ಮೆಕ್ಸಿಕೋದ ಗ್ವಾನಜುವಾಟೊದಲ್ಲಿ ಗನ್‌ ಅಟ್ಯಾಕ್ :‌ ಎಂಟು ಜನ ಸಾವು

masthmagaa.com:

ಮೆಕ್ಸಿಕೋದ ಗ್ವಾನಜುವಾಟೊ ರಾಜ್ಯದ ಸಿಲಾವೊ ಎಂಬಲ್ಲಿ ನಡೆದ ಗನ್‌ ಅಟ್ಯಾಕ್‌ ನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನ ಮೃತಪಟ್ಟಿದ್ದಾರೆ. ಮಧ್ಯ ಮೆಕ್ಸಿಕೋದಲ್ಲಿ ಡ್ರಗ್ಸ್‌ ಕಾರ್ಟೆಲ್‌ ಗಳ ನಡುವೆ ನಡೆದ ಟರ್ಫ್‌ ವಾರ್‌ನಿಂದ ಈ ಗುಂಡಿನ ದಾಳಿ ನಡೆದಿದೆ. ಸಾಂಟಾ ರೋಸಾ ಡಿ ಲಿಮಾ ಮತ್ತು ಜಾಲಿಸ್ಕಾ ನ್ಯೂ ಅನ್ನುವ ಹೊಸ ತಲೆಮಾರಿನ ಡ್ರಗ್ಸ್‌ ಕಾರ್ಟೆಲ್‌ಗಳಿಂದಾಗಿ ಗ್ವಾನಾಜುವಾಟೊ ಮೆಕ್ಸಿಕೊದ ಅತ್ಯಂತ ಹಿಂಸಾತ್ಮಕ ರಾಜ್ಯಗಳಲ್ಲಿ ಒಂದು ಅಂತ ಪರಿಗಣಿಸಲಾಗಿದೆ. ಮೆಕ್ಸಿಕೊ ಸರ್ಕಾರ 2006ರಿಂದ ವಿವಾದಾತ್ಮಕ ಮಾದಕ ದ್ರವ್ಯ ವಿರೋಧಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು ಇದಕ್ಕೆ ಸಂಬಂಧ ಪಟ್ಟಹಾಗೆ ಇಲ್ಲಿಯ ವರೆಗೆ 3 ಲಕ್ಷಕ್ಕು ಹೆಚ್ಚು ಜನ ಮೃತಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply