ಕೆನಡಾದಲ್ಲಿ ಮಕ್ಕಳ ಮಾರಣಹೋಮ.. ಪೋಪ್ ಫ್ರಾನ್ಸಿಸ್ ಕ್ಷಮೆಗೆ ಕೆನಡಾ ಆಗ್ರಹ!

masthmagaa.com:

ಕೆನಡಾದ ಕೆಮ್​ಲೂಪ್ಸ್​ ಇಂಡಿಯನ್ ರೆಸಿಡೆನ್ಶಿಯಲ್​ ಸ್ಕೂಲ್ ಒಂದ್ರಲ್ಲಿ 215 ಮಕ್ಕಳ ಅವಶೇಷ ಪತ್ತೆಯಾಗಿದ್ದು ನಾವು ಈ ಹಿಂದೆ ಸುತ್ತು ಜಗತ್ತಿನಲ್ಲಿ ಹೇಳಿದ್ವಿ. ಈ ಬಗ್ಗೆ ಕೆನಡಾದಲ್ಲಿ ಭಾರಿ ವಿರೋಧಗಳು ಕೇಳಿ ಬರ್ತಿವೆ. ಇದನ್ನು ರೋಮನ್ ಕ್ಯಾಥೋಲಿಕ್ ಚರ್ಚ್​​​​ ಮೂಲಕ ನಡೆಸಲಾಗುತ್ತಿತ್ತು. ಇದ್ರಲ್ಲಿ ಮೂಲ ನಿವಾಸಿಗಳು ಮತ್ತು ಅನಿವಾಸಿ ಭಾರತೀಯರ ಮಕ್ಕಳನ್ನು ಬಲವಂತವಾಗಿ ಸೇರಿಸಲಾಗ್ತಿತ್ತು. ನಂತರ ಅವರಿಗೆ ಚಿತ್ರಹಿಂಸೆ ನೀಡಲಾಗ್ತಿತ್ತು. ಎಷ್ಟೋ ಮಕ್ಕಳು ಮನೆಗೇ ಹೋಗಿರಲಿಲ್ಲ.ಮಕ್ಕಳನ್ನು ಬಲವಂತವಾಗಿ ಮತಾಂತರ ಮಾಡಕ್ಕೆ ಟ್ರೈ ಮಾಡಲಾಗ್ತಿತ್ತು ಅನ್ನೋ ಆರೋಪಗಳು ಕೇಳಿ ಬಂದಿವೆ. ಇದ್ರ ಬೆನ್ನಲ್ಲೇ ಈಗ ರೋಮನ್ ಕ್ಯಾಥೋಲಿಕ್​​ರ ಧರ್ಮಗುರು ಪೋಪ್ ಫ್ರಾನ್ಸಿಸ್​​ ಈ ಘಟನೆಗಳಿಗೆ ಸಂಬಂಧಿಸಿದಂತೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಅಂತ ಕೆನಡಾ ಸ್ವದೇಶಿ ಸೇವಾ ಸಚಿವ ಮಾರ್ಕ್​ ಮಿಲ್ಲರ್ ಒತ್ತಾಯಿಸಿದ್ಧಾರೆ.

-masthmagaa.com

Contact Us for Advertisement

Leave a Reply