ಚೀನಾ ಬಳಿ ಹೆಚ್ಚು ಮಾಹಿತಿ ಕೇಳಲು ಸಾಧ್ಯವಿಲ್ಲ: WHO

masthmagaa.com:

ಕೊರೋನಾ ಲೀಕ್ ಆಗಿದ್ದು ಚೀನಾದ ವುಹಾನ್​​ನಲ್ಲಿರೋ ಪ್ರಯೋಗಾಲಯದಿಂದ ಅನ್ನೋ ವಾದ ದಿನದಿಂದ ದಿನಕ್ಕೆ ಬಲವಾಗುತ್ತಲೇ ಇದೆ. ಈ ನಡುವೆ ಅಮೆರಿಕದ ಯುಎಸ್ ಗವರ್ನಮೆಂಟ್ ನ್ಯಾಷನಲ್ ಲ್ಯಾಬೋರೇಟರಿ ಕೂಡ ವುಹಾನ್ ಲ್ಯಾಬ್​ನಿಂದ ಲೀಕ್ ಆಗಿರೋ ಸಾಧ್ಯತೆ ತಳ್ಳಿ ಹಾಕಲು ಸಾಧ್ಯವಿಲ್ಲ. ಅದು ತನಿಖೆಗೆ ಅರ್ಹವಾದ ವಿಚಾರ ಅಂತ ಹೇಳಿದೆ. ಸ್ಟೇಟ್ ಡಿಪಾರ್ಟ್​​ಮೆಂಟ್ ಸೂಚನೆ ಬಳಿಕ ಕ್ಯಾಲಿಫೋರ್ನಿಯಾದ ಈ ಲಾರೆನ್ಸ್​ ಲಿವರ್​ಮೋರ್​ ನ್ಯಾಷನಲ್ ಲ್ಯಾಬೋರೇಟರಿ 2020ರ ಮೇ ತಿಂಗಳ ಈ ಬಗ್ಗೆ ತನಿಖೆ ಶುರು ಮಾಡಿತ್ತು. ಇನ್ನು ಈ ಬಗ್ಗೆ ಮಾತನಾಡಿರೋ ಅಮೆರಿಕ ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್​​ ಜೇಕ್ ಸಲ್ಲಿವನ್​​​​, ಅಂತಾರಾಷ್ಟ್ರೀಯ ಸಮುದಾಯದಲ್ಲಿ ಸಹಕಾರದ ಮೂಲಕ ಕೊರೋನಾ ಮೂಲದ ಕುರಿತು ಪಾರದರ್ಶಕವಾಗಿ ಮಾಹಿತಿ ನೀಡುವಂತೆ ಒತ್ತಡ ಹೇರೋದನ್ನು ಮುಂದುವರಿಸುತ್ತೇವೆ ಅಂತ ಹೇಳಿದ್ದಾರೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ವಿಶ್ವ ಆರೋಗ್ಯ ಸಂಸ್ಥೆ, ಕೊರೋನಾ ಮೂಲದ ಬಗ್ಗೆ ಮತ್ತಷ್ಟು ಮಾಹಿತಿ ನೀಡಿ ಅಂತ ಚೀನಾವನ್ನು ಬಲವಂತ ಮಾಡೋಕೆ ಸಾಧ್ಯವಿಲ್ಲ ಅಂತ ಹೇಳಿದೆ. ಅಂದಹಾಗೆ ವಿಶ್ವಸಂಸ್ಥೆ ಚೀನಾ ಪರವಾಗಿ ಬ್ಯಾಟ್ ಬೀಸ್ತಿರೋದು ಇದೇ ಮೊದಲೇನಲ್ಲ.. ಕಳೆದ ವರ್ಷವೂ ಇದೆ ರೀತಿ ಮಾಡಿ, ರೊಚ್ಚಿಗೆದ್ದ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆಗೆ ನೀಡೋ ಅನುದಾನಕ್ಕೆ ಬ್ರೇಕ್ ಹಾಕಿದ್ರು ಸ್ವಲ್ಪ ಟೈಂ.

-masthmagaa.com

Contact Us for Advertisement

Leave a Reply