ಶಿಂಜಿಯಾಂಗ್‌ ಮುಸ್ಲಿಮರು: ಚೀನಾಗೆ ಚುಚ್ಚಿದ ಕೆನಡಾ!

masthmagaa.com:

ಈ ಕೆನಡಾ ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ನಡೆದ್ರೂ ಅದರ ಬಗ್ಗೆ ಕಾಮೆಂಟ್ ಮಾಡುತ್ತೆ. ಅಮೆರಿಕ ಹಾಗೆ ಮಾಡೋದರಲ್ಲಿ ಅರ್ಥ ಇದೆ. ಯಾಕಂದ್ರೆ ಅದು ಜಗತ್ತಿನ ಸೂಪರ್ ಪವರ್. ಜಗತ್ತಿನ ಯಾವುದೇ ಮೂಲೆಯಲ್ಲಿ ಸೇನಾ ಕಾರ್ಯಾಚರಣೆ ನಡೆಸೋ ಶಕ್ತಿನೂ ಅಮೆರಿಕಗೆ ಇದೆ. ಆರ್ಥಿಕವಾಗಿ ಒಂದು ದೇಶವನ್ನ ಬರ್ಬಾದ್ ಮಾಡೋ ಶಕ್ತಿಯೂ ಅಮರಿಕಗೆ ಇದೆ. ಆದ್ರೆ ಈ ಕೆನಡಾಗೆ ಅವೆರಡೂ ಇಲ್ಲ. ಆದ್ರೂ ಇವ್ರು ಅಮರಿಕದ ರೇಂಜ್​​ಗೆ ಕಾಮೆಂಟ್ ಮಾಡೋದನ್ನ ನಿಲ್ಲಿಸಲ್ಲ. ಈ ಹಿಂದೆ ಭಾರತದ ಕೃಷಿ ಪ್ರತಿಭಟನೆ ವಿಚಾರವಾಗಿ ಕಾಮೆಂಟ್ ಮಾಡಿತ್ತು ಕೆನಡಾ… ಆದ್ರೆ ಈಗ ನಮ್ಮ ಶತ್ರು ದೇಶ ಚೀನಾ ಬಗ್ಗೆ ಕಾಮೆಂಟ್ ಮಾಡಿದೆ. ಕೆನಡಾ ಸಂಸತ್​​ನಲ್ಲಿ ಚೀನಾದ ಉಘರ್​ ಮುಸ್ಲಿಮರ ಮೇಲಿನ ದೌರ್ಜನ್ಯವನ್ನ ಸಾಮೂಹಿಕ ಮಾನವ ಹತ್ಯೆ ಎಂದು ಪರಿಗಣಿಸಬೇಕು ಅಂತ ನಿರ್ಣಯ ಮಂಡಿಸಲಾಗಿದೆ.

ಇದನ್ನ ಕೆನಡಾ ಸಂಸತ್​ನ ಕೆಳಮನೆಯಲ್ಲಿ ಸರ್ವಾನುಮತದಿಂದ ಅಂಗೀಕಾರ ಕೂಡ ಮಾಡಲಾಗಿದೆ. ಜೊತೆಗೆ ಈ ಕೂಡಲೇ ಇದನ್ನೆಲ್ಲ ನಿಲ್ಲಿಸದಿದ್ದರೆ 2022ರ ಬೀಜಿಂಗ್ ವಿಂಟರ್ ಒಲಿಂಪಿಕ್ಸ್​ನ್ನ ಬೇರೆಕಡೆಗೆ ಸ್ಥಳಾಂತರ ಮಾಡುವಂತೆ ಒತ್ತಾಯಿಸುವ ನಿರ್ಣಯವನ್ನೂ ಅಂಗೀಕಾರ ಮಾಡಲಾಗಿದೆ. ಚೀನಾದ ಶಿಂಜಿಯಾಂಗ್ ಪ್ರಾಂತ್ಯದಲ್ಲಿ 10 ಲಕ್ಷಕ್ಕೂ ಅಧಿಕ ಉಘರ್ ಮುಸ್ಲಿಮರನ್ನ ಬ್ರೇನ್ ವಾಶ್ ಕ್ಯಾಂಪ್​ಗಳಲ್ಲಿ ಇರಿಸಲಾಗಿದೆ. ಅಲ್ಲಿ ಸಾಮೂಹಿಕ ಅತ್ಯಾಚಾರ ಹಾಗೂ ಹಿಂಸೆ ನಡೆಸಲಾಗ್ತಿದೆ. ಉಘರ್ ಮುಸ್ಲಿಮರ ಸಂಸ್ಕೃತಿಯನ್ನೇ ಬದಲಾಯಿಸಿ ಅವರ ಮೇಲೆ ಚೀನಾದ ಬಹುಸಂಖ್ಯಾತ ಹಾನ್ ಚೈನೀಸ್ ಸಂಸ್ಕೃತಿಯನ್ನ ಹಾಗೂ ಕಮ್ಯೂನಿಸಂ ಅನ್ನ ಹೇರಲಾಗ್ತಿದೆ ಅನ್ನೋ ಆರೋಪ ಇದೆ. ಆದ್ರೆ ಚೀನಾ ಮಾತ್ರ ಇವರನ್ನೆಲ್ಲ ಕೂಡಿ ಹಾಕಿಕೊಂಡಿರೋದು ಅವರಿಗೆ ಒಳ್ಳೆಯ ಮೌಲ್ಯಯುತ ಶಿಕ್ಷಣ ಕೊಡೋಕೆ, ಅವರು ಭಯೋತ್ಪಾದಕರಾಗೋದನ್ನ ತಪ್ಪಿಸೋಕೆ ಅಂತ ಸಮರ್ಥನೆ ಮಾಡಿಕೊಳ್ತಾನೆ ಇದೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಇ ಅಂತೂ, ಶಿಂಜಿಯಾಂಗ್​​ನಲ್ಲಿ ನಾವು ಮಾಡ್ತಿರೋದು ಮಾನವ ಹಕ್ಕುಗಳ ರಕ್ಷಣೆಯ ಪ್ರತೀಕ ಅಂತ ವಿಲಕ್ಷಣ ಹೇಳಿಕೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply