ಅಮಲಿನಲ್ಲಿದ್ದ ಮಹಿಳೆಯನ್ನು ಎಳೆದೊಯ್ದು ವಿದ್ಯಾರ್ಥಿಗಳಿಂದ ಅತ್ಯಾಚಾರ..!

ಬ್ರಿಟನ್: ನಶೆಯಲ್ಲಿದ್ದ ಮಹಿಳೆಯೊಬ್ಬರ ಮೇಲೆ ಇಟಲಿ ಮೂಲದ ಇಬ್ಬರು ವಿದ್ಯಾರ್ಥಿಗಳು ಅತ್ಯಚಾರ ಎಸಗಿರುವ ಘಟನೆ ಬ್ರಿಟನ್​ನಲ್ಲಿ ನಡೆದಿದೆ. 2017ರಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ಆರೋಪಿಗಳ ಅಪರಾಧ ಸಾಬೀತಾಗಿದೆ. ಇಟಲಿ ಮೂಲದ 25 ವರ್ಷದ ಫರ್ಡಿನಾಂಡೋ ಓರ್ಲಾಂಡೋ, 26 ವರ್ಷದ ಲಾರೆನ್ಸ್ ಕೊಸ್ಟಾಂಜೋ ಈ ಕೃತ್ಯ ಎಸಗಿದ್ದರು. ಫರ್ಡಿನಾಂಡೋ ಇಂಟರ್​ನ್ಯಾಷನಲ್ ಲಾ ಕುರಿತು ಶಿಕ್ಷಣ ಪಡೆಯುತ್ತಿದ್ದರೆ, ಲಾರೆನ್ಸ್ ಕೋಸ್ಟಾಂಜೋ ಬ್ಯುಸಿನೆಸ್ ಮ್ಯಾನೇಜ್​ಮೆಂಟ್​ನಲ್ಲಿ ಮಾಸ್ಟರ್ಸ್​ ಡಿಗ್ರಿ ಓದುತ್ತಿದ್ದರು.

ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಯುವಕರು ಕ್ಲಬ್ ಒಂದರಲ್ಲಿ ಅಮಲಿನಲ್ಲಿದ್ದ ಮಹಿಳೆಯನ್ನು ನಿರ್ವಹಣಾ ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಆದ್ರೆ ಆರಂಭದಲ್ಲಿ ನಾವು ಅತ್ಯಾಚಾರ ಮಾಡಿಲ್ಲ. ಮಹಿಳೆಯ ಒಪ್ಪಿಗೆಯೊಂದಿಗೆ ಎಲ್ಲವೂ ನಡೆದಿದೆ ಎಂದು ವಿದ್ಯಾರ್ಥಿಗಳು ವಾದಿಸಿದ್ದರು. ಆದ್ರೆ ಮಹಿಳೆ ಅಮಲಿನಲ್ಲಿ ಇದ್ದಿದ್ದರಿಂದ ಆ ಸ್ಥಿತಿಯಲ್ಲಿ ಆಕೆ ಒಪ್ಪಿಗೆ ಕೊಡಲು ಸಾಧ್ಯವಿಲ್ಲ ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ.

Contact Us for Advertisement

Leave a Reply