ಮದುವೆಗೆ ಬಾರದವರಿಗೆ ಊಟದ ಬಿಲ್ ಕಳುಹಿಸಿದ ಮಧುಮಕ್ಕಳು!

masthmagaa.com:

ಮದುವೆ ಮನೆಯಲ್ಲಿ ಊಟ ತುಂಬಾ ಮುಖ್ಯ.. ಮದ್ವೆ ಹೇಗೆ ಆಗ್ಲಿ.. ಅದ್ರ ಊಟದ ಬಗ್ಗೆ ಮಾತ್ರ ಜನ ಆಮೇಲೂ ಮಾತಾಡ್ತಾ ಇರ್ತಾರೆ. ಸೋ ಮದುವೆ ಮನೆಯಲ್ಲಿ ಎಲ್ಲಾ ಗೆಸ್ಟ್​​ಗಳಿಗೆ ಆಹಾರ ಕಡಿಮೆಯಾಗಬಾರದು ಅಂತ ಎಚ್ಚರಿಕೆ ವಹಿಸಲಾಗುತ್ತೆ. ಆದ್ರೆ ನಾವು ಮದುವೆಗೆ ಕರೆದೋರೆಲ್ಲಾ ಬರೋದಿಲ್ಲ ಇಲ್ಲ. ಇದ್ರಿಂದ ದೊಡ್ಡ ಮಟ್ಟದಲ್ಲಿ ಆಹಾರ ವೇಸ್ಟ್ ಆಗುತ್ತೆ. ಆದ್ರೆ ಅಮೆರಿಕಾದ ಚಿಕಾಗೋದಲ್ಲಿ ಜೋಡಿಯೊಂದು ಮದುವೆಗೆ ಬಾರದೇ, ಬರಕ್ಕಾಗಲ್ಲ ಅಂತ ಒಂದು ಕಾಲ್ ಕೂಡ ಮಾಡದೇ ಆಹಾರ ವೇಸ್ಟ್ ಆಗಲು ಕಾರಣವಾದವರಿಗೆ ಬಿಲ್ ಕಳುಹಿಸಿಕೊಟ್ಟಿದೆ. 240 ಡಾಲರ್​ ಮೊತ್ತದ ಈ ಬಿಲ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

-masthmagaa.com

Contact Us for Advertisement

Leave a Reply