ಒಬಿಸಿ ಪಟ್ಟಿ ಪರಿಷ್ಕರಿಸೋ ಅಧಿಕಾರ ರಾಜ್ಯಗಳಿಗೆ! ಮಸೂದೆಗೆ ನಮೋ ಸಂಪುಟ ಅಸ್ತು!

masthmagaa.com:

ಮಹತ್ವದ ಸಂವಿಧಾನ ತಿದ್ದುಪಡಿ ಮಸೂದೆಯೊಂದಕ್ಕೆ ಪ್ರಧಾನಿ ಮೋದಿ ಸಂಪುಟ ಅಸ್ತು ಎಂದಿದೆ. ಈ ಮಸೂದೆ ಒಬಿಸಿ ಅಂದ್ರೆ ಇತರೆ ಹಿಂದುಳಿಗ ವರ್ಗದಲ್ಲಿ ಬರೋ ಸಮುದಾಯಗಳನ್ನು ತಾವೇ ಲಿಸ್ಟ್ ಮಾಡಲು ರಾಜ್ಯಗಳಿಗೆ ಅವಕಾಶ ನೀಡುತ್ತೆ. ಇದೇ ಮಳೆಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಿ, ಪಾಸ್ ಮಾಡಿಕೊಳ್ಳುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಮಸೂದೆ ಕಾಯ್ದೆಯಾಗಬೇಕಾದ್ರೆ 3ನೇ 2ರಷ್ಟು ಬಹುಮತ ಬೇಕಾಗುತ್ತೆ. ಸದ್ಯ ಇದ್ರ ಅನಿವಾರ್ಯತೆ ಗಮನದಲ್ಲಿಟ್ಟುಕೊಂಡು ಹೆಚ್ಚಿನ ಪಕ್ಷಗಳು ಇದಕ್ಕೆ ಜೈ ಅನ್ನೋ ಸಾಧ್ಯತೆ ಇದೆ. ಯಾಕಂದ್ರೆ ಹಲವು ರಾಜ್ಯಗಳಲ್ಲಿ ನಮ್ಮನ್ನೂ ಕೂಡ ಒಬಿಸಿಗೆ ಸೇರಿಸಿ ಅಂತ ಹಲವು ಸಮುದಾಯಗಳಿಂದ ಒತ್ತಾಯವಿದೆ.

-masthmagaa.com

Contact Us for Advertisement

Leave a Reply