ಬರ್ತಿದೆ ಮತ್ತೊಂದು ಸ್ವದೇಶಿ ಲಸಿಕೆ! ಕೇಂದ್ರದಿಂದ 30 ಕೋಟಿ ಡೋಸ್ ಬುಕ್!

masthmagaa.com:

ಕೋವ್ಯಾಕ್ಸಿನ್ ಬಳಿಕ ಭಾರತದ 2ನೇ ಸ್ವದೇಶಿ ಲಸಿಕೆಯಾದ ಹೈದ್ರಾಬಾದ್ ಮೂಲದ ಬಯೋಲಾಜಿಕಲ್ `ಇ’ಯ 30 ಕೋಟಿ ಡೋಸ್ ಲಸಿಕೆಯನ್ನು ಕೇಂದ್ರ ಸರ್ಕಾರ ಬುಕ್ ಮಾಡಿದೆ. ಅದಕ್ಕೆ ಈಗಾಗಲೇ 30 ಕೋಟಿ ರೂಪಾಯಿ ಅಡ್ವಾನ್ಸ್ ಕೂಡ ನೀಡಿದೆ. ಅಂದಹಾಗೆ ಈ ಲಸಿಕೆ ಪ್ರಯೋಗ ಹಂತದಲ್ಲಿದ್ದು, ಕೆಲವೇ ತಿಂಗಳಲ್ಲಿ ಗ್ರೀನ್ ಸಿಗ್ನಲ್ ಪಡೆಯೋ ಸಾಧ್ಯತೆ ಇದೆ. ಆಗಸ್ಟ್​​ನಿಂದ ಡಿಸೆಂಬರ್​​ವರೆಗೆ ಈ ಲಸಿಕೆಯನ್ನು ಉತ್ಪಾದಿಸಿ ಸ್ಟಾಕ್ ಮಾಡಿಟ್ಟುಕೊಳ್ಳಲು ಕೇಂದ್ರ ಸರ್ಕಾರ ಪ್ಲಾನ್ ಮಾಡ್ಕೊಂಡಿದೆ. ಕಳೆದ ನವೆಂಬರ್​​ನಲ್ಲಿ 1 ಮತ್ತು 2ನೇ ಹಂತದ ಪ್ರಯೋಗ ಆರಂಭಿಸಿದ್ದ ಬಯಾಲಾಜಿಕಲ್ ಇ ಸಂಸ್ಥೆ, ಇದ್ರ ಅಂಕಿ ಅಂಶವನ್ನು ಮಾಹಿತಿಯನ್ನು ಇನ್ನೂ ಬಹಿರಂಪಡಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಂಸ್ಥೆ ಮುಖ್ಯಸ್ಥ ಮಹಿಮಾ ಡಾಟ್ಲಾ, ಸಕಾರಾತ್ಮಕ ಮತ್ತು ಆಶಾದಾಯಕವಾಗಿದೆ ಅಂತಷ್ಟೇ ಹೇಳಿದ್ರು. ಇದ್ರ ನಡುವೆಯೇ ಏಪ್ರಿಲ್​​ 24ರಿಂದ 3ನೇ ಹಂತದ ಪ್ರಯೋಗ ಶುರು ಮಾಡಿತ್ತು. ಮೂರನೇ ಹಂತದ ಪ್ರಯೋಗ ದೇಶದ 15 ಕಡೆ ನಡೀತಾ ಇದ್ದು, ಒಟ್ಟು 1268 ಮಂದಿ ಇದ್ರಲ್ಲಿ ಭಾಗಿಯಾಗಿದ್ದಾರೆ. ಅಂದಹಾಗೆ ಕೇಂದ್ರ ಸರ್ಕಾರ ಒಂದೂವರೆ ಸಾವಿರ ಕೋಟಿ ರೂಪಾಯಿಗೆ 30 ಕೋಟಿ ಡೋಸ್ ಲಸಿಕೆ ಪಡೆಯಲು ಈ ಒಪ್ಪಂದ ಮಾಡಿಕೊಂಡಿದೆ. ಅಂದ್ರೆ ಒಂದು ಡೋಸ್​​ಗೆ 50 ರೂಪಾಯಿ ಬೀಳುತ್ತೆ. ಆದ್ರೆ ಖಾಸಗಿ ವಲಯಕ್ಕೆ ಈ ಲಸಿಕೆ ಬೆಲೆ ಎಷ್ಟಿರುತ್ತೆ ಅನ್ನೋ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಒಂದೂವರೆ ಡಾಲರ್ ಅಂದ್ರೆ 110 ರೂಪಾಯಿವರೆಗೆ ಇರಬಹುದು ಅಂತ ಅಂದಾಜಿಸಲಾಗಿದೆ ಅಷ್ಟೆ., ಭಾರತದಲ್ಲಿ ಈವರೆಗೆ ಕೋವಿಶೀಲ್ಡ್​​, ಕೋವ್ಯಾಕ್ಸಿನ್ ಮತ್ತು ಸ್ಪುಟ್ನಿಕ್ ಲಸಿಕೆಗಳಿಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಇದ್ರಲ್ಲಿ ಹೆಚ್ಚಾಗಿ ಅಂದ್ರೆ 90 ಪರ್ಸೆಂಟ್​​ನಷ್ಟು ಕೋವಿಶೀಲ್ಡ್ ಲಸಿಕೆಯನ್ನೇ ಹಾಕಲಾಗಿದೆ.

-masthmagaa.com

Contact Us for Advertisement

Leave a Reply