ನಿಜ್ಜರ್‌ ಹತ್ಯೆ ಕೇಸ್‌: ಪೋಲಿಸರ ಬಲೆಗೆ ಅಪ್ರಾಪ್ತ ಯುವಕರು!

masthmagaa.com:

ಕೆನಡಾದಲ್ಲಿ ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆ ವಿಚಾರವಾಗಿ ಮತ್ತೊಂದು ಬೆಳವಣಿಗೆಯಾಗಿದೆ. ಕೆಲವು ದಿನಗಳ ಹಿಂದಷ್ಟೆ ನಿಜ್ಜರ್ ಆಪ್ತ ಸಿಮ್ರನ್‌ಜೀತ್‌ ಸಿಂಗ್‌ ಅನ್ನೋನ ಮೇಲೆ ಮೇಲೆಯಲ್ಲಿ ಗುಂಡಿದ ದಾಳಿ ಆಗಿತ್ತು. ಈಗ ಈ ಕೇಸ್‌ ಸಂಬಂಧ ಇಬ್ಬರು ಅಪ್ರಾಪ್ತ ಬಾಲಕರನ್ನ ಕೆನಡಾ ಪೋಲಿಸರು ಅರೆಸ್ಟ್‌ ಮಾಡಿದ್ದಾರೆ. ತನಿಖೆಯಲ್ಲಿ ಸರ್ರೆ ಪೋಲಿಸರು ಫೈರ್‌ಆರ್ಮ್ಸ್‌ ಅಥ್ವಾ ಶಸ್ತ್ರಾಸ್ತ್ರಗಳನ್ನ ಕೇರ್‌ಲೆಸ್‌ ಆಗಿ ಬಳಕೆ ಮಾಡಿದ ಆರೋಪದ ಮೇಲೆ 16 ವರ್ಷದ ಇಬ್ಬರು ಬಾಲಕರನ್ನ ಬಂಧಿಸಿದ್ದಾರೆ. ಆದ್ರೆ ಈ ಶೂಟಿಂಗ್‌ ಹಿಂದಿನ ಉದ್ದೇಶ ಏನು ಅಂತ ತಿಳಿದಿಲ್ಲ. ಈ ಬಾಲಕರ ಹತ್ರ ಇದ್ದ ಮೂರು ಆಯುಧಗಳು, ಎಲೆಕ್ಟ್ರಾನಿಕ್‌ ವಸ್ತುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹುಡುಗರು ಭಾರತೀಯ ಮೂಲದವರ ಅಥ್ವಾ ಕೆನಡಾದವರ ಅಂತಾನು ತಿಳಿದು ಬಂದಿಲ್ಲ. ಇವರ ಮೇಲೆ ಯಾವುದೇ ಕೇಸ್‌ ಹಾಕದೆ ರಿಲೀಸ್‌ ಮಾಡಲಾಗಿದೆ. ಅಂದ್ಹಾಗೆ ಸಿಮ್ರನ್‌ಜೀತ್‌ ಪ್ರೊ-ಖಲಿಸ್ತಾನಿ ಕಾರ್ಯಕ್ರಮ ಆಯೋಜಿಸಿದ ಬೆನ್ನಲ್ಲೇ ಆತನ ಮನೆ ಮೇಲೆ ಶೂಟಿಂಗ್‌ ನಡೆದಿತ್ತು. ಆದ್ರೆ ಈ ವೇಳೆ ಯಾರಿಗೂ ಹಾನಿ ಆಗಿರ್ಲಿಲ್ಲ.

-masthmagaa.com

Contact Us for Advertisement

Leave a Reply