ಚಂದ್ರನ ಅಂಗಳದಲ್ಲಿ ತಾಪಮಾನ ಪರೀಕ್ಷೆ ನಡೆಸಿದ ವಿಕ್ರಮ್‌!

masthmagaa.com:

ಚಂದ್ರನ ಅಂಗಳದ ಮೇಲೆ ಓಡಾಟ ಪ್ರಾರಂಭಿಸಿರುವ ಪ್ರಗ್ಯಾನ್‌ ರೋವರ್‌ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಚಂದ್ರಯಾನ-3 ಮಿಷನ್‌ ಬಗ್ಗೆ ಇಸ್ರೋ ಮತ್ತೊಂದು ಬಿಗ್‌ ಅಪ್‌ಡೇಟ್‌ ಕೊಟ್ಟಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ ಲ್ಯಾಂಡ್‌ ಆಗಿರುವ ವಿಕ್ರಮ್‌ ಲ್ಯಾಂಡರ್‌ನಲ್ಲಿರುವ ChaSTE ಅಂದ್ರೆ Chandra’s Surface Thermophysical Experiment ಪೇಲೋಡ್‌ ಚಂದ್ರನ ಮೇಲ್ಮೈ ನಿಂದ ಮೊದಲ ಮಹತ್ವದ ಮಾಹಿತಿಯನ್ನು ಇಸ್ರೋಗೆ ರವಾನಿಸಿದೆ. ಚಂದ್ರನ ಮೇಲ್ಮೈಯ ತಾಪಮಾನ ಅರ್ಥ ಮಾಡಿಕೊಳ್ಳಲು ಚೇಸ್ಟ್ ಚಂದ್ರನ ಮೇಲ್ಪದರವನ್ನು 10 ಸೆಂಟಿಮೀಟರ್‌ನಷ್ಟು ಕೊರೆದು ಅದರ ಮಾಹಿತಿಯನ್ನ ಇಸ್ರೋಗೆ ರವಾನೆ ಮಾಡಿದೆ. ಇದ್ರಲ್ಲಿ 10 ಸೆಂ.ಮೀ ಆಳದವರೆಗಿನ ತಾಪಮಾನದ ಮಾಹಿತಿ ಹಾಗೂ ತಾಪಮಾನದಲ್ಲಿ ವ್ಯತ್ಯಾಸ ಕಂಡುಬರುವ ಗ್ರಾಫ್‌ವೊಂದನ್ನು ಹಂಚಿಕೊಂಡಿದೆ. ಚಂದ್ರನ ಆಳಕ್ಕೆ ಹೋದಂತೆ ತಾಪಮಾನ ಕಡಿಮೆಯಾಗಿರೋದು ಇದ್ರಲ್ಲಿ ಕಂಡುಬಂದಿದೆ. ಇದರರ್ಥ, ಚಂದ್ರನ ಮೇಲ್ಪದರ, ಚಂದ್ರನ ಒಳಪದರಗಳಿಗೆ ಒಂಥರ ಇನ್ಸುಲೇಟರ್‌ ಥರ ಕೆಲಸ ಮಾಡುತ್ತೆ ಅನ್ನೋದು ಇದ್ರಲ್ಲಿ ಗೊತ್ತಾಗ್ತಿದೆ.
ಅಂದ್ಹಾಗೆ ವಿಕ್ರಂ ಲ್ಯಾಂಡರ್‌ನಲ್ಲಿರುವ ಈ ChaSTE ಉಪಕರಣ ಚಂದ್ರನ ಅಂಗಳದ ಥರ್ಮೋ ಫಿಸಿಕಲ್‌ ಗುಣಗಳನ್ನ ಸ್ಟಡಿ ಮಾಡುತ್ತೆ. ಅಂದ್ರೆ ವಾತಾವರಣದ ಟೆಂಪರೇಚರ್‌ನಲ್ಲಿ ಬದಲಾವಣೆಯಾದಾಗ ಚಂದ್ರನ ನೆಲ ಆ ಶಾಖವನ್ನ ಕಂಡಕ್ಟ್‌ ಅಂದ್ರೆ ಪಾಸ್‌ ಮಾಡುತ್ತಾ? ಮಾಡಿದ್ರು ಎಷ್ಟು ಪ್ರಮಾಣದಲ್ಲಿ ಕಂಡಕ್ಟ್‌ ಮಾಡುತ್ತೆ? ಅನ್ನೋದನ್ನ ಸ್ಟಡಿ ಮಾಡುತ್ತೆ. ಇದ್ರಿಂದ ನಮಗೆ ಚಂದ್ರನ ಮೇಲ್ಮೈ ಲಕ್ಷಾಂತರ ವರ್ಷಗಳಲ್ಲಿ ಹೇಗೆ ರೂಪಗೊಳ್ತು ಅಂತ ಗೊತ್ತಾಗುತ್ತೆ. ಈ ಮಾಹಿತಿಯನ್ನ ನಾವು ಬಳಿಕ ಭೂಮಿಯ ಭೌಗೋಳಿಕ ಇತಿಹಾಸಕ್ಕೆ ಕಂಪೇರ್‌ ಮಾಡಿದ್ರೆ ಭೂಮಿ ಹೇಗೆ ಸೃಷ್ಟಿಯಾಯ್ತು ಅನ್ನೋದನ್ನ ತಿಳ್ಕೋಳೋದಕ್ಕೆ ಹೆಲ್ಪ್‌ ಆಗುತ್ತೆ.

-masthmagaa.com

Contact Us for Advertisement

Leave a Reply