ಪ್ರಧಾನಿ ಮೋದಿ ದಾರೀಲಿ ಭದ್ರತಾ ವೈಫಲ್ಯ! ಪೊಲೀಸರಿಗೆ ಮೊದಲೇ ಗೊತ್ತಿತ್ತಾ?

masthmagaa.com:

ಪ್ರಧಾನಿ ಮೋದಿ ಪಂಜಾಬ್ ಭೇಟಿ ವೇಳೆ ಭದ್ರತಾ ವೈಫಲ್ಯ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿದೆ. ಅವರು ಬರೋ ದಾರಿಯಲ್ಲಿ ಪ್ರತಿಭಟನೆ ನಡೆಯೋ ಬಗ್ಗೆ ಮೊದಲೇ ಗುಪ್ತಚರ ಅಧಿಕಾರಿಗಳು ಮಾಹಿತಿ ನೀಡಿದ್ರು ಅಂತ ಗೊತ್ತಾಗಿದೆ. ಗುಪ್ತಚರ ಇಲಾಖೆ ಅಧಿಕಾರಿಗಳು ಪಂಜಾಬ್ ಪೊಲೀಸರ ಜೊತೆ ನಿರಂತರವಾಗಿ ಟಚ್​ನಲ್ಲಿದ್ರು. ನಾವು ಎಲ್ಲಾ ರೀತಿಯ ಭದ್ರತೆ ನೀಡ್ತೀವಿ ಅಂತ ಪೊಲೀಸರು ಕೂಡ ಭರವಸೆ ನೀಡಿದ್ರು. ಆದ್ರೂ ಕೂಡ ಪಂಜಾಬ್ ಪೊಲೀಸರು ಎಸ್​​ಪಿಜಿ ಅಂದ್ರೆ ಸ್ಪೆಷಲ್ ಪ್ರೊಟೆಕ್ಷನ್​​​ ಗ್ರೂಪ್​​ನ ಬ್ಲೂಬುಕ್ ಫಾಲೋ ಮಾಡಲಿಲ್ಲ. ಪ್ರಧಾನಿ ಮೋದಿ ಬರೋ ದಾರಿಯನ್ನು ತೆರವುಗೊಳಿಸಲು ಸಿದ್ಧತೆ ಮಾಡಿಕೊಳ್ಳಲಿಲ್ಲ ಅಂತ ಗೃಹಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಂದಹಾಗೆ ಈ ಬ್ಲೂಬುಕ್ ಪ್ರಧಾನ ಮಂತ್ರಿಯ ಭದ್ರತೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ನೀಡುತ್ತೆ. ಇದ್ರ ಪ್ರಕಾರ ನಿನ್ನೆ ರೀತಿಯ ಘಟನೆಗಳು ನಡೆದಾಗ ಪ್ರಧಾನಿಗೆ ಹೋಗೋಕೆ ಬೇರೆ ಮಾರ್ಗವನ್ನು ರೆಡಿ ಮಾಡಬೇಕಿತ್ತು. ಆದ್ರೆ ಇಲ್ಲಿ ಪೊಲೀಸರು ಆ ರೀತಿಯ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೀಗಾಗಿ ಗೃಹಸಚಿವಾಲಯ ನಿನ್ನೆ ಎಲ್ಲೆಲ್ಲಿ ಎಷ್ಟೆಷ್ಟು ಮಂದಿ ಪೊಲೀಸರನ್ನು ನಿಯೋಜಿಸಿದ್ರಿ? ಎಷ್ಟು ಬ್ಯಾರಿಕೇಡ್​​ ಹಾಕಿದ್ರಿ? ಭದ್ರತೆಗೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ರಿ ಅಂತ ಪಂಜಾಬ್ ಪೊಲೀಸರ ಬಳಿ ಮಾಹಿತಿ ಕೇಳಿದೆ.

-masthmagaa.com

Contact Us for Advertisement

Leave a Reply