masthmagaa.com:

ಒಟಿಟಿ ಪ್ಲಾಟ್​​ಫಾರ್ಮ್​ಗಳನ್ನ (ನೆಟ್​ಫ್ಲಿಕ್ಸ್​, ಅಮೆಜಾನ್ ಪ್ರೈಂ ವಿಡಿಯೋ, ಇತ್ಯಾದಿ) ನಿಯಂತ್ರಣ ಮಾಡಲು ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ಮಾರ್ಗಸೂಚಿ ‘ಹಲ್ಲಿಲ್ಲದ ಹಾವಿನಂತಿದೆ. ಏನಾದ್ರೂ ಸಮಸ್ಯೆಯಾದ್ರೆ ಒಟಿಟಿ ಪ್ಲಾಟ್​ಫಾರ್ಮ್​ಗಳ ವಿರುದ್ಧ ತನಿಖೆ ನಡೆಸಲು ಮತ್ತು ಕಾನೂನು ಕ್ರಮ ಜರುಗಿಸಲು ಮಾರ್ಗಸೂಚಿಯಲ್ಲಿ ಅವಕಾಶಗಳೇ ಇಲ್ಲ’ ಅಂತ ಸುಪ್ರೀಂಕೋರ್ಟ್​ ಹೇಳಿದೆ. ಅಲ್ಲದೆ, ಒಟಿಟಿ ಪ್ಲಾಟ್​ಫಾರ್ಮ್​​ಗಳನ್ನ ಕಂಟ್ರೋಲ್ ಮಾಡಲು ಮಾರ್ಗಸೂಚಿ ಮಾತ್ರ ಸಾಕಾಗಲ್ಲ. ಅದಕ್ಕೆ ಕಾನೂನು ರೂಪಿಸಿ ಒಂದು ನಿಯಂತ್ರಣ ವ್ಯವಸ್ಥೆಯನ್ನ ಜಾರಿಗೆ ತರಬೇಕು ಅಂತಾನೂ ಸುಪ್ರೀಂಕೋರ್ಟ್ ಹೇಳಿದೆ. ಅಂದ್ಹಾಗೆ ಅಮೆಜಾನ್​ ಪ್ರೈಂ ವಿಡಿಯೋದಲ್ಲಿನ ‘ತಾಂಡವ್’ ವೆಬ್​ ಸೀರಿಸ್​ನಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಅನ್ನೋ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅದರ ವಿಚಾರಣೆ ವೇಳೆ ಕೋರ್ಟ್​ ಈ ರೀತಿ ಹೇಳಿದೆ. ಜೊತೆಗೆ ಅಮೆಜಾನ್ ಪ್ರೈಂ ವಿಡಿಯೋದ ಇಂಡಿಯಾ ಹೆಡ್​ ಅಪರ್ಣ ಪುರೋಹಿತ್​ರನ್ನ ಅರೆಸ್ಟ್ ಮಾಡದಂತೆಯೂ ಸೂಚಿಸಿದೆ. ಆದ್ರೆ ತನಿಖೆಗೆ ಅಪರ್ಣ ಪುರೋಹಿತ್​ ಸಹಕರಿಸಬೇಕಿದೆ.

-masthmagaa.com

Contact Us for Advertisement

Leave a Reply