ಕೊಲಿಜಿಯಂ ಬಗ್ಗೆ ಸಿಜೆಐ ಡಿವೈ ಚಂದ್ರಚೂಡ್‌ ಹೇಳಿದ್ದೇನು?

masthmagaa.com:

ಸುಪ್ರೀಂಕೋರ್ಟ್‌ ಹಾಗೂ ಹೈ ಕೋರ್ಟ್‌ ಜಡ್ಜ್‌ಗಳ ನೇಮಕಾತಿ ವ್ಯವಸ್ಥೆ ಕೊಲಿಜಿಯಂ ಕುರಿತ ಟೀಕೆಗಳನ್ನ ಸಿಜೆಐ ಡಿ.ವೈ ಚಂದ್ರಚೂಡ್‌ ಅವ್ರು ತಳ್ಳಿ ಹಾಕಿದ್ದಾರೆ. ಭವಿಷ್ಯದಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿ ಬಡ್ತಿ ಹೊಂದಲಿರುವ ದೇಶದ ಪ್ರಮುಖ 50 ನ್ಯಾಯಾಧೀಶರಲ್ಲಿ ಪ್ರತಿಯೊಬ್ಬರ ಡೇಟಾವನ್ನು ನಾವು ಹೊಂದಿದ್ದೇವೆ. ಕೊಲಿಜಿಯಂ ವಿರುದ್ಧ ಟೀಕೆ ಮಾಡೋರು ನಮ್ಮ ಬಳಿ ಬಡ್ತಿಗಾಗಿ ಪರಿಗಣಿಸುವವರ ಜಡ್ಜ್‌ಗಳ ಮಾಹಿತಿಯಲ್ಲ ಅಂದಿದ್ದರು. ಆದ್ರೆ ಸುಪ್ರೀಂಕೋರ್ಟ್‌ಗೆ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕವಾಗಿಸುವ ವ್ಯವಸ್ಥೆಯನ್ನು ನಾವು ಜಾರಿಗೆ ತಂದಿದ್ದೇವೆ ಅಂತ ಚಂದ್ರಚೂಡ್‌ ಅವ್ರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply