ಮತಾಂತರ ಆರೋಪ.. ಗುಜರಾತ್​​ನಲ್ಲಿ 9 ಮಂದಿ ವಿರುದ್ಧ ಕೇಸ್​!

masthmagaa.com:

ಗುಜರಾತ್​​ನ ಭಾರುಚ್ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದವರಿಗೆ ಆಮಿಷ ತೋರಿಸಿ ಇಸ್ಲಾಂಗೆ ಮತಾಂತರ ಮಾಡಿದ ಆರೋಪದ ಮೇಲೆ 9 ಮಂದಿ ವಿರುದ್ಧ ಕೇಸ್ ದಾಖಲಾಗಿದೆ. ಅವರಲ್ಲಿ ಓರ್ವ ಲಂಡನ್​ನಲ್ಲಿ ನೆಲೆಸಿರೋ ಸ್ಥಳೀಯ ನಿವಾಸಿ ಕೂಡ ಸೇರಿದ್ದಾನೆ. ಈವರೆಗೆ 37 ಕುಟುಂಬದ 100ಕ್ಕೂ ಹೆಚ್ಚು ಜನರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ಮತಾಂತರಗೊಂಡವರೆಲ್ಲರಿಗೂ ಒಂದೋ ದುಡ್ಡು ಅಥವಾ ಬೇರೆ ಬೇರೆ ಆಮಿಷಗಳನ್ನು ಒಡ್ಡಲಾಗಿದೆ. ಅವರ ಅನಕ್ಷರತೆ ಮತ್ತು ಬಡತನದ ಲಾಭ ಪಡೆದುಕೊಂಡು ಈ ಮತಾಂತರ ಮಾಡಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ. ಲಂಡನ್​ನಲ್ಲಿ ನೆಲೆಸಿರುವ ಫೆಫ್ಡಾವಾಲಾ ಹಜಿ ಅಬ್ದುಲ್​​ ಇದಕ್ಕೆ ಬೇಕಾದ ಹಣವನ್ನು ಬೇರೆ ಬೇರೆ ದೇಶಗಳಿಂದ ಸಂಗ್ರಹಿಸ್ತಿದ್ದ ಅನ್ನೋದು ಗೊತ್ತಾಗಿದೆ.

-masthmagaa.com

Contact Us for Advertisement

Leave a Reply