ಸಿಬಿಎಸ್​ಇ 12ನೇ ತರಗತಿ ಮಾರ್ಕ್ಸ್​ ಅಪ್​ಲೋಡ್​​​ಗೆ ಜೂನ್ 28 ಕಡೇ ದಿನ!

masthmagaa.com:

ಸಿಬಿಎಸ್​ಇ 12ನೇ ತರಗತಿಯ ಪ್ರಾಕ್ಟಿಕಲ್ ಅಥವಾ ಇಂಟರ್ನಲ್ ಅಸೆಸ್​ಮೆಂಟ್​ ಮಾರ್ಕ್ಸ್ ಅನ್ನ ಅಪ್ಲೋಡ್ ಮಾಡಲು ಜೂನ್ 28 ಲಾಸ್ಟ್ ಡೇಟ್ ಅಂತ ಸಿಬಿಎಸ್​ಇ ಹೇಳಿದೆ. ಜೊತೆಗೆ ಯಾವುದಾದ್ರೂ ಶಾಲೆಯಲ್ಲಿ ಪ್ರಾಕ್ಟಿಕಲ್ ಅಥವಾ ಇಂಟರ್ನಲ್ ಅಸೆಸ್​ಮೆಂಟ್ ಪೆಂಡಿಂಗ್ ಇದ್ರೆ ಅದನ್ನ ಆನ್​ಲೈನ್​ ಮೋಡ್​ನಲ್ಲೇ ನಡೆಸಬೇಕು ಅಂತಾನೂ ಸೂಚಿಸಿದೆ. ಮತ್ತೊಂದ್ಕಡೆ ಸಿಬಿಎಸ್​ಇ 12ನೇ ತರಗತಿ ಬೋರ್ಡ್ ಎಕ್ಸಾಂ ಅನ್ನ ಕ್ಯಾನ್ಸಲ್ ಮಾಡಿದ ಬೆನ್ನಲ್ಲೇ ಇದೀಗ ಮತ್ತಷ್ಟು ರಾಜ್ಯಗಳು ಸ್ಟೇಟ್​​ ಬೋರ್ಡ್ ಎಕ್ಸಾಂಗಳನ್ನ ರದ್ದು ಮಾಡ್ತಿವೆ. ಪಶ್ಚಿಮ ಬಂಗಾಳದಲ್ಲಿ 10 ಮತ್ತು 12 ತರಗತಿ – ಇವೆರಡೂ ಸ್ಟೇಟ್​ ಬೋರ್ಡ್​ ಪರೀಕ್ಷೆ ರದ್ದಾಗಿದೆ. ಪುದುಚೆರಿ ಕೇಂದ್ರಾಡಳಿತ ಪ್ರದೇಶದಲ್ಲಿ 12ನೇ ತರಗತಿ ಬೋರ್ಡ್​ ಎಕ್ಸಾಂ ಕ್ಯಾನ್ಸಲ್ ಆಗಿದೆ.

-masthmagaa.com

Contact Us for Advertisement

Leave a Reply