ಆಭರಣ ನುಂಗಿದ ಗೂಳಿ..! ಸಗಣಿಯಲ್ಲಿ ಚಿನ್ನಕ್ಕಾಗಿ ಹುಡುಕಾಟ..!

ಹರಿಯಾಣ: ಗೂಳಿಯೊಂದು 40 ಗ್ರಾಂ ಚಿನ್ನಾಭರಣ ನುಂಗಿದ ಘಟನೆ ಹರಿಯಾಣದ ಸಿರ್ಸಾದಲ್ಲಿ ನಡೆದಿದೆ. ಇಲ್ಲಿನ ಕಲನವಲಿಯಲ್ಲಿ ಜನಕರಾಜ್ ಎಂಬುವವರ ಪತ್ನಿ ಮತ್ತು ಸೊಸೆ ತಮ್ಮ ಚಿನ್ನಾಭರಣವನ್ನು ತರಕಾರಿ ಇರೋ ಬೌಲ್​​​​ನಲ್ಲಿ ಇಟ್ಟಿದ್ದರು. ಆದ್ರೆ ನಂತರ ಮಿಸ್ ಆಗಿ ಆ ಬೌಲ್​ನಲ್ಲೇ ತರಕಾರಿಯ ತ್ಯಾಜ್ಯವನ್ನು ಹಾಕಿ ಎಸೆದಿದ್ದಾರೆ. ಇದಾಗಿ ಸ್ವಲ್ಪ ಹೊತ್ತಾದ ನಂತರ ಅದರಲ್ಲಿ ಚಿನ್ನದ ಆಭರಣ ಇಟ್ಟಿದ್ದು ನೆನಪಾಗಿದೆ. ಕೂಡಲೇ ಹೋಗಿ ಕಸ ಎಸೆದ ಜಾಗ ಪರಿಶೀಲಿಸಿದ್ರೆ ಏನೂ ಸಿಗಲೇ ಇಲ್ಲ. ನಂತರ ಅಲ್ಲೇ ಹತ್ತಿರದಲ್ಲಿದ್ದ ಸಿಸಿಟಿವಿ ಪರಿಶೀಲಿಸಿದಾಗ ತರಕಾರಿಯನ್ನು ಗೂಳಿಯೊಂದು ತಿಂದು ಹೋಗಿರೋದು ಪತ್ತೆಯಾಗಿದೆ. ಈಗ ಆ ಗೂಳಿಯನ್ನು ಪತ್ತೆ ಹಚ್ಚಲಾಗಿದ್ದು, ಮನೆ ಮುಂದೆ ತಂದು ಕಟ್ಟಿಹಾಕಿದ್ದಾರೆ. ಗೂಳಿಗೆ ಬೇಕಾದಷ್ಟು ಸೊಪ್ಪು, ತರಕಾರಿ ಎಲ್ಲಾ ತಿನ್ನಿಸುತ್ತಿದ್ದು ಸಗಣಿಯಲ್ಲಿ ಆಭರಣ ಬರುತ್ತೆ ಅನ್ನೋ ನಂಬಿಕೆಯಲ್ಲಿ ಕಾಯುತ್ತಿದ್ದಾರೆ.

 

Contact Us for Advertisement

Leave a Reply