masthmagaa.com:

ಕೇಂದ್ರ ಬಜೆಟ್ 2022ರ ಟಾಪ್ 10 ಹೈಲೈಟ್ಸ್

1. ವೈಯಕ್ತಿಕ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
2. ತೆರಿಗೆ ಪಾವತಿಯಲ್ಲಿ ತಪ್ಪಾಗಿದ್ದರೆ ಸರಿಪಡಿಸಿ ಅಡಿಶನಲ್ ಟ್ಯಾಕ್ಸ್ ಕಟ್ಟಲು ಅಸೆಸ್ಮೆಂಟ್ ಇಯರ್ ನಂತರ 2 ವರ್ಷಗಳ ವರೆಗೆ ಅವಕಾಶ ಕೊಡ್ತೀವಿ ಅಂತ ಅನೌನ್ಸ್ ಮಾಡಿದ್ದಾರೆ.
3. ಕ್ರಿಪ್ಟೋ ಕರೆನ್ಸಿ ಮೇಲೆ 30% ಟ್ಯಾಕ್ಸ್. ಈ ಮೂಲಕ ಈ ಕರೆನ್ಸಿಯನ್ನ ಸರ್ಕಾರ ಗುರುತಿಸಿದಂತಾಗಿದೆ.
4. ಭಾರತದಲ್ಲಿ ಡಿಜಿಟಲ್ ರುಪೀ ಜಾರಿಗೆ ಬರುತ್ತೆ. ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಹೆಸರಲ್ಲಿ ಬರುತ್ತೆ. ಬ್ಲಾಕ್ ಚೇನ್ ಟೆಕ್ನಾಲಜಿ ಆಧರಿತವಾಗಿ ಇದು ಕೆಲಸ ಮಾಡುತ್ತೆ.
5. ಮುಂದಿನ 5 ವರ್ಷಗಳಲ್ಲಿ 60 ಲಕ್ಷ ಹೊಸ ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಿದ್ದೀವಿ ಅಂತ ಹೇಳಿದ್ದಾರೆ.
6. 5G ತರಂಗಾಂತರ ಹರಾಜು ನಡೆಸಿ 2022-23ರ ಅಂತ್ಯದೊಳಗೆ ದೇಶದಲ್ಲಿ 5G ಜಾರಿ ಆಗುತ್ತೆ ಅಂದಿದ್ದಾರೆ.
7. ಮೂಲಸೌಕರ್ಯ ಕ್ಷೇತ್ರದಲ್ಲಿ ಭಾರಿ ಹೂಡಿಕೆ ಮಾಡಲಿದೆ ಸರ್ಕಾರ. ಹೊಸ ರೈಲುಗಳು, ರೇಲ್ವೇ ಟರ್ಮಿನಲ್ಸ್, ದೊಡ್ಡ ಪ್ರಮಾಣದಲ್ಲಿ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಘೋಷಣೆ.
8. ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ಕೊಡಲು ಬ್ಯಾಟರಿ ಸ್ವಾಪಿಂಗ್ ಪಾಲಿಸಿ.
9. 68% ರಕ್ಷಣಾ ಸಾಮಾಗ್ರಿ ಭಾರತೀಯ ಕಂಪನಿಗಳಿಂದ ಖರೀದಿ. ಈ ಮೂಲಕ ಡಿಫೆನ್ಸ್ ನಲ್ಲಿ ಆತ್ಮನಿರ್ಭರ್ ಭಾರತ್ ಗೆ ಉತ್ತೇಜನ.
10. ನದಿ ಜೋಡಣೆಗೆ ಕ್ರಮ. ಕಾವೇರಿ-ಪೆನ್ನಾರ್, ದಮನ್ ಗಂಗಾ – ಪಿಂಜಲ್, ಪಾರ್ – ತಾಪಿ – ನರ್ಮದಾ, ಗೋದಾವರಿ – ಕೃಷ್ಣ, ಪೆನ್ನಾರ್ – ಕೃಷ್ಣ ನದಿಗಳ ಜೋಡಣೆಗೆ ಯೋಜನೆ. ಈ ಬಗ್ಗೆ ರಾಜ್ಯಗಳ ಬಳಿ ಚರ್ಚೆ. ಎಲ್ಲರೂ ಒಪ್ಪಿದ ಮೇಲೆ ಈ ಯೋಜನೆ ಜಾರಿಗೆ ಕೇಂದ್ರ ಸಪೋರ್ಟ್ ಮಾಡಲಿದೆ. ಉತ್ತರ ಪ್ರದೇಶದ ಬರಪೀಡಿತ ಬುಂದೇಲ್ ಖಂಡ, ಮಧ್ಯಪ್ರದೇಶಗಳಿಗೆ ನೀರಾವರಿ ಒದಗಿಸಲು ಕೆನ್ – ಬೆಟ್ವಾ ನದಿ ಜೋಡಣೆ ಯೋಜನೆ ಜಾರಿಗೆ 44,605 ಕೋಟಿ ರೂಪಾಯಿ.

ಇದು ಓವರಾಲ್ ಟಾಪ್ 10 ಸಂಗತಿಗಳು…
ಈಗ ಉಳಿದಂತೆ ಏನೆಲ್ಲ ಅನೌನ್ಸ್ಮೆಂಟ್ ಮಾಡಲಾಗಿದೆ ಅಂತ ವಲಯವಾರು ನೋಡ್ತಾ ಹೋಗೋಣ.

ಕ್ರಿಪ್ಟೋ ಲೋಕದ ಮೇಲೆ ಗದಾ ಪ್ರಹಾರ

– ಭಾರತದ ಸ್ವಂತ ಡಿಜಿಟಲ್ ರುಪೀ ಜಾರಿಗೆ ಬರುತ್ತೆ.
– ಈ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯನ್ನ RBI ಇಶ್ಯೂ ಮಾಡುತ್ತೆ. ಇದು ಬ್ಲಾಕ್ ಚೇನ್ ಟೆಕ್ನಾಲಜಿ ಆಧಾರಿತವಾಗಿರುತ್ತೆ.
– ಇದು ಮಾತ್ರ ಭಾರತದ ಅಫಿಶಿಯಲ್ ಕ್ರಿಪ್ಟೋ ಕರೆನ್ಸಿ ಅಂತ ಕರೆಸಿಕೊಳ್ಳಲಿದೆ.
– ಉಳಿದವು ಯಾವುವೂ ಕ್ರಿಪ್ಟೋ ಕರೆನ್ಸಿ ಅಲ್ಲ. ಅವೆಲ್ಲ ಕ್ರಪ್ಟೋ ಆಸ್ತಿ ಅಷ್ಟೆ. ಕರೆನ್ಸಿ ಅಂದ್ರೆ RBI ಇಶ್ಯೂ ಮಾಡಿದ್ರೆ ಮಾತ್ರ ಅಂತ ನಿರ್ಮಲಾ ಸೀತಾರಾಮನ್ ಹೇಳಿಕೆ.
– ಕ್ರಿಪ್ಟೋ ಹಾಗೂ ಇತರ ವರ್ಚುವಲ್ ಅಸೆಟ್ಸ್ ನಿಂದ ಗಳಿಸಿದ ಆದಾಯದ ಮೇಲೆ 30% ಟ್ಯಾಕ್ಸ್ ಘೋಷಣೆ.
– ಕ್ರಿಪ್ಟೋ ಗಿಫ್ಟ್ ಆಗಿ ಬಂದರೂ ಪಡೆದವರು ಟ್ಯಾಕ್ಸ್ ಕಟ್ಟಬೇಕು.
– ಪ್ರತೀ ಮಾರಾಟದ ವೇಳೆ ಲಾಭದಲ್ಲಿ 30% ಟ್ಯಾಕ್ಸ್ ಕಟ್ ಆಗಲಿದೆ.
– ಶೀಘ್ರದಲ್ಲೇ ಕ್ರಿಪ್ಟೋ ಅಸೆಟ್ಸ್ ನಿಯಂತ್ರಣಕ್ಕೆ ಕಾನೂನು ಬರುತ್ತೆ. ಅದು ಬರೋ ತನಕ ಇದರಲ್ಲಿ ಲಾಭ ಗಳಿಸಿದವರು ಟ್ಯಾಕ್ಸ್ ಕಟ್ಟದೆ ಇರೋ ಥರ ಫ್ರೀ ಬಿಡೋಕಾಗಲ್ಲ. ಹಾಗಾಗಿ ಕ್ರಿಪ್ಟೋ ಅಸೆಟ್ಸ್ ಮೇಲೆ ಈ ಟ್ಯಾಕ್ಸ್.

ತೆರಿಗೆಯಲ್ಲಿ ಏನೇನಾಯ್ತು?

– ತೆರಿಗೆ ಪಾವತಿಯಲ್ಲಿ ತಪ್ಪಾಗಿದ್ದರೆ ಸರಿಪಡಿಸಿ ಅಡಿಶನಲ್ ಟ್ಯಾಕ್ಸ್ ಕಟ್ಟಲು ಅಸೆಸ್ಮೆಂಟ್ ಇಯರ್ ನಂತರ 2 ವರ್ಷಗಳ ವರೆಗೆ ಅವಕಾಶ.
– ಸಹಕಾರ ಸಂಸ್ಥೆಗಳಿಗೆ ಆಲ್ಟರ್ನೇಟ್ ಮಿನಿಮಮ್ ಟ್ಯಾಕ್ಸ್ 18 ರಿಂದ 15%ಗೆ ಇಳಿಕೆ.
– ಸಹಕಾರ ಸಂಸ್ಥೆಗಳ ಮೇಲಿನ ಸರ್ಚಾರ್ಜ್ 12% ನಿಂದ 7% ಗೆ ಇಳಿಕೆ. 1 ಕೋಟಿಯಿಂದ 10 ಕೋಟಿವರೆಗೆ ಟರ್ನವರ್ ಇರೋ ಸಂಸ್ಥೆಗಳಿಗೆ ಅನ್ವಯ.
– ವಿಶೇಷ ಚೇತನರಿಗೆ ತೆರಿಗೆ ವಿನಾಯಿತಿ.
– ಕೇಂದ್ರ ರಾಜ್ಯ ಸರ್ಕಾರಿ ನೌಕರರಲ್ಲಿ ಸಮಾನತೆ ತರಲು ರಾಜ್ಯ ಸರ್ಕಾರಿ ನೌಕರರಿಗೂ ತೆರಿಗೆಯಲ್ಲಿ 14% ಡಿಡಕ್ಷನ್ಸ್.
– ಉಳಿದಂತೆ ತೆರಿಗೆ ಸಂಬಂಧ ದೊಡ್ಡ ಬದಲಾವಣೆ ಇಲ್ಲ. ಇನ್ಕಮ್ ಟ್ಯಾಕ್ಸ್ ಜಾಸ್ತಿ ಮಾಡಿಲ್ಲ, ಕಾರ್ಪೊರೇಟ್ ಆದಾಯದ ಮೇಲೂ ಕತ್ತರಿ ಇಲ್ಲ. ಅಂದ್ರೆ ಯಾವುದೇ ಡೇಂಜರ್ ಸಿಗ್ನಲ್ ಇಲ್ಲ. ಹೀಗಾಗಿ ಶೇರು ಮಾರುಕಟ್ಟೆಯಲ್ಲಿ ಜಿಗಿತ ಕಂಡುಬಂದಿದೆ. ಸೆನ್ಸೆಕ್ಸ್ ಇವತ್ತು 848 ಪಾಯಿಂಟ್ ರೈಸ್ ಆಗಿದೆ.

ಮೂಲಸೌಕರ್ಯ ಕ್ಷೇತ್ರ

– ಮುಂದಿನ 3 ವರ್ಷಗಳಲ್ಲಿ 100 PM ಗತಿ ಶಕ್ತಿ ರೇಲ್ವೇ ಟರ್ಮಿನಲ್ಸ್.
– 25 ಸಾವಿರ ಕಿಲೋಮೀಟರ್ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ.
– ಮುಂದಿನ 3 ವರ್ಷಗಳಲ್ಲಿ 400 ಹೊಸ ವಂದೇ ಭಾರತ್ ರೈಲುಗಳು.
– ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ಫಂಡಿಂಗ್ ನಲ್ಲಿ 27% ಹೆಚ್ಚಳ. ಒಟ್ಟು 19 ಸಾವಿರ ಕೋಟಿ ಮೀಸಲು.
– ಪರ್ವತ ಪ್ರದೇಶಗಳಲ್ಲಿ ಸಂಚಾರಕ್ಕೆ ಅನುಕೂಲವಾಗಲು ಪರ್ವತಮಾಲಾ ಯೋಜನೆ.
– ಹರ್ ಘರ್… ನಲ್ ಸೆ ಜಲ್ ಯೋಜನೆ ಮೂಲಕ 2022-23ರ ಒಳಗೆ 3.8 ಕೋಟಿ ಮನೆಗಳಿಗೆ ನಲ್ಲಿ ಮೂಲಕ ಶುದ್ಧ ಕುಡಿಯೋ ನೀರು. ಇದಕ್ಕಾಗಿ 60 ಸಾವಿರ ಕೋಟಿ ರೂಪಾಯಿ. ಈಗಾಗಲೇ 8 ಕೋಟಿ ಮನೆಗಳಿಗೆ ಈ ಯೋಜನೆಯ ಮೂಲಕ ಟ್ಯಾಪ್ ವಾಟರ್ ಸಂಪರ್ಕ ಕೊಟ್ಟಾಗಿದೆ.
– ಪಿಎಂ ಆವಾಸ್ ಯೋಜನಾ ಅಡಿಯಲ್ಲಿ ರೂರಲ್-ಅರ್ಬನ್ ಎರಡೂ ಸೇರಿ ಒಟ್ಟು 80 ಲಕ್ಷ ಮನೆ ನಿರ್ಮಾಣ. ಇದಕ್ಕಾಗಿ 48 ಸಾವಿರ ಕೋಟಿ.
– PM DEVELOPMENT INITIATIVE ಮೂಲಕ ಈಶಾನ್ಯ ಭಾರತದ ಅಭಿವೃದ್ಧಿಗೆ ವಿಶೇಷ ಯೋಜನೆ.
– ಗಡಿ ಗ್ರಾಮಗಳ ಅಭಿವೃದ್ಧಿಗೆ ವೈಬ್ರಂಟ್ ವಿಲೇಜಸ್ ಯೋಜನೆ.
– ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲು ಬ್ಯಾಟರಿ ಸ್ವಾಪಿಂಗ್ ಪಾಲಿಸಿ ಜಾರಿ
– 2030ರ ವೇಳೆಗೆ 280 ಗಿಗಾವ್ಯಾಟ್ ಸೋಲಾರ್ ಕೆಪ್ಯಾಸಿಟಿ ಬಿಲ್ಡ್ ಮಾಡಲು ಯೋಜನೆ.
– ಸೋಲಾರ್ ಕ್ಷೇತ್ರಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಯೋಜನೆ ಮೂಲಕ 19,500 ಕೋಟಿ ರೂಪಾಯಿ.
– ಗ್ರೀನ್ ಎನರ್ಜಿಗೆ ಹಣ ಹೊಂದಿಸಲು ಸಾವರಿನ್ ಗ್ರೀನ್ ಬಾಂಡ್ಸ್ ಇಶ್ಯೂ ಮಾಡಲಾಗುತ್ತೆ.
– ಬ್ಲೆಂಡಿಂಗ್ ಆಫ್ ಫ್ಯೂಲ್. ಅಂದ್ರೆ ಪೆಟ್ರೋಲ್ ಡೀಸೆಲ್ ಜೊತೆ ಎಥನಾಲ್ ಮತ್ತು ಬಯೋ ಡೀಸೆಲ್ ಮಿಕ್ಸ್ ಮಾಡಲು ಫೋರ್ಸ್ ಮಾಡಲು ಹೊಸ ತೆರಿಗೆ. ಬ್ಲೆಂಡಿಂಗ್ ಮಾಡದ ಫ್ಯೂಲ್ ಪ್ರತಿ ಲೀಟರ್ ಮೇಲೆ 2 ರೂಪಾಯಿ ಹೆಚ್ಚುವರಿ ಟ್ಯಾಕ್ಸ್ ಬರಲಿದೆ. ಅಕ್ಟೋಬರ್ 1 2022ರಿಂದ ಇದು ಜಾರಿಯಾಗುತ್ತೆ.
– ಟೆಲಿಕಮ್ಯುನಿಕೇಶನ್ ಕ್ಷೇತ್ರದಲ್ಲಿ ಇದೇ ವರ್ಷ 5G ಕ್ರಾಂತಿ. 5G ತರಂಗಾಂತರ ಹರಾಜು ನಡೆಸಿ 2022-23ರ ಅಂತ್ಯದೊಳಗೆ ದೇಶದಲ್ಲಿ 5G ಜಾರಿ ಆಗುತ್ತೆ.
– 5G ಉಪಕರಣ ಉತ್ಪಾದಕ ಕಂಪನಿಗಳಿಗೂ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಯೋಜನೆ ಮೂಲಕ ಉತ್ತೇಜನ ಕೊಡಲಾಗುತ್ತೆ.
– ಮೂಲಸೌಕರ್ಯ ಹೂಡಿಕೆಗೆ ರಾಜ್ಯಗಳಿಗೂ ಸಹಾಯ ಮಾಡುವ ಸಲುವಾಗಿ ಹೆಚ್ಚುವರಿ 1 ಲಕ್ಷ ಕೋಟಿ ಮೀಸಲು.

ಕೃಷಿ ಕ್ಷೇತ್ರ

– PM ಕಿಸಾನ್ ಯೋಜನೆಗೆ 68 ಸಾವಿರ ಕೋಟಿ ರೂಪಾಯಿ
– ಕೆಮಿಕಲ್ ಫ್ರೀ ನ್ಯಾಚುರಲ್ ಕೃಷಿಗೆ ಉತ್ತೇಜನ.
– ಕೃಷಿ ನಿರ್ವಹಣೆಗೆ ಡ್ರೋನ್ ಬಳಕೆ.
– ರೈತರಿಗೆ 2.3 ಲಕ್ಷ ಕೋಟಿ ರೂಪಾಯಿ MSP ಡೈರೆಕ್ಟ್ ಪೇಮೆಂಟ್.

ಆರ್ಥಿಕ ಅಭಿವೃದ್ಧಿ

– 9.2% ದರದಲ್ಲಿ ಆರ್ಥಿಕ ಅಭಿವೃದ್ಧಿ ನಿರೀಕ್ಷೆ.
– ECLGS., ಅಂದ್ರೆ EMERGENCY CREDIT LINE GUARANTEE SCHEME ಮಾರ್ಚ್ 2023ರ ವರೆಗೆ ವಿಸ್ತರಣೆ. ಈ ಯೋಜನೆ ಮೂಲಕ MSMEಗಳಿಗೆ., ಅಂದ್ರೆ ಮಧ್ಯಮ ಮತ್ತು ಸಣ್ಣ ಉದ್ದಿಮಗಳಿಗೆ ಸಾಲ ಸೌಲಭ್ಯ ಒದಗಿಸಲಾಗ್ತಿದೆ.
– ಈ ECLGS ಯೋಜನೆಗೆ ಈ ಸಲ 5 ಲಕ್ಷ ಕೋಟಿ ರೂಪಾಯಿ ಮೀಸಲು. ಈ ಮೊದಲು ಇದ್ದಿದ್ದು ಬರೀ 50 ಸಾವಿರ ಕೋಟಿ ರೂಪಾಯಿ.
– ECLGS ಹೊರತಾಗಿ., ‘ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್’ ಮೂಲಕ ಮಧ್ಯಮ ಮತ್ತು ಸಣ್ಣ ಉದ್ದಿಮೆಗಳಿಗೆ ಹೆಚ್ಚುವರಿ 2 ಲಕ್ಷ ಕೋಟಿ ಸಾಲ ಸೌಲಭ್ಯ.
– ಸ್ಟಾರ್ಟಪ್ ಗಳಿಗೆ ತೆರಿಗೆ ವಿನಾಯಿತಿ ಮುಂದುವರಿಸಲಾಗುತ್ತೆ.
– ದೇಶೀಯ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳಿಗೆ 15%ನ ‘ರಿಯಾಯಿತಿ ತೆರಿಗೆ’ ಯೋಜನೆ ಇನ್ನೊಂದು ವರ್ಷ ವಿಸ್ತರಣೆ ಮಾಡಲಾಗುತ್ತೆ.

ಆರೋಗ್ಯ ಕ್ಷೇತ್ರ

– ನ್ಯಾಶನಲ್ ಹೆಲ್ತ್ ಮಿಶನ್ ಗೆ 37,800 ಕೋಟಿ ರೂಪಾಯಿ
– ನ್ಯಾಶನಲ್ ಡಿಜಿಟಲ್ ಹೆಲ್ತ್ ಪ್ಲಾಟ್ ಫಾರ್ಮ್ ಸ್ಥಾಪನೆ.
– ನ್ಯಾಶನಲ್ ಟೆಲಿ ಮೆಂಟಲ್ ಹೆಲ್ತ್ ಸೆಂಟರ್ಸ್ ಸ್ಥಾಪನೆ.
– ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ನಾರಿ ಶಕ್ತಿ, ಮಿಶನ್ ಶಕ್ತಿ, ಮಿಶನ್ ವಾತ್ಸಲ್ಯ ಯೋಜನೆ.
– ಪೋಷಣ್ 2.0 ಮೂಲಕ ಮಕ್ಕಳಿಗೆ ಎಳೆಯ ವಯಸ್ಸಲ್ಲಿ ಬೇಕಾದ ಅಗತ್ಯ ಪೋಷಣೆಗೆ ಕ್ರಮ.
– PM ಸ್ವಾಸ್ಥ್ಯ ಸುರಕ್ಷಾ ಯೋಜನಾಗೆ 10,000 ಕೋಟಿ ರೂಪಾಯಿ.

ಶಿಕ್ಷಣ ಕ್ಷೇತ್ರ

– ರಾಷ್ಟ್ರೀಯ ಶಿಕ್ಷಣ ಮಿಶನ್ ಯೋಜನೆಗೆ 39,553 ಕೋಟಿ ರೂಪಾಯಿ
– ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡಲು ಡಿಜಿಟಲ್ ಯುನಿವರ್ಸಿಟಿ ಸ್ಥಾಪನೆ ಮಾಡಲಾಗುತ್ತೆ. ಇಂಟರ್ನೆಟ್, ಟಿವಿ, ರೇಡಿಯೋ ಮೂಲಕ E-COURSEಗಳ ಲಭ್ಯ ಆಗುವಂತೆ ಕ್ರಮ ಕೈಗೊಳ್ಳಲಾಗುತ್ತೆ.
– ಪ್ಯಾಂಡೆಮಿಕ್ ಕಾರಣ 2 ವರ್ಷ ಮಕ್ಕಳ ಶಿಕ್ಷಣ ಹಾಳಾಗಿದೆ. ವಿಶೇಷವಾಗಿ ಸರ್ಕಾರಿ ಶಾಲೆ ಮಕ್ಕಳಿಗೆ ಜಾಸ್ತಿ ಸಮಸ್ಯೆ ಆಗಿದೆ. ಹೀಗಾಗಿ ಸಪ್ಲಿಮೆಂಟರಿ ಶಿಕ್ಷಣ ನೀಡಲು 200 ಹೊಸ PM E – VIDYA ಟಿವಿ ಚಾನಲ್ ಸ್ಥಾಪನೆ.
– ಸಕ್ಷಮ್ ಅಂಗನ್ ವಾಡಿ ಯೋಜನೆ ಅಡಿಯಲ್ಲಿ ಹೊಸ ತಲೆಮಾರಿನ ಅಂಗನವಾಡಿಗಳ ನಿರ್ಮಾಣ. ಇಲ್ಲಿ ಆಡಿಯೋ ವಿಷುವಲ್ ಸೆಟ್ ಅಪ್ ಸೇರಿ ಆಧುನಿಕ ಮೂಲಸೌಕರ್ಯ ಇರುತ್ತೆ. ಇಂತಹ 2 ಲಕ್ಷ ಹೊಸ ಸಕ್ಷಮ್ ಅಂಗನ್ ವಾಡಿಗಳ ನಿರ್ಮಾಣ ಮಾಡಲಾಗುತ್ತೆ.
– ದೇಶದ ಎಲ್ಲ ರಾಜ್ಯಗಳ ಆಯ್ದ ITI ಗಳಲ್ಲಿ ಡ್ರೋನ್ ತರಬೇತಿಗೆ ಕೋರ್ಸ್ ಆರಂಭ ಮಾಡಲಾಗುತ್ತೆ.
– AVGC., ಅಂದ್ರೆ ಅನಿಮೇಶನ್, ವಿಷುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್. ಈ ವಲಯಕ್ಕೆ ಪ್ರೋತ್ಸಾಹ ನೀಡಲು ಟಾಸ್ಕ್ ಫೋರ್ಸ್ ರಚನೆ.
– ಗುಜರಾತ್ ನ GIFT ಸಿಟಿಯಲ್ಲಿ ವಿಶ್ವದರ್ಜೆಯ ಫಾರಿನ್ ಯೂನಿವರ್ಸಿಟಿಗಳಿಗೆ ಫಿನಾನ್ಶಿಯಲ್ ಮ್ಯಾನೇಜ್ಮೆಂಟ್, ಸೈನ್ಸ್, ಮ್ಯಾಥ್ಸ್ ಸಂಬಂಧಿತ ಇನ್ಸ್ಟಿಟ್ಯೂಟ್ ಸ್ಥಾಪಿಸಲು ಆಹ್ವಾನ.

ಉಳಿದಂತೆ..,

– 1.5 ಲಕ್ಷ ಪೋಸ್ಟ್ ಆಫೀಸ್ ಗಳನ್ನ ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಜೋಡಣೆ.
– ಡಿಜಿಟಲ್ ಬ್ಯಾಂಕಿಂಗ್ ಉತ್ತೇಜನ ನೀಡಲು ದೇಶದಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಕೇಂದ್ರಗಳ ಸ್ಥಾಪನೆ.
– ಮಿನಿಮಮ್ ಗವರ್ನಮೆಂಟ್ – ಮ್ಯಾಕ್ಸಿಮಮ್ ಗವರ್ನನ್ಸ್ ಚಿಂತನೆಯಡಿಯಲ್ಲಿ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಹಾಗೂ ಈಸ್ ಆಫ್ ಲಿವಿಂಗ್ ಕಡೆ ಗಮನ.
– ಚಿಪ್ ಆಧಾರಿತ E PASSPORTS ವ್ಯವಸ್ಥೆ ಇದೇ ವರ್ಷ ಜಾರಿ.
– ಭಾರತ ಸ್ವಾತಂತ್ರ್ಯ ಹೊಂದಿ ನೂರು ವರ್ಷ ಆಗಲು ಇನ್ನು 25 ವರ್ಷ ಇದೆ. ಆ ಇಂಡಿಯಾ @100 ಮೂಮೆಂಟ್ ವೇಳೆ ದೇಶದ 50% ಜನಸಂಖ್ಯೆ ನಗರಗಳಲ್ಲಿ ವಾಸವಾಗಿರುತ್ತೆ. ಹೀಗಾಗಿ ಭವಿಷ್ಯದ ಸುಸ್ಥಿರ ನಗರಗಳ ನಿರ್ಮಾಣಕ್ಕೆ ರೋಡ್ ಮ್ಯಾಪ್ ಮಾಡುತ್ತೇವೆ.
– LIC IPO ಬಗ್ಗೆ ಕೂಡ ಸ್ವಲ್ಪ ಮಾತಾಡಿದ್ರು.
– 2 ಸರ್ಕಾರಿ ಬ್ಯಾಂಕ್ ಖಾಸಗೀಕರಣ ಬಗ್ಗೆ ಬಜೆಟ್ ನಲ್ಲಿ ಏನೂ ಹೇಳಿಲ್ಲ.

ಅಂಕಿ ಅಂಶ

– ಬಂಡವಾಳ ವೆಚ್ಚದಲ್ಲಿ ಕಳೆದ ಬಾರಿಗಿಂಯ 35% ಹೆಚ್ಚಳ.
– ಒಟ್ಟು ಬಂಡವಾಳ ವೆಚ್ಚ 7.5 ಲಕ್ಷ ಕೋಟಿಗೆ ಏರಿಕೆ.
– GDP ಲೆಕ್ಕದಲ್ಲಿ ಈ ಸಲದ ಬಂಡವಾಳ ವೆಚ್ಚ GDPಯ 2.9 ಪರ್ಸೆಂಟ್ ಆಗುತ್ತೆ.
– ಈ ನಜೆಟ್ ಪ್ರಕಾರ 2022-23ರಲ್ಲಿ ಕೇಂದ್ರ ಸರ್ಕಾರ ಒಟ್ಟು 39 ಲಕ್ಷ ಕೋಟಿ ಖರ್ಚಾಗುತ್ತೆ.
– ಆದಾಯ ಬರೋದು 22 ಲಕ್ಷ ಕೋಟಿ ಮಾತ್ರ. (ಸಾಲ ಹೊರತುಪಡಿಸಿ)
– 2022-23 ವಿತ್ತೀಯ ಕೊರತೆ 6.4% ಅಂತ ಅಂದಾಜು. 2025-26ರ ವೇಳೆಗೆ ಇದನ್ನ 4.5% ಗೆ ಇಳಿಸುವ ಗುರಿ.

ಅತಿ ಹೆಚ್ಚು ದುಡ್ಡು ಪಡೆದ ಟಾಪ್ ಇಲಾಖೆಗಳು

ರಕ್ಷಣಾ ಇಲಾಖೆ – 5,25,166 ಕೋಟಿ ರೂಪಾಯಿ
ಗ್ರಾಹಕ, ಆಹಾರ ಮತ್ತು ನಾಗರಿಕ ಸರಬರಾಜು – 2,17,684 ಕೋಟಿ ರೂಪಾಯಿ
ರಸ್ತೆ ಸಾರಿಗೆ ಮತ್ತು ಹೆದ್ದಾರಿ – 1,99,107 ಕೋಟಿ ರೂಪಾಯಿ.
ಗೃಹ ಇಲಾಖೆ – 1,85,776 ಕೋಟಿ ರೂಪಾಯಿ.
ರೈಲ್ವೇಸ್ – 1,40,367 ಕೋಟಿ ರೂಪಾಯಿ
ಗ್ರಾಮೀಣಾಭಿವೃದ್ಧಿ – 1,38,203 ಕೋಟಿ ರೂಪಾಯಿ
ಕೃಷಿ ಇಲಾಖೆ – 1,32,513 ಕೋಟಿ ರೂಪಾಯಿ
ರಸಾಯನಿಕ ಮತ್ತು ಗೊಬ್ಬರ – 1,05,406 ಕೋಟಿ ರೂಪಾಯಿ

ಸರ್ಕಾರಕ್ಕೆ ದುಡ್ಡೆಲ್ಲಿಂದ ಬರುತ್ತೆ?

35% – ಸಾಲ ಮತ್ತು ಇತರೆ ಮೂಲಗಳಿಂದ
16% – GST
15% – ಇನ್ಕಮ್ ಟ್ಯಾಕ್ಸ್
15% – ಕಾರ್ಪೊರೇಟ್ ಟ್ಯಾಕ್ಸ್
07% – ಕೇಂದ್ರ ಅಬಕಾರಿ ಸುಂಕ
05% – ಕಸ್ಟಮ್ಸ್
05% – ತೆರಿಗೆಯೇತರ ಆದಾಯ
02% – ಸಾಲ ಹೊರತುಪಡಿಸಿದ ಪಾವತಿಗಳು

ಸರ್ಕಾರ ದುಡ್ಡು ಯಾವುದಕ್ಕೆ ಖರ್ಚು ಮಾಡುತ್ತೆ?

20% – ಸಾಲದ ಬಡ್ಡಿ ಕಟ್ಟೋಕೆ
17% – ತೆರಿಗೆಯಲ್ಲಿ ರಾಜ್ಯಗಳ ಪಾಲುಕೊಡೋಕೆ
15% – ಕೇಂದ್ರ ವಲಯದ ಸ್ಕೀಮ್ ಗಳಿಗೆ
10% – ಆರ್ಥಿಕ ಆಯೋಗ ಮತ್ತು ಇತರೆ ವರ್ಗಾವಣೆಗಳಿಗೆ
09% – ಕೇಂದ್ರ ಪ್ರಾಯೋಜಿತ ಯೋಜನೆಗಳು
09% – ಇತರೆ ವೆಚ್ಚಗಳು
08% – ರಕ್ಷಣಾ ಕ್ಷೇತ್ರಕ್ಕೆ
08% – ಸಬ್ಸಿಡಿಗಳು
04% – ಪಿಂಚಣಿ

-masthmagaa.com

Contact Us for Advertisement

Leave a Reply