ಚಂದ್ರಯಾನ-2 ಹಾರ್ಡ್ ಲ್ಯಾಂಡಿಂಗ್.. ಫೋಟೋ ತೆಗೆದ ನಾಸಾ

ಚಂದ್ರಯಾನ-2ನ ವಿಕ್ರಮ್ ಲ್ಯಾಂಡರ್ ಹಾರ್ಡ್ ಲ್ಯಾಂಡಿಂಗ್ ಆಗಿದೆ ಅಂತ ನಾನಾ ತಿಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ನಾಸಾ, ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಾಗ ಹಾರ್ಡ್ ಲ್ಯಾಂಡ್ ಆಗಿದೆ. ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆದ ಜಾಗದ ಫೋಟೋ ತೆಗೆದಿರುವ ನಾಸಾ ಟ್ವಿಟ್ಟರ್‍ನಲ್ಲಿ ಹಾಕಿದೆ. ಆದ್ರೆ ನಮ್ಮ ವಿಜ್ಞಾನಿಗಳ ತಂಡ ವಿಕ್ರಮ್ ಲ್ಯಾಂಡರ್‍ನ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಅಂತಲೂ ಹೇಳಿದೆ. ಅಕ್ಟೋಬರ್ ತಿಂಗಳಲ್ಲಿ ಅನುಕೂಲಕವಾಗಿ ಬೆಳಕು ಇರೋದರಿಂದ ಆಗ ಇನ್ನೂ ಹೆಚ್ಚಿನ ಫೋಟೋಗಳನ್ನು ತೆಗೆಯುತ್ತೇವೆ ಅಂತ ನಾಸಾ ಟ್ವೀಟ್ ಮಾಡಿದೆ. ಸೆಪ್ಟೆಂಬರ್ 17ರಂದು ನಾಸಾದ ಉಪಗ್ರಹ ಈ ಫೋಟೋಗಳನ್ನು ಸೆರೆ ಹಿಡಿದಿದೆ.

ಸೆಪ್ಟೆಂಬರ್ 7ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವಾಗ ಸಂಪರ್ಕ ಕಳೆದುಕೊಂಡಿತ್ತು. ಸೆಪ್ಟೆಂಬರ್ 21ರಂದು ವಿಕ್ರಮ್ ಲ್ಯಾಂಡರ್ ಜೀವಿತಾವಧಿಯೂ ಮುಗಿದುಹೋಗಿತ್ತು.

Contact Us for Advertisement

Leave a Reply