ. ಜೊತೆಗೆ ಮುಂದಿನ ಆರ್ಥಿಕ ವರ್ಷದಲ್ಲಿ ಫುಡ್‌ ಸಬ್ಸಿಡಿ 2.2 ಲಕ್ಷ ಕೋಟಿ ರೂಪಾಯಿ ಇರಲಿದೆ ಅಂತ Consumer Affairs, Food and Public Distribution ಸಚಿವಾಲಯ ಅಂದಾಜಿಸಿದೆ. ಇದು 2023-24ರಲ್ಲಿ ಪ್ರೊಜೆಕ್ಟ್‌ ಮಾಡಿದ್ದ 2 ಲಕ್ಷ ಕೋಟಿ ರೂಪಾಯಿಗಿಂತ 10% ಜಾಸ್ತಿಯಿದೆ. ಇದೇ ವೇಳೆ ಅಂದ್ರೆ ಮುಂದಿನ ಆರ್ಥಿಕ ವರ್ಷದಲ್ಲಿ ರಸಗೊಬ್ಬರಗಳ ಮೇಲಿನ ಸಬ್ಸಿಡಿ 1.75 ಲಕ್ಷ ಕೋಟಿ ರೂಪಾಯಿ ಇರಲಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply