ಅಫ್ಘಾನ್‌ನಲ್ಲಿ ರಸ್ತೆ ಅಪಘಾತ: 21 ಸಾವು, 38 ಜನರಿಗೆ ಗಾಯ!

masthmagaa.com:

ಆಯಿಲ್‌ ಟ್ಯಾಂಕರ್‌ ಲಾರಿಯೊಂದು ರಸ್ತೆ ಅಫಘಾತಕ್ಕೀಡಾದ ಪರಿಣಾಮ ಕನಿಷ್ಠ 21 ಜನ ಮೃತಪಟ್ಟಿರೊ ಘಟನೆ ಅಫಘಾನಿಸ್ತಾನದಲ್ಲಿ ನಡೆದಿದೆ. ಅಲ್ಲಿನ ಹೆಲ್ಮಂಡ್‌ ಬಳಿಯ ಹೆರಾತ್-ಕಂದಹಾರ್‌ ಹೈವೆಯಲ್ಲಿ ಈ ಘಟನೆ ಸಂಭವಿಸಿದ್ದು, 38ಜನ ಗಾಯಗೊಂಡಿದ್ದಾರೆ. ಅದ್ರಲ್ಲಿ 11ಜನರ ಸ್ಥಿತಿ ಚಿಂತಾಜನಕವಾಗಿದೆ ..ಬೈಕ್‌, ಬಸ್ಸು ಹಾಗೂ ಆಯಿಲ್‌ ಟ್ಯಾಂಕರ್‌ ಮಧ್ಯೆ ಈ ಅಪಘಾತ ಸಂಭವಿಸಿದೆ ಅಂತ ತಾಲಿಬಾನ್‌ ಸರ್ಕಾರ ಘಟನೆ ಬಗ್ಗೆ ಸ್ಪಷ್ಟ ಪಡಿಸಿದೆ.

-masthmagaa.com

 

Contact Us for Advertisement

Leave a Reply