ʻCBI ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿಲ್ಲʼ: ಕೇಂದ್ರ ಸರ್ಕಾರ

masthmagaa.com:

ಅನುಮತಿ ಇಲ್ಲದೇ ಪಶ್ಚಿಮ ಬಂಗಾಳದ ಹಲವು ಪ್ರಕರಣಗಳನ್ನ CBI ತನಿಖೆ ನಡೆಸ್ತಿದೆ ಅಂತ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಈ ಪ್ರಕರಣದ ಪ್ರಾಥಮಿಕ ವಾದ ವಿವಾದದ ವೇಳೆ, CBI… ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿಲ್ಲ ಅಂತ ಕೇಂದ್ರ ಸರ್ಕಾರದ ಪರ ವಕೀಲರಾದ ತುಷಾರ್‌ ಮೆಹ್ತಾ ಹೇಳಿದ್ದಾರೆ. ʻಕೇಂದ್ರ ಸರ್ಕಾರ ಈ ಕೇಸ್‌ಗಳನ್ನ ದಾಖಲಿಸಿಲ್ಲ. ಬದಲಿಗೆ CBI ಈ ಎಲ್ಲಾ ಕೇಸ್‌ಗಳನ್ನ ದಾಖಲಿಸಿರೋದು. CBI ಕೇಂದ್ರ ಸರ್ಕಾರದ ಕಂಟ್ರೋಲ್‌ನಲ್ಲಿಲ್ಲʼ ಅಂತೇಳಿದ್ದಾರೆ. ಅಂದ್ಹಾಗೆ ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ಸರ್ಕಾರ ಸಂವಿಧಾನದ ಆರ್ಟಿಕಲ್‌ 131ರ ಅಡಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿತ್ತು. ಪಶ್ಚಿಮ ಬಂಗಾಳದಲ್ಲಿ ತನಿಖೆ ನಡೆಸಲು CBIಗೆ ನೀಡಿದ್ದ ಒಪ್ಪಿಗೆಯನ್ನ ಹಿಂಪಡೆದ್ರೂ, CBI ನಮ್ಮ ಪ್ರದೇಶದಲ್ಲಿ FIR ದಾಖಲಿಸಿ ತನಿಖೆ ನಡೆಸ್ತಿದೆ ಅಂತ ಆರೋಪಿಸಿತ್ತು. ಇನ್ನೊಂದ್ಕಡೆ ಪಶ್ಚಿಮ ಬಂಗಾಳದ ಸಂದೇಶ್‌ಖಲಿ ಪ್ರಕರಣದ ತನಿಖೆ ನಡೆಸಿರೋ CBI, ಅದ್ರ ಪ್ರಾಥಮಿಕ ರಿಪೋರ್ಟ್‌ನ್ನ ಕೋಲ್ಕತ್ತಾ ಹೈಕೋರ್ಟ್‌ಗೆ ಈಗ ಸಬ್‌ಮಿಟ್‌ ಮಾಡಿದೆ. ಜೊತೆಗೆ ಪಶ್ಚಿಮ ಬಂಗಾಳ ಸರ್ಕಾರ ಸಹಕರಿಸ್ತಿಲ್ಲ… ಸಂದೇಶ್‌ಖಲಿಯ ಲ್ಯಾಂಡ್‌ ರೆಕಾರ್ಡ್‌ಗಳನ್ನ ನೀಡ್ತಿಲ್ಲ ಅಂತ CBI ಆರೋಪಿಸಿದೆ.

-masthmagaa.com

Contact Us for Advertisement

Leave a Reply