ಲೋಕಸಭೆ ಭದ್ರತಾ ಕಾರ್ಯದರ್ಶಿ ನೇಮಕಕ್ಕೆ ರಾಜ್ಯಗಳಿಗೆ ಆದೇಶ!

masthmagaa.com:

ಸಂಸತ್‌ ಭದ್ರತಾ ಲೋಪ ಕೇಸ್‌ಗೆ ಸಂಬಂಧಿಸಿದಂತೆ ಕಳೆದ 48 ದಿನಗಳಿಂದ ಖಾಲಿ ಇರೋ ಲೋಕಸಭಾ ಭದ್ರತಾ ಜಂಟಿ ಕಾರ್ಯದರ್ಶಿ ಹುದ್ದೆಗೆ ಅಧಿಕಾರಿ ನೇಮಿಸೋಕೆ ಸರ್ಕಾರ ಮುಂದಾಗಿದೆ. ಅಕ್ಟೋಬರ್‌ 20 ರಂದು ಈ ಹುದ್ದೆಯಲ್ಲಿದ್ದ IPS ಅಧಿಕಾರಿ ರಘುಬೀರ್‌ ಲಾಲ್‌ರನ್ನ ವರ್ಗಾವಣೆ ಮಾಡಲಾಗಿತ್ತು. ಆಗಿನಿಂದ ಈ ಹುದ್ದೆ ಖಾಲಿಯಿತ್ತು. ಅಂದ್ರೆ ಲೋಕಸಭೆಯಲ್ಲಿ ಭದ್ರತಾ ಲೋಪವಾದಾಗ್ಲೂ ಕೂಡ ಭದ್ರತಾ ಕಾರ್ಯದರ್ಶಿಯೇ ಇರಲಿಲ್ಲ. ಇದೀಗ ಕೇಂದ್ರ ಸರ್ಕಾರ ಈ ಹುದ್ದೆಗೆ DG ದರ್ಜೆಯ ಅಧಿಕಾರಿ ನೇಮಿಸೋಕೆ ಸೂಕ್ತ ಅಧಿಕಾರಿಯನ್ನ ನಾಮಿನೇಟ್‌ ಮಾಡಿ ಅಂತ ರಾಜ್ಯ ಸರ್ಕಾರಗಳನ್ನ ಕೇಳಿದೆ. ಈ ಬಗ್ಗೆ ಗೋವಾ, ಮಿಜೊರಾಮ್‌ ಹಾಗೂ ಅರುಣಾಚಲ ಪ್ರದೇಶಗಳನ್ನ ಬಿಟ್ಟು ಉಳಿದೆಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ. ಡಿಸೆಂಬರ್‌ 20ರೊಳಗೆ ಮೇಲ್‌ ಮೂಲಕ ಉತ್ತರ ನೀಡಿ ಅಂತ ಕೇಳಿದೆ. ಇನ್ನು ಸಂಸತ್‌ ಭದ್ರತಾ ಲೋಪದ ಬಗ್ಗೆ ನ್ಯಾಯಾಂಗ ತನಿಖೆಯಾಗ್ಬೇಕು ಅಂತ ವಕೀಲರೊಬ್ರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ನಿವೃತ್ತ ನ್ಯಾಯಾಧೀಶರೊಬ್ಬರ ಮೇಲ್ವಿಚಾರಣೆಯಲ್ಲಿ ಈ ಬಗ್ಗೆ ತನಿಖೆಯಾಗ್ಬೇಕು ಅಂತ ಈ ಅರ್ಜಿಯಲ್ಲಿ ಕೇಳಲಾಗಿದೆ.

-masthmagaa.com

Contact Us for Advertisement

Leave a Reply