ಖಲಿಸ್ತಾನಿಗಳು ಹಿತ್ತಲಿನ ಹಾವುಗಳು: ಗುಡುಗಿದ ಕೆನಡಾದ ʻಕನ್ನಡಿಗʼ MP

masthmagaa.com:

ಇತ್ತೀಚೆಗೆ ವಿದೇಶಗಳಲ್ಲಿ ಖಲಿಸ್ತಾನ ಬೆಂಬಲಿಗರ ಉಪಟಳ ಹೆಚ್ಚಾಗ್ತಿದೆ. ಅದ್ರಲ್ಲೂ ಕೆನಡಾದಲ್ಲಿ ಈ ಕಾಟ ಜಾಸ್ತಿಯಾಗ್ತಿದ್ದು, ಇದೀಗ ಕರ್ನಾಟಕ ಮೂಲದ ಕೆನಡಾ ಸಂಸದರು ಖಲಿಸ್ತಾನಿಗಳ ವಿರುದ್ಧ ವಾಗ್ದಾಳಿ ನಡಸಿದ್ದಾರೆ. ನಮ್ಮ ಮನೆ ಹಿತ್ತಲಿನಲ್ಲಿರೋ ಹಾವುಗಳು ತಲೆಯೆತ್ತುತ್ತಿದ್ದು, ಬುಸುಗುಟ್ಟುತ್ತಿವೆ ಅಂತ ಕೆನಡಾ ಸಂಸದ ಚಂದ್ರ ಆರ್ಯ ಅವ್ರು ಖಲಿಸ್ತಾನಿ ಸಂಘಟನೆಗಳನ್ನ ಉಲ್ಲೇಖಿಸಿ ಹೇಳಿದ್ದಾರೆ. ಜೊತೆಗೆ ನಮ್ಮ ಹಿತ್ತಲಿನ ಹಾವುಗಳು ಬುಸುಗುಡುತ್ತಿದ್ದು, ಅವು ಯಾವ ಸಮಯದಲ್ಲಿ ನಮ್ಮನ್ನ ಕಚ್ಚಿ ಕೊಲ್ಲುತ್ತವೆ ಅನ್ನೋದಷ್ಟೇ ನಮ್ಮ ಮುಂದಿರೋ ಪ್ರಶ್ನೆ ಅಂತ ಹೇಳಿದ್ದಾರೆ. ಕೆನಡಾದಲ್ಲಿರೋ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳಿಗೆ ಖಲಿಸ್ತಾನಿ ಬೆಂಬಲಿಗರು ಜೀವ ಬೆದರಿಕೆ ಹಾಕಿರೋ ಹಿನ್ನಲೆಯಲ್ಲಿ ಚಂದ್ರ ಆರ್ಯ ತಿರುಗೇಟು ನೀಡಿದ್ದಾರೆ. ಇತ್ತ ಭಾರತೀಯ ಅಧಿಕಾರಿಗಳಿಗೆ ಭದ್ರತೆ ಕೊಟ್ಟಿರೋದಾಗಿ ಕೆನಡಾ ಹೇಳಿದೆ. ಅಂದ್ಹಾಗೆ ಕೆನಡಾದಲ್ಲಿ ಗುಂಡೇಟಿಗೆ ಬಲಿಯಾಗಿದ್ದ ಖಲಿಸ್ತಾನ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹೆಸರಿನಲ್ಲಿ ಜುಲೈ 8 ರಂದು ರ‍್ಯಾಲಿ ಮಾಡೋದಾಗಿ ಖಲಿಸ್ತಾನಿಗಳು ಪೋಸ್ಟರ್‌ ರಿಲೀಸ್‌ ಮಾಡಿದ್ರು. ಜೊತೆಗೆ ಭಾರತೀಯ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿದ್ರು. ಈ ಹಿನೆಲೆಯಲ್ಲಿ ಕೆನಡಾ ಗುಪ್ತಚರ ಇಲಾಖೆ ಕಳವಳ ವ್ಯಕ್ತಪಡಿಸಿದ್ದು, ಸೆಕ್ಯುರಿಟಿ ನೀಡಿರೋದಾಗಿ ಹೇಳಿದೆ.

-masthmagaa.com

Contact Us for Advertisement

Leave a Reply