ಭಾರತಕ್ಕೆ ಸೋತ ಕೆನಡಾ! ದೇಶ ಬಿಟ್ಟ ಕೆನಡಾ SPYಗಳು!

masthmagaa.com:

ಖಲಿಸ್ತಾನಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಹಸಿಯಾಗಿರೋ ಹೊತ್ತಲ್ಲೇ ಈಗ ಮತ್ತೊಂದು ದೊಡ್ಡ ಬೆಳವಣಿಗೆಯಾಗಿದೆ. ಭಾರತದಲ್ಲಿದ್ದ ತನ್ನ ಹೆಚ್ಚುವರಿ ರಾಜತಾಂತ್ರಿಕ ಅಧಿಕಾರಿಗಳನ್ನ ಕೆನಡಾ ವಾಪಾಸ್‌ ಕರೆಸಿಕೊಂಡಿದೆ. ಅವರನ್ನ ಮಲೇಷ್ಯಾ ಹಾಗೂ ಸಿಂಗಾಪುರ್‌ಗೆ ಸ್ಥಳಾಂತರ ಮಾಡಲಾಗಿದೆ. ಕೆನಡದ ಈ ಕ್ರಮದ ಬಗ್ಗೆ ಕೆನಡಾ ಮಾಧ್ಯಮಗಳು ವರದಿ ಮಾಡಿವೆ. ನಿಜ್ಜರ್‌ ಹತ್ಯೆಗೆ ಸಂಬಂಧಪಟ್ಟಂತೆ ಕೆನಡ ಪ್ರಧಾನಿ ಟ್ರುಡೋ ಭಾರತದ ಮೇಲೆ ಆರೋಪ ಮಾಡಿದ ಬಳಿಕ ಎರಡೂ ದೇಶಗಳ ನಡುವೆ ವಿವಾದ ಭುಗಿಲೆದ್ದಿತ್ತು. ಆ ಸಮಯದಲ್ಲಿ ಭಾರತ ಕೂಡ ಕೆನಡವನ್ನ ತೀವ್ರ ತರಾಟೆಗೆ ತಗೊಂಡಿತ್ತು. ಅಷ್ಟೇ ಅಲ್ಲ, ನಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚು ಕೆನಡ ರಾಜತಾಂತ್ರಿಕರಿದ್ದಾರೆ. ಅವರೆಲ್ಲಾ ಇಲ್ಲಿ ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗ್ತಿದ್ದಾರೆ ಅಂತ ಭಾರತ ಆರೋಪಿಸಿತ್ತು. ಆ ಮೂಲಕ ಕೆನಡ ರಾಜತಾಂತ್ರಿಕರು ಇಲ್ಲಿ ಸ್ಪೈಗಳಾಗಿ ಕೆಲಸ ಮಾಡ್ತಿದ್ದಾರೆ ಅನ್ನೋ ಅರ್ಥದಲ್ಲಿ ಭಾರತ ಹೇಳಿತ್ತು. ಜೊತೆಗೆ ಅವರನ್ನ ನೀವಾಗೇ ಹಿಂದಕ್ಕೆ ಕರೆಸಿಕೊಳ್ತಿರೋ ಅಥವಾ ನಾವೇ ಅವರನ್ನ ಹೊರದಬ್ಬಬೇಕೋ ಅಂತ ವಾರ್ನಿಂಗ್‌ ಕೊಟ್ಟಿತ್ತು. ಅಕ್ಟೋಬರ್‌ 10ಕ್ಕೆ ಡೆಡ್‌ಲೈನ್‌ ಕೂಡ ಮಂಜೂರಾಗಿತ್ತು. ಈ ಹಿನ್ನಲೆಯಲ್ಲಿ ಈಗ ಕೆನಡಾ ತನ್ನ ರಾಜತಾಂತ್ರಿಕ ಅಧಿಕಾರಿಗಳನ್ನ ಭಾರತದಿಂದ ವಾಪಾಸ್‌ ಕರೆಸಿಕೊಂಡಿದೆ ಅಂತ ಕೆನಡಾದ CTV ನ್ಯೂಸ್‌ ವರದಿ ಮಾಡಿದೆ. ಅಂದ್ಹಾಗೆ ಇತ್ತೀಚೆಗೆ ಕೆನಡ ಪ್ರಧಾನಿ ಕೂಡ ಭಾರತದ ವಿಚಾರದಲ್ಲಿ ಒಂದಷ್ಟು ನೈಸ್‌ ಹೊಡೆಯೋ ಮಾತನಾಡ್ತಿದ್ರು. ಭಾರತ ನಮಗೆ ಬೇಕು, ನಮ್ಮ ಪಾರ್ಟ್ನರ್ ಅಂತೆಲ್ಲಾ ಉಲ್ಟಾ ಹೊಡೆದಿದ್ರು. ಆರಂಭದಲ್ಲಿ ನಿಜ್ಜರ್‌ ಹತ್ಯೆ ವಿಚಾರವಾಗಿ ಅಮೆರಿಕ ಬ್ರಿಟನ್‌ಗೆ ಚಾಡಿ ಹೇಳೋ ಪ್ರಯತ್ನ ಮಾಡಿದ್ದ ಟ್ರುಡು, ಭಾರತವನ್ನ ಏಕಾಂಗಿ ಮಾಡ್ತೀನಿ ಅನ್ನೋ ರೀತಿ ಅಬ್ಬರಿಸ್ತಾ ಇದ್ರು. ಆದ್ರೆ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿಲ್ಲ. ಅದರ ಬದಲಾಗಿ ಭಾರತದ ಮೇಲೆ ಆರೋಪ ಮಾಡಿ ಅಂತಾರಾಷ್ಟ್ರೀಯವಾಗಿ ತಾವೇ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಒಂದು ರೀತಿ ಕಾಮಿಡಿ ಪೀಸ್‌ ರೀತಿ ಆಗೋಗಿದ್ದಾರೆ. ಈ ನಡುವೆ ಭಾರತ ಕೂಡ ಕೆನಡಗೆ ದೊಡ್ಡ ದೊಡ್ಡ ಎದುರೇಟನ್ನೇ ಕೊಟ್ಟಿತ್ತು. ಇಲ್ಲಿರೋ ಕೆನಡ ಅಧಿಕಾರಿಗಳನ್ನ ವಾಪಾಸ್‌ ಕರೆಸಿಕೊಳ್ಳಿ ಅಂತೇಳಿತ್ತು. ಆದ್ರೆ ಕೆನಡ ಇದಕ್ಕೆ ಯಾವುದೇ ಉತ್ತರ ಕೊಟ್ಟಿರಲಿಲ್ಲ. ಇತ್ತೀಚಗಂತೂ ಭಾರತಕ್ಕೆ ಬೆಣ್ಣೆ ಹಚ್ಚೋಕೆ ಶುರು ಮಾಡಿದ್ದ ಕೆನಡ, ನಾವು ನೀವು ಪ್ರೈವೇಟ್‌ ಆಗಿ ಮೀಟ್‌ ಮಾಡೋಣ ಅಂತೆಲ್ಲಾ ಹೇಳಿತ್ತು. ಬಹುಶಃ ರಾಜತಾಂತ್ರಿಕ ಅಧಿಕಾರಿಗಳನ್ನ ಇಲ್ಲೇ ಉಳಿಸಿಕೊಳ್ಳೋ ಪ್ರಯತ್ನ ಇರಬೇಕು. ಆದ್ರೆ ಕೆನಡದ ಮನವಿ ಹಾಗೂ ತಂತ್ರಕ್ಕೆ ಭಾರತ ಬಗ್ಗಿರೋ ರೀತಿ ಕಾಣ್ತಾ ಇಲ್ಲ. ಅಂತಿಮವಾಗಿ ಕೆನಡದ ರಾಜತಾಂತ್ರಿಕ ಸ್ಪೈಗಳು ಭಾರತ ಬಿಟ್ಟು ಹೋಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗ್ತಿದೆ. ಇನ್ನು ಈ ವಿಡಿಯೋ ರೆಕಾರ್ಡ್‌ ಮಾಡುವತನಕ ಭಾರತ ಸರ್ಕಾರ ಆಗಲೀ ಕೆನಡ ಸರ್ಕಾರ ಆಗಲೀ ಇದನ್ನ ಅಧಿಕೃತವಾಗಿ ಅನೌನ್ಸ್‌ ಮಾಡಿಲ್ಲ. ಆದ್ರೆ ನಿನ್ನೆ ಅಂದ್ರೆ ಗುರುವಾರ ಭಾರತದ ವಿದೇಶಾಂಗ ವಕ್ತಾರ ಅರಿಂಧಮ್‌ ಬಗ್ಚಿ ಈ ಬಗ್ಗೆ ಮಾತನಾಡ್ತಾ ʻಇದು ಪ್ರೊಸೆಸಿಂಗ್‌ನಲ್ಲಿದೆ ಅಂತೇಳಿದ್ರು. ಜೊತೆಗೆ ಅವರೆಲ್ಲಾ ನಮ್ಮ ದೇಶದ ಆಂತರಿಕ ವಿಚಾರಗಳಲ್ಲಿ ತಲೆ ಹಾಕ್ತಿದ್ದಾರೆ ಅಂತ ಕೂಡ ಪುನುರುಚ್ಚಾರ ಮಾಡಿದ್ರು. ಭಾರತದ ವಿದೇಶಾಂಗ ವಕ್ತಾರ ಈ ರೀತಿ ಹೇಳಿದ ಕೆಲವೇ ಗಂಟೆಗಳಲ್ಲಿ ಈಗ ಈ ಸುದ್ದಿ ಹೊರಬಿದ್ದಿದೆ. ಇನ್ನೊಂದ್ಕಡೆ ಕೆನಡದಲ್ಲಿ ವಿರೋಧಿ ಚಟುವಟಿಕೆಗಳು ಮುಂದುವರೆದಿವೆ. ಇದೀಗ ಬ್ರಿಟಿಷ್‌ ಕೊಲಂಬಿಯಾ ಪ್ರಾಂತ್ಯದಲ್ಲಿ ಮತ್ತೆ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕುವ ಪೋಸ್ಟರ್‌ ಗಳನ್ನ ಹಾಕಲಾಗಿದೆ. ಎರಡು ದಿನಗಳ ಹಿಂದಷ್ಟೇ ಈ ಪೋಸ್ಟರ್‌ಗಳನ್ನ ತೆರವುಗೊಳಿಸಲಾಗಿದ್ದು, ಇದೀಗ ಮತ್ತೆ ಗುರುದ್ವಾರದ ಬಳಿ ಪೋಸ್ಟರ್‌ಗಳು ಪ್ರತ್ಯಕ್ಷವಾಗಿವೆ.

-masthmagaa.com

Contact Us for Advertisement

Leave a Reply