ದೆಹಲಿ: ಸಬ್ಸಿಡಿಯಲ್ಲಿ ಟೊಮೆಟೊ ಮಾರಾಟ ಮಾಡಿದ ಕೇಂದ್ರ ಸರ್ಕಾರ

masthmagaa.com:

ದೇಶದಲ್ಲಿ ಗಗನಕ್ಕೇರಿರೋ ಟೊಮೆಟೊ ಬೆಲೆಯನ್ನ ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಹಿನ್ನಲೆಯಲ್ಲಿ ದೆಹಲಿ, ಲಕ್ನೋ ಹಾಗೂ ಪಾಟ್ನಾ ಸೇರಿದಂತೆ ಕೆಲವು ನಗರಗಳಲ್ಲಿ ಸಬ್ಸಿಡಿ ದರದಲ್ಲಿ ಟೊಮೆಟೊ ಮಾರಾಟ ಮಾಡೋಕೆ ಪ್ರಾರಂಭಿಸಿದೆ. ಪ್ರತಿ ಕೆಜಿಗೆ 90 ರೂಪಾಯಿ ದರದಲ್ಲಿ ಟೊಮೆಟೊ ಮಾರಾಟ ಮಾಡುತ್ತಿದೆ. ಆದ್ರೆ ಸಬ್ಸಿಡಿ ಮೂಲಕ ಪ್ರತಿವ್ಯಕ್ತಿ 2 ಕೆಜಿ ಟೊಮೆಟೊ ಮಾತ್ರ ಖರೀದಿಸಬಹುದು ಅಂತ ತಿಳಿಸಲಾಗಿದೆ. ಇನ್ನು ಅತಿಹೆಚ್ಚು ಟೊಮೆಟೊ ಬೆಳಯುವ ಆಂಧ್ರಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರದ ಮಂಡಿಗಳಿಂದ ಟೊಮೆಟೊಗಳು ದೆಹಲಿಗೆ ತಲುಪಿವೆ.

masthmagaa.com

Contact Us for Advertisement

Leave a Reply