ʻಡ್ಯಾನ್ಸ್ ಸೆಲೆಬ್ರೇಟ್ ಮಾಡಿ ಕಾಮನ್ ಮ್ಯಾನ್‌ನ ಸೆಲೆಬ್ರಿಟಿ ಮಾಡೋ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌-7 ಬರ್ತಿದೆʼ !

masthmagaa.com:

ಕಿರುತರೆಯ ಜನಪ್ರಿಯ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ 7 ನೇ ಸೀಸನ್‌ ಬರುತ್ತಿದೆ. ಜೀ ಕನ್ನಡ ವಾಹಿನಿಯ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಸೀಸನ್‌ 7 ರಿಯಾಲಿಟಿ ಶೋ ಮೇ 6 ರಿಂದ ಶನಿ-ಭಾನು ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಈ ರಿಯಾಲಿಟಿ ಶೋನ ಪ್ರೋಮೊವನ್ನು ಜೀ ಕನ್ನಡ ವಾಹಿನಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ʻಡ್ಯಾನ್ಸ್ ಸೆಲೆಬ್ರೇಟ್ ಮಾಡಿ ಕಾಮನ್ ಮ್ಯಾನ್‌ನ ಸೆಲೆಬ್ರಿಟಿ ಮಾಡೋ Dance ಕರ್ನಾಟಕ Dance-7 ಬರ್ತಿದೆ ಅತಿ ಶೀಘ್ರದಲ್ಲಿ..! ಎಂಬ ಅಡಿಬರಹದೊಂದಿಗೆ ಪ್ರೋಮೊ ರಿಲೀಸ್‌ ಆಗಿದೆ.

ಹೋಟೆಲ್‌ನಲ್ಲಿ ಅರ್ಜುನ್‌ ಜನ್ಯ ಹಾಗೂ ಅನುಶ್ರೀ ಜ್ಯೂಸ್‌ ಕುಡಿಯುತ್ತ ಕುತಿರುತ್ತಾರೆ. ಅನುಶ್ರೀ ʻಜನ್ಯಾ ಜಿ, ಇಲ್ಲಿ ಸಮೀಪದಲ್ಲಿ ಯಾವುದಾದರೂ ಪೊಲೀಸ್‌ ಸ್ಟೇಷನ್‌ ಇದೆಯಾ ? ʼ ಎಂದು ಕೇಳಿದ ತಕ್ಷಣ ಯಾಕೆ ? ಎಂದು ಅರ್ಜುನ್‌ ಜನ್ಯ ಕೇಳುತ್ತಾರೆ. ಅದಕ್ಕೆ ಅನುಶ್ರೀ ನಿಮ್ಮನ್ನು ನೋಡುತ್ತ ನಾನು ಕಳೆದು ಹೋದರೆ ಹುಡುಕುವುದಕ್ಕೆ ಅಂತ ಹೇಳುತ್ತಾಳೆ. ಆಗ ಅರ್ಜುನ್‌ ಜನ್ಯ ಅವರು ಕುಡಿಯುತ್ತಿದ್ದ ಜ್ಯೂಸ್‌ ಗಂಟಲಕ್ಕೇರಿ ಕೆಮ್ಮುತ್ತಾರೆ. ಅಷ್ಟರಲ್ಲಿ ಇತ್ತ ವೇಟರ್‌ ಕೈಯಲ್ಲಿ ಸರ್ವ್‌ ಮಾಡಬೇಕಾಗಿರೋ ಫುಡ್‌ ಪ್ಲೇಟ್‌ ಹಿಡಿದುಕೊಂಡು ಬಿಂದಾಸ್‌ ಡ್ಯಾನ್ಸ್‌ ಸ್ಟೇಪ್ಸ್‌ ಹಾಕುತ್ತಾ ಬರುತ್ತಿರುತ್ತಾನೆ. ಆಗ ಅನುಶ್ರೀ ಹಾಗೂ ಅರ್ಜುನ್‌ ಜನ್ಯ ಶಾಕ್‌ ಆಗಿ ಅವನ ಡ್ಯಾನ್ಸ್‌ ನೋಡುತ್ತಾರೆ. ಅಷ್ಟರಲ್ಲಿ ಒಬ್ಬರು ಅಡ್ಡಿಬಂದು ವೇಟರ್ ಕೈಯಲ್ಲಿನ ಪ್ಟೇಟ್‌ ತಪ್ಪಿ ಮೇಲೆ ಹಾರುತ್ತದೆ. ಆಗ ಎಲ್ಲರೂ ಗಾಬರಿಯಿಂದ ನೋಡುತ್ತಾರೆ. ತಟ್ಟೆಯಲ್ಲಿನ ಯಾವುದೇ ಪದಾರ್ಥ ಕೆಳಗೆ ಬಿಳ್ಳದೆ ಮತ್ತೆ ತಟ್ಟೆಯಲ್ಲೇ ಬಂದು ಕುರುತ್ತದೆ. ವೇಟರ್‌ ಬಂದು ಜನ್ಯ ಹಾಗೂ ಅನುಶ್ರೀ ಟೇಬಲ್‌ ಮೇಲೆ ತಟ್ಟೆ ಇಡುತ್ತಾನೆ. ಅನುಶ್ರೀ ಅವರನ್ನು ನೋಡಿ ಮ್ಯಾಮ್‌ ಎನ್ನುತ್ತಾನೆ. ಆಗ ಅನುಶ್ರೀ ಹಾಗೂ ಅರ್ಜುನ್‌ ಜನ್ಯ ನಿಮ್ಮ ಜೊತೆ ಸೆಲ್ಫಿ ಅಂತ ಕೇಳುತ್ತಾರೆ. ಆಗ ನನ್ನ ಜೊತೆನಾ ಅಂತ ವೇಟರ್‌ ಅಚ್ಚರಿಪಡುತ್ತಾನೆ. ನಿಮ್ಮ ಡ್ಯಾನ್ಸ್‌ಗೆ ನಾವು ಫ್ಯಾನ್ಸ್‌ ಆಗಿ ಹೋದ್ವಿ ಎಂದು ಅರ್ಜುನ್‌ ಜನ್ಯ ಹಾಗೂ ಅನುಶ್ರೀ ವೇಟರ್‌ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಆಗ ʻಡ್ಯಾನ್ಸ್ ಸೆಲೆಬ್ರೇಟ್ ಮಾಡಿ ಕಾಮನ್ ಮ್ಯಾನ್‌ನ ಸೆಲೆಬ್ರಿಟಿ ಮಾಡೋ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌-7 ಬರ್ತಿದೆʼ ಅಂತ ಅನೌನ್ಸ್‌ಮೆಂಟ್‌ ಬರುತ್ತದೆ.

-masthmagaa.com

Contact Us for Advertisement

Leave a Reply