ಕೊರೋನಾದ ಇವತ್ತಿನ ಅಪ್​ಡೇಟ್​.. ಎಲ್ಲಿ ಏನೇನಾಯ್ತು ಗೊತ್ತಾ?

masthmagaa.com:

ಇನ್ನು ಜಗತ್ತಿನ ಹಲವು ದೇಶಗಳಲ್ಲಿ ಕೊರೋನಾ ಹಾವಳಿ ಮುಂದುವರಿದಿದೆ. ಆಸ್ಟ್ರೇಲಿಯಾದ 40 ಪರ್ಸೆಂಟ್​ನಷ್ಟು ಜನ ಲಾಕ್​ಡೌನ್ ನಿರ್ಬಂಧಗಳಿಗೆ ಒಳಪಟ್ಟಿದ್ದಾರೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿ ಡೆಲ್ಟಾ ರೂಪಾಂತರಿ ಹಾವಳಿ ತುಂಬಾ ಜಾಸ್ತಿಯಾಗಿದ್ದು, ನ್ಯೂ ಸೌತ್ ವೇಲ್ಸ್​ ಮತ್ತು ವಿಕ್ಟೋರಿಯಾದಲ್ಲಿ ದಿನೇ ದಿನೇ ಪ್ರಕರಣಗಳು ಜಾಸ್ತಿಯಾಗ್ತಾನೇ ಇವೆ. ಜೂನ್ ಮಧ್ಯಭಾಗದಲ್ಲಿ ಸಿಡ್ನಿಯಲ್ಲಿ ಪತ್ತೆಯಾದ ವೈರಾಣು ಈಗ 1000 ಗಡಿ ದಾಟಿ ಮುನ್ನುಗ್ತಾ ಇದೆ. ಮತ್ತೊಂದ್ಕಡೆ ಇಂಗ್ಲೆಂಡ್​​ನಲ್ಲಿ ಆಶ್ಚರ್ಯಕರ ರೀತಿಯಲ್ಲಿ, ಕೆಲವೇ ಸಮಯದಲ್ಲಿ ಮತ್ತೆ ಕೊರೋನಾ ಬಿಕ್ಕಟ್ಟು ಎದುರಾಗುತ್ತೆ ಅಂತ ಚೀಫ್ ಮೆಡಿಕಲ್ ಆಫೀಸರ್ ಕ್ರಿಸ್​ ವಿಟ್ಟಿ ಹೇಳಿದ್ದಾರೆ. ಇಲ್ಲಿ ಜುಲೈ 19ರಿಂದ ಕೊರೋನಾ ನಿರ್ಬಂಧಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದ್ದು, ಅದ್ರ ನಡುವೆಯೇ ಈ ಹೇಳಿಕೆ ಸಾಕಷ್ಟು ಆತಂಕ ಮೂಡಿಸಿದೆ. ಇನ್ನು ಫಿಲಿಪ್ಪೀನ್ಸ್​​​ಗೂ ಈ ಡೆಲ್ಟಾ ತಲುಪಿದ್ದು, ಈ ರೂಪಾಂತರಿಗೆ ಮೊದಲ ಬಲಿಯಾಗಿದೆ. ಇಷ್ಟೆಲ್ಲಾ ಆಗ್ತಿದ್ರೂ ಕೊರೋನಾ ಮೂಲದ ಬಗ್ಗೆ ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಕೊರೋನಾ ಮೂಲ ಪತ್ತೆಗೆ ಚೀನಾ ಸಹಕರಿಸಲೇಬೇಕು ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅತ್ತ ಚೀನಾ ಲಸಿಕೆ ಹಾಕಿಸಿಕೊಳ್ಳದವರ ವಿರುದ್ಧ ಕಠಿಣ ನಿರ್ಬಂಧಗಳನ್ನು ಹೇರ್ತಾ ಇದೆ. ಸ್ಕೂಲ್, ಆಸ್ಪತ್ರೆ, ಶಾಪಿಂಗ್ ಮಾಲ್​​ಗೆ ಹೋಗಬೇಕಾದ್ರೆ ಲಸಿಕೆ ಹಾಕಿಸಿಕೊಂಡಿರೋದು ಕಡ್ಡಾಯ ಮಾಡಿದೆ. ಇನ್ನು ಸೆಪ್ಟೆಂಬರ್​​ನಿಂದ ಎಲ್ಲಾ ದೇಶಗಳ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗೆ ಕೆನಡಾ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತೆ ಅಂತ ಪ್ರಧಾನಿ ಜಸ್ಟಿನ್ ಟ್ರಿಡ್ಯೂ ಘೋಷಿಸಿದ್ಧಾರೆ. ಈ ಕಡೆ ಫ್ರಾನ್ಸ್​ನ ಪ್ಯಾರಿಸ್​ನಲ್ಲಿ 9 ತಿಂಗಳಿಂದ ಕ್ಲೋಸ್ ಆಗಿದ್ದ ಐಫೆಲ್ ಟವರ್ ತೆರೆಯಲು ನಿರ್ಧರಿಸಲಾಗಿದೆ. 2ನೇ ವಿಶ್ವಯುದ್ಧ ಬಳಿಕ ಈ ಟವರ್ ಇಷ್ಟು ದಿನ ಬಂದ್ ಆಗಿದ್ದು ಇದೇ ಮೊದಲು. ಐರನ್ ಲೇಡಿಯ ಲಿಫ್ಟ್​​ಗಳು 300 ಮೀಟರ್ ಅಂದ್ರೆ 1000 ಮೀಟರ್ ಎತ್ತರಕ್ಕೆ ಪ್ರವಾಸಿಗರನ್ನು ಕರೆದೊಯ್ಯಲು ಸಿದ್ಧವಾಗಿದೆ.

-masthmagaa.com

 

Contact Us for Advertisement

Leave a Reply