ಬಜೆಟ್ ಅಂದ್ರೆ ಏನು..? ರೆಡಿಯಾಗೋ ಹಂತಗಳು ಯಾವುದು ಗೊತ್ತಾ..?

ಹಾಯ್ ಫ್ರೆಂಡ್ಸ್.. ಬಜೆಟ್ ಅಥವಾ ಆಯವ್ಯಯ ಅಂದರೆ ಏನು..? ಬಜೆಟ್ ಅನ್ನೋ ಹೆಸರು ಬಂದಿದ್ದು ಹೇಗೆ..? ಸರ್ಕಾರದ ಹಣೆಬರಹ ಬರೆಯೋ ಬಜೆಟ್ ರೆಡಿಯಾಗುವುದು ಹೇಗೆ..? ಬಜೆಟ್ ಹಲ್ವಾ ಪ್ರೋಗ್ರಾಂ ಅಂದ್ರೆ ಏನು ಗೊತ್ತಾ..? ಎಲ್ಲವನ್ನು ಡೀಟೇಲಾಗೆ ಹೇಳ್ತೀವಿ ನೋಡಿ..

ಬಜೆಟ್ ಅನ್ನೋ ಪದವು ಬೊಗೆಟ್ ಅನ್ನೋ ಫ್ರೆಂಚ್ ಪದದಿಂದ ಬಂದಿದೆ. ಬೊಗೆಟ್ ಎಂದರೆ ಚರ್ಮದ ಕೈಚೀಲ ಎಂದರ್ಥ. 1773 ರಲ್ಲಿ ಬ್ರಿಟನ್ನಲ್ಲಿ ಮೊದಲಬಾರಿಗೆ ಈ ಪದ ಬಳಕೆಯಾಯಿತು. ಅಂದಿನ ಹಣಕಾಸು ಸಚಿವ ವಾಲ್ಫೋಲ್, ಹಣಕಾಸಿಗೆ ಸಂಬಂಧಿಸಿದ ಯೋಜನೆ ಮಂಡಿಸಲು ಬೊಗೆಟ್ ಅಥವಾ ಲೆದರ್ ಬ್ಯಾಗ್ ನಲ್ಲಿ ಲೆಕ್ಕಪತ್ರ ತಂದಿದ್ದರು. ಹೀಗಾಗಿ ಇಲ್ಲಿಂದ ಮುಂದೆ ಬಜೆಟ್ ಎಂಬ ಪದ ಬಳಕೆಗೆ ಬಂತು.

ಬಜೆಟ್.. ಪ್ರತಿ ಸಾರಿ ಬಜೆಟ್ ಬಂದಾಗ ಇಡೀ ದೇಶದ ಗಮನ ಅದರತ್ತ ಇರುತ್ತೆ.. ಈ ಸರಿ ಬಜೆಟ್ನಲ್ಲಿ ನಮಗೂ ಏನಾದರೂ ಸಿಗಬಹುದು ಅಂತ ಆಸೆ ಇಟ್ಕೊಂಡು ಜನ ಕಾಯುತ್ತಾರೆ. ಹೀಗಾಗಿ ಸರ್ಕಾರದ ಯಶಸ್ಸು ಬಜೆಟ್ ಮೇಲೆ ಡಿಪೆಂಡ್ ಆಗಿರುತ್ತೆ.. ಸರ್ಕಾರದ ಬಜೆಟ್, ಯೋಜನೆಗಳು ಅವುಗಳ ಜಾರಿ ತುಂಬಾ ಮುಖ್ಯ. ಇವುಗಳನ್ನು ನೋಡಿಯೇ ಜನ ಓಟ್ ಹಾಕುತ್ತಾರೆ.. ಹೀಗಾಗಿ ಬಜೆಟ್ಟನ್ನು ಒಟ್ಟಾರೆಯಾಗಿ ಮಾಡಕ್ಕೆ ಆಗಲ್ಲ.. ಅದಕ್ಕಂತಾನೇ ಹಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.. ಅದು ಏನೇನು ಅಂತ step-by-step ನಾವು ನಿಮಗೆ ವಿವರಿಸ್ತಾ ಹೋಗ್ತಿವಿ.. ಈ ವಿಡಿಯೋ ಕೊನೆತನಕ ನೋಡಿ…

ಬಜೆಟ್ ಅಂದರೆ ಏನು..? 
ಸರ್ಕಾರದ ಒಂದು ವರ್ಷದ ಕಾರ್ಯಕ್ರಮಗಳು ಆದಾಯ ಸಂಗ್ರಹ, ಖರ್ಚುವೆಚ್ಚ, ವಿವಿಧ ಕ್ಷೇತ್ರಗಳಿಗೆ ಆದಾಯ ಹಂಚಿಕೆಯ ಅಂದಾಜು ಲೆಕ್ಕವನ್ನು ಬಜೆಟ್ ಎನ್ನಬಹುದು..

ಐದಾರು ತಿಂಗಳು ಮೊದಲೇ ಶುರುವಾಗುತ್ತೆ ಸಿದ್ಧತೆ..! 
ಬಜೆಟ್ ಅಂದ್ರೆ ಒಂದೆರಡು ದಿನಕ್ಕೆ ಆಗಿ ಹೋಗುವಂಥದ್ದಲ್ಲ.. ಇದಕ್ಕೆ ದೊಡ್ಡದಾದ ಪ್ರೊಸೀಜರ್ ಇದೆ. ಸುಮಾರು ಐದಾರು ತಿಂಗಳು ಮೊದಲು ಅಂದ್ರೆ ಆಗಸ್ಟ್ ತಿಂಗಳ ಕೊನೆಯಲ್ಲಿ ಅಥವಾ ಸೆಪ್ಟೆಂಬರ್ ಫಸ್ಟ್ ವಾರದಲ್ಲಿ ಬಜೆಟ್ ಗೆ ಸಿದ್ಧತೆ ಶುರುವಾಗುತ್ತೆ. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಬಜೆಟ್ಗೆ ಅಂತಾನೆ ಪ್ರತ್ಯೇಕ ವಿಭಾಗ ಇರುತ್ತೆ.. ಬಜೆಟ್ ಸುತ್ತೋಲೆ ಹೊರಡಿಸಿ ಪ್ರತಿ ಇಲಾಖೆಯಿಂದ ಬೇಕಾದ ಮಾಹಿತಿ, ಸಲಹೆ ಸೂಚನೆಗಳನ್ನು ಕೇಳಲಾಗುತ್ತೆ..

ಇಲಾಖೆಗಳ ಕೆಲಸವೇನು..? 
ಬಜೆಟ್ ಸುತ್ತೋಲೆ ಬಂದಕೂಡಲೇ ಇಲಾಖೆಗಳು ಮುಂದಿನ ವರ್ಷದ ಯೋಚನೆಗಳು ಮತ್ತು ಅದಕ್ಕೆ ಎಷ್ಟು ದುಡ್ಡು ಬೇಕಾಗುತ್ತೆ ಅಂತ ಲೆಕ್ಕಾಚಾರ ಹಾಕುತ್ತಾರೆ. ನಂತರ ಅದನ್ನು ಹಣಕಾಸು ಇಲಾಖೆಗೆ ಕಳುಹಿಸುತ್ತಾರೆ. ಅಂದ್ರೆ ಬಜೆಟ್ ಗೂ ಐದಾರು ತಿಂಗಳು ಮೊದಲೇ ಎಲ್ಲಾ ಪ್ಲಾನ್ ಮಾಡಿ ಕಳಿಸಬೇಕು. ಪ್ರತಿ ಇಲಾಖೆಯಲ್ಲೂ ಒಬ್ಬೊಬ್ಬ ಹಣಕಾಸು ಸಲಹೆಗಾರರು ಇರುತ್ತಾರೆ. ಅವರೊಂದಿಗೆ ಹಣಕಾಸು ಇಲಾಖೆ ಮುಖ್ಯಕಾರ್ಯದರ್ಶಿ ಸಮಾಲೋಚನೆ ನಡೆಸುತ್ತಾರೆ. ಆಮೇಲೆ ಎಲ್ಲಾ ಇಲಾಖೆಗಳಿಂದ ಸಂಗ್ರಹ ಆಗಿ ಬರೋ ಇನ್ಕಮ್ ಬಗ್ಗೆ ಲೆಕ್ಕ ಹಾಕಲಾಗುತ್ತದೆ.

ಅಂತಿಮ ಹಂತ, ಆರ್ಥಿಕ ಸಮೀಕ್ಷೆ, ಬಜೆಟ್ ಕ್ರೋಡೀಕರಣ..!
ಇಲಾಖೆಗಳ ಲೆಕ್ಕ ಪಡೆದ ಬಳಿಕ ಎಲ್ಲ ಇಲಾಖೆಗಳಿಂದ ಎಷ್ಟು ಇನ್ಕಮ್ ಬರುತ್ತೆ ಅನ್ನೋದು ಪಕ್ಕ ಆಗುತ್ತೆ. ಜೊತೆಗೆ  ಅದರಲ್ಲಿ ಎಷ್ಟು ಖರ್ಚು ಮಾಡಬಹುದು ಅನ್ನೋ ಲೆಕ್ಕ ಸಿಗುತ್ತೆ. ಆಮೇಲೆ ಜನವರಿ ಬರುತ್ತಿದ್ದಂತೆ ಬಜೆಟ್ ನ ಬಾಕಿ ಉಳಿದ ಕೆಲಸಗಳನ್ನು ಮಾಡಲಾಗುತ್ತದೆ. ಹೊಸ ತೆರಿಗೆ ತರಬೇಕಾ..? ಇರೋ ತೆರಿಗೆಯನ್ನು ಕಡಿಮೆ ಮಾಡಬೇಕಾ..? ಆದಾಯ ಹೆಚ್ಚಳಕ್ಕೆ ಏನು ಮಾಡಬೇಕು..? ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹಣಕಾಸು ಸಚಿವರಿಗೆ ಇರುತ್ತೆ. ಹೀಗೆ ಎಲ್ಲಾ ಸಿದ್ಧತೆ ಮುಗಿದ ಬಳಿಕ ರಾಷ್ಟ್ರೀಯ ಸಾಂಖ್ಯಿಕ ಕೇಂದ್ರವು ಬಜೆಟ್ನ ದಾಖಲೆಗಳನ್ನು ಕಂಪ್ಯೂಟರೀಕರಣ ಮಾಡುತ್ತದೆ. ಆಮೇಲೆ ಹಣಕಾಸು ಸಚಿವರು ಬಜೆಟ್ ಮಂಡಿಸಲು ರಾಷ್ಟ್ರಪತಿಗಳ ಅನುಮತಿ ಪಡ್ಕೋತಾರೆ. ಬಜೆಟ್ ಮಂಡನೆಗೂ ಎರಡುವಾರ ಮೊದಲು ಬಜೆಟ್ ಪ್ರತಿಗಳನ್ನು ಮುದ್ರಿಸಲು ಶುರು ಮಾಡಲಾಗುತ್ತೆ.

ಹಲ್ವಾ ಸಮಾರಂಭ..! 
ಬಜೆಟ್ ಪ್ರತಿ ಮುದ್ರಣಕ್ಕೆ ಹೋಗುವ ಮುನ್ನ ಹಣಕಾಸು ಇಲಾಖೆ ತನ್ನ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ಹಲ್ವಾ ಸಮಾರಂಭ ಆಯೋಜಿಸುತ್ತೆ. ಒಂದು ಸಾರಿ ಬಜೆಟ್ ಮುದ್ರಣ ಶುರುವಾದರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊರಹೋಗುವಂತಿಲ್ಲ. ಕುಟುಂಬದವರು ಸ್ನೇಹಿತರು ಯಾರೊಂದಿಗೂ ಮಾತಾಡೋ ಹಾಗಿಲ್ಲ. ಒಂದು ರೀತಿ ಅಜ್ಞಾತವಾಸ ಅನುಭವಿಸಬೇಕಾಗುತ್ತದೆ. ಹೀಗಾಗಿ ಇದಕ್ಕೂ ಮುನ್ನ ಹಲ್ವಾ ಸಮಾರಂಭ ಮಾಡಲಾಗುತ್ತೆ. ದೊಡ್ಡ ಕಡಾಯಿಯಲ್ಲಿ ಹಲ್ವಾ ಮಾಡಿ ಅಧಿಕಾರಿಗಳು ಸಿಬ್ಬಂದಿಗೆ ಹಂಚಲಾಗುತ್ತದೆ. ಹಣಕಾಸು ಸಚಿವರೂ ಇರ್ತಾರೆ.

ಕೊನೆಯದಾಗಿ ಬಜೆಟ್ ಮಂಡನೆ
ಈ ಮೇಲಿನ ಎಲ್ಲಾ ಹಂತಗಳು ದಾಟಿದ ಬಳಿಕ ಹಣಕಾಸು ಸಚಿವರು ಬಜೆಟ್ ಮಂಡಿಸುತ್ತಾರೆ. ನಂತರ ಸದನದಲ್ಲಿ ಬಜೆಟ್ ಮೇಲೆ ಚರ್ಚೆ ನಡೆಯುತ್ತೆ. ನಂತರ ಬಜೆಟ್ಟನ್ನು ಅನುಮೋದಿಸಲಾಗುತ್ತೆ. ಈ ಹಿಂದೆಲ್ಲಾ ರೈಲ್ವೇ ಬಜೆಟನ್ನು ಸಪರೇಟ್ ಆಗಿ ಮಂಡಿಸಲಾಗುತ್ತಿತ್ತು. ಆದ್ರೆ 2016ರಿಂದ ರೈಲ್ವೇ ಬಜೆಟನ್ನು ಮೇನ್ ಬಜೆಟ್ ಜೊತೆ ವಿಲೀನ ಮಾಡಲಾಗಿದೆ.

Contact Us for Advertisement

Leave a Reply