ರೂಲ್ಸ್ ಫಾಲೋ ಮಾಡದ ಟ್ವಿಟ್ಟರ್​​ಗೆ ಐಟಿ ಹೊಸ ಸಚಿವರ ವಾರ್ನಿಂಗ್!

masthmagaa.com:

ಹೊಸ ಐಟಿ ರೂಲ್ಸ್​ ಫಾಲೋ ಮಾಡಿದ್ರೂ ಕೂಡ ನಕ್ರಾ ಮಾಡ್ತಿರೋ ಟ್ವಿಟ್ಟರ್​​​ಗೆ​​ ದೆಹಲಿ ಹೈಕೋರ್ಟ್​​ ಮಂಗಳಾರತಿ ಮಾಡಿದೆ. ಒಂದ್ವೇಳೆ ಟ್ವಿಟರ್ ಐಟಿ ಇಲಾಖೆಯ ರೂಲ್ಸ್​ಗಳನ್ನು ಫಾಲೋ ಮಾಡದೇ ಇದ್ರೆ, ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಸ್ವತಂತ್ರವಾಗಿದೆ. ನಾವು ಯಾವುದೇ ರೀತಿಯ ಮಧ್ಯಂತರ ರಕ್ಷಣೆ ನೀಡಲು ಸಾಧ್ಯವಿಲ್ಲ ಅಂತ ಸ್ಪಷ್ಟಪಡಿಸಿದೆ. ಜೊತೆಗೆ ಮಧ್ಯಂತರ ಅಧಿಕಾರಿಗಳ ನೇಮಕದ ಕುರಿತು ಅಫಿಡವಿಟ್ ಸಲ್ಲಿಸಿ ಅಂತ ಟ್ವಿಟರ್​ಗೆ ಸೂಚಿಸಿ, ವಿಚಾರಣೆಯನ್ನು ಜುಲೈ 28ಕ್ಕೆ ಮುಂದೂಡಿದೆ. ಆದ್ರೆ ಟ್ವಿಟ್ಟರ್ ಮಾತ್ರ ಕುಂದುಕೊರತೆ ಅಧಿಕಾರಿ ನೇಮಕಕ್ಕೆ 8 ವಾರ ಟೈಂ ಬೇಕು ಅಂತ ಮನವಿ ಮಾಡಿದ್ದು, ಜುಲೈ 11ರಂದು ತನ್ನ ಮೊದಲ ವರದಿಯನ್ನು ಪಬ್ಲಿಕ್ ಮಾಡೋದಾಗಿ ಹೇಳಿದೆ. ಇನ್ನು ಐಟಿ ಖಾತೆಯ ಸಚಿವರಾದ ಮೊದಲ ದಿನವೇ ಅಶ್ವಿನಿ ವೈಷ್ಣವ್ ಟ್ವಿಟ್ಟರ್​​​​ಗೆ ವಾರ್ನಿಂಗ್ ಕೊಟ್ಟಿದ್ದಾರೆ. ದೇಶದ ಕಾನೂನೇ ಎಲ್ಲಕ್ಕಿಂತ ಮೇಲು.. ಕಾನೂನು ಫಾಲೋ ಮಾಡಿ ಅಂತ ಟ್ವಿಟ್ಟರ್​​​ಗೆ ಸೂಚಿಸಿದ್ದಾರೆ. ಮತ್ತೊಂದ್ಕಡೆ ಹೊಸ ಐಟಿ ರೂಲ್ಸ್ ಅಧಿಕಾರಿಗಳಿಗೆ​ ಮಾಧ್ಯಮಗಳ ವಾಕ್ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಅಧಿಕಾರ ನೀಡುತ್ತೆ ಅಂತ 25 ಪ್ರಮುಖ ಮಾಧ್ಯಮ ಸಂಸ್ಥೆಗಳು ಕೇರಳ ಹೈಕೋರ್ಟ್​ ಮೆಟ್ಟಿಲೇರಿವೆ.

-masthmagaa.com

Contact Us for Advertisement

Leave a Reply