ಕೆನಡಾದಲ್ಲಿ ಮತ್ತೆ ಖಲಿಸ್ತಾನಿಗಳ ಪುಡಾಂಟ: ಮೋದಿ ವಿರುದ್ದ ಪರೇಡ್!

masthmagaa.com:

ಕೆನಡಾದಲ್ಲಿ ಖಲಿಸ್ತಾನಿ ಪುಂಡರ ಆಟ ಮಿತಿಮೀರಿದ್ದು ಈಗ ಭಾರತದ ಪ್ರಧಾನಿಯನ್ನ ಕೆಟ್ಟದಾಗಿ ಚಿತ್ರಿಸಿದ್ದಾರೆ. ಕೆನಡಾದ ಟೊರೊಂಟೋ ನಗರದಲ್ಲಿ ಪ್ರಧಾನಿ ಮೋದಿ ಅವ್ರನ್ನ ಕೈದಿಗಳಂತೆ ಚಿತ್ರಿಕರಿಸಿದ್ದು ಇದನ್ನ ರೋಡಲ್ಲಿ ಮೆರವಣಿಗೆ ಮಾಡಲಾಗಿದೆ. ಇದರ ಬೆನ್ನಲ್ಲೇ ಭಾರತ ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ʻಕೆನಡಾದ ಒಳಗೆ ಉಗ್ರರಿಗೆ ಹಾಗೂ ಪ್ರತ್ಯೇಕತಾವಾದಿಗಳಿಗೆ ಕೆನಡಾ ಕುಮ್ಮಕ್ಕು ನೀಡ್ತಿದೆ..ಈ ಬಗ್ಗೆ ನಾವು ಪದೇ ಪದೇ ಕಳವಳವನ್ನು ವ್ಯಕ್ತಪಡಿಸಿದ್ದೇವೆ. ಕಳೆದ ವರ್ಷ, ಇದೇ ಥರ ನಮ್ಮ ಮಾಜಿ ಪ್ರಧಾನಿ ಅಂದ್ರೆ ಇಂದಿರಾಗಾಂಧಿಯವರನ್ನ ಚಿತ್ರಣ ಮಾಡಲಾಗಿತ್ತು. ಹಿಂಸಾಚಾರವನ್ನು ಆಚರಿಸುವುದು ಮತ್ತು ವೈಭವೀಕರಿಸುವುದು ಯಾವುದೇ ನಾಗರಿಕ ಸಮಾಜದ ಭಾಗವಾಗಿರಬಾರದು. ಕಾನೂನನ್ನ ಗೌರವಿಸುವ ಪ್ರಜಾಪ್ರಭುತ್ವ ರಾಷ್ಟ್ರಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಬೇರೆ ದೇಶಕ್ಕೆ ಬೆದರಿಕೆ ಒಡ್ಡಬಾರದು ಅಂತೇಳಿದ್ದಾರೆ.

ಇನ್ನೊಂದ್ಕಡೆ 2018ರಲ್ಲಿ ನಡೆದ ಘಟನೆಯೊಂದನ್ನ ಆಧರಿಸಿ ಭಾರತ ಸರ್ಕಾರ ಹಾಗೂ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಬಗ್ಗೆ ಕೆನಡಿಯನ್‌ ಪತ್ರಿಕೆ ʻದಿ ಗ್ಲೋಬ್‌ ಆಂಡ್‌ ಮೇಲ್ʼ ರಿಪೋರ್ಟ್‌ ಮಾಡಿದೆ. 2018ರಲ್ಲಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡು ಭಾರತಕ್ಕೆ ಭೇಟಿ ನೀಡಿದಾಗ ಅವ್ರ ವಿಮಾನವನ್ನ ಪಂಜಾಬ್‌ನ ಅಮೃತಸರದಲ್ಲಿ ಲ್ಯಾಂಡ್‌ ಆಗೋಕೆ ಭಾರತ ಸರ್ಕಾರ ಬಿಟ್ಟಿರಲಿಲ್ಲ. ಪಂಜಾಬ್‌ನ ಆಗಿನ ಸಿಎಂ ಅಮರಿಂದರ್‌ ಸಿಂಗ್‌ ಅವ್ರನ್ನ ಮೀಟ್‌ ಮಾಡಿ ಸಿಖ್‌ ಪ್ರತ್ಯೇಕತಾವಾದಿ ಸಮಸ್ಯೆ ಬಗ್ಗೆ ಡಿಸ್‌ಕಸ್‌ ಮಾಡೋಕೆ ಬಂದ್ರೆ ಮಾತ್ರ ವಿಮಾನ ಲ್ಯಾಂಡ್‌ ಮಾಡೋಕೆ ಬಿಡ್ತೀವಿ ಅಂತ ಫೋರ್ಸ್‌ ಮಾಡಲಾಗಿತ್ತು ಅಂತ ಕೆನಡ ಮೀಡಿಯಾ ಹೇಳಿದೆ. ಜೊತೆಗೆ ಈ ವೇಳೆ ಬೇರೆ ದಾರಿಯಿಲ್ಲದೇ ಟ್ರುಡು ಮತ್ತವ್ರ ರಕ್ಷಣಾ ಮಂತ್ರಿ ಹರ್ಜಿತ್‌ ಸಜ್ಜನ್‌ ಅವ್ರಿಗೆ 10 ಸಿಖ್ ಪ್ರತ್ಯೇಕತಾವಾದಿಗಳ ಹೆಸರಿನ ಕೊಟ್ಟು ಇವರ ಬಗ್ಗೆ ಕ್ರಮ ತಗೊಳಿ ಅಂತ ಭಾರತ ಒತ್ತಾಯ ಮಾಡಿತ್ತು ಅಂತ ಕೆನಡ ಪತ್ರಿಕೆ ಹೇಳಿದೆ. ಅಲ್ದೆ ಈ ಲಿಸ್ಟ್‌ನಲ್ಲಿ ಹತ್ಯೆಯಾಗಿರೋ ಹರ್ದಿಪ್‌ ಸಿಂಗ್‌ ನಿಜ್ಜರ್‌ ಕೂಡ ಇದ್ದ ಅಂತ ಆ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

-masthmagaa.com

Contact Us for Advertisement

Leave a Reply