ಚಂದನ್ ಶೆಟ್ಟಿಯ ರ‍್ಯಾಪ್ ಸಾಂಗ್ ‘ಸಲಿಗೆ’ ಮೇ 28ಕ್ಕೆ ರಿಲೀಸ್

masthmagaa.com:

ಕನ್ನಡದ ರ‍್ಯಾಪರ್‌ ಹಾಗೂ ಗೀತರಚನೆಕಾರ ಚಂದನ್ ಶೆಟ್ಟಿ ಅವರ ಮುಂದಿನ ಪ್ರಾಜೆಕ್ಟ್‌ ‘ಸಲಿಗೆ’  ಮೇ 28 ರಂದು ಬಿಡುಗಡೆಯಾಗಲಿದ್ದು,  ಈ ಹಾಡಿನ ಚಿತ್ರೀಕರಣವನ್ನ ಕೆನಡಾದಲ್ಲಿ ದೊಡ್ಡ ಮಟ್ಟದಲ್ಲಿ ಮಾಡಲಾಗಿದೆ.

ಅಂದಹಾಗೆ ಇದು ಚಂದನ್ ಶೆಟ್ಟಿ ಅವರ 12 ನೇ ಹಾಡು. 2019ರಲ್ಲೇ ಕಾಂಪೋಸ್ ಮಾಡಲಾಗಿದ್ದ ಸಲಿಗೆ, ಕನ್ನಡದಲ್ಲಿ ಈ ಹಿಂದೆ ಇಂಥ ಪ್ರಯೋಗ ಎಂದೂ ಮಾಡಿಲ್ಲ. ಹೀಗಾಗಿ ಹಾಡನ್ನು ಬಿಡುಗಡೆ ಮಾಡಲು ಹಿಂದುಮುಂದು ನೋಡುತ್ತಿದ್ದೆ. 2019ರಲ್ಲಿ ಕೆನಡಾಗೆ ಟೂರ್‌ ಮಾಡಿದ ವೇಳೆ ಹಾಡನ್ನು ಟೊರಾಂಟೋ, ಮಾಂಟ್ರಿಯಲ್ ಹಾಗೂ ನಯಾಗರಾ ಜಲಪಾತದ ಬಳಿ ಶೂಟಿಂಗ್ ಮಾಡಲಾಗಿದ್ದು ಎಂದು ಚಂದನ್ ಶೆಟ್ಟಿ ಹೇಳಿಕೊಂಡಿದ್ದಾರೆ..

3 ಪೆಗ್, ಚಾಕೊಲೇಟ್ ಗರ್ಲ್, ಟಕಿಲಾ, ಫೈರ್ ಮತ್ತು ಪಾರ್ಟಿ ಫ್ರೀಕ್ ನಂತಹ ಸಿಂಗಲ್ಸ್‌ಗೆ ಹೆಸರುವಾಸಿಯಾಗಿರುವ ಚಂದನ್ ಶೆಟ್ಟಿ , ಚಲನಚಿತ್ರಗಳಿಗೂ ಕೂಡ ಸಂಗೀತ ಸಂಯೋಜಿಸುತ್ತಿದ್ದು ಇತ್ತೀಚೆಗೆ ಬಿಡುಗಡೆಯಾಗಿದ್ದ ಪೊಗರು ಚಿತ್ರದ ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ದವು.
-masthmagaa.com
Contact Us for Advertisement

Leave a Reply