ಪತ್ತೆಯಾಯ್ತು 89ಕೋಟಿ ವರ್ಷದ ಹಿಂದಿನ ಹಳೆಯ ಜೀವಿ

masthmagaa.com:

ವಾಯುವ್ಯ ಕೆನಡಾದಲ್ಲಿ ಸ್ಪಾಂಜ್​​ಗಳ ಅವಶೇಷ ಪತ್ತೆಯಾಗಿದೆ. ಇದು 89 ಕೋಟಿ ವರ್ಷಗಳ ಹಿಂದೆ ಸಮುದ್ರದಾಳದಲ್ಲಿ ಬದುಕಿದ್ದವು ಅಂತ ತಜ್ಞರು ಅಂದಾಜಿಸಿದ್ದಾರೆ. ಸ್ಪಾಂಜ್ ಅಂದ್ರೆ ಸಮುದ್ರದ ಆಳದಲ್ಲಿ ಇರೋ ಸಸ್ಯದ ರೀತಿಯ ಒಂದು ಜೀವಿ. ಈ ಮೂಲಕ ಇದು ಈ ಭೂಮಿ ಮೇಲಿನ ಅತಿ ಆರಂಭದ ಅನಿಮಲ್ ಲೈಫ್ ಅಂತ ಸಂಶೋಧನೆಯಲ್ಲಿ ಗೊತ್ತಾಗಿದೆ. ಈ ಮೂಲಕ ಈ ಸ್ಪಾಂಜ್​​ಗಳು ಭೂಮಿಯ ವಾತಾವರಣ ಮತ್ತು ಸಮುದ್ರದಲ್ಲಿ ಆಕ್ಸಿಜನ್​​ ಉತ್ಪತ್ತಿಯಾದ ನಂತರವಷ್ಟೇ ಜೀವದ ಉಗಮವಾಯ್ತು ಅನ್ನೋ ವಾದವನ್ನೇ ಪ್ರಶ್ನಿಸುತ್ತಿವೆ. ಈ ಸ್ಪಾಂಜ್​​ಗಳ ಜೆನೆಟಿಕ್ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ್ರೆ ಈ ಪ್ರಬೇಧದ ಸ್ಪಾಂಜ್​​​ಗಳು 100 ಕೋಟಿ ವರ್ಷ ಹಿಂದೆಯಿಂದ 50 ಕೋಟಿ ವರ್ಷ ಹಿಂದೆ ಬದುಕಿರಬಹುದು ಅಂತ ಅಂದಾಜಿಸಲಾಗಿದೆ.

-masthmagaa.com

Contact Us for Advertisement

Leave a Reply