ಗಾಲ್ವಾನ್​ ಸಂಘರ್ಷಕ್ಕೆ ಭಾರತವೇ ಕಾರಣ, 5 ಯೋಧರು ಸಾವು: ಚೀನಾ

masthmagaa.com:

ಭಾರತ-ಚೀನಾ ಯೋಧರು ಗಾಲ್ವಾನ್ ಕಣಿವೆಯಲ್ಲಿ ಕಲ್ಲು, ದೊಣ್ಣೆ, ರಾಡ್​ಗಳಿಂದ ಹೊಡೆದಾಡಿಕೊಂಡು 8 ತಿಂಗಳು ಕಳೆದಿದೆ. ಇಷ್ಟು ದಿನಗಳಾದ ಬಳಿಕ ಅಂದು ನಡೆದ ಸಂಘರ್ಷದಲ್ಲಿ ತನ್ನ ಸೇನೆಯ 5 ಯೋಧರು ಮೃತಪಟ್ಟಿದ್ದರು ಅಂತ ಚೀನಾ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ. ಭಾರತೀಯ ಸೇನೆ ಜೊತೆ ನಡೆದ ಸಂಘರ್ಷದಲ್ಲಿ ಮೃತಪಟ್ಟ ಐವರು ಯೋಧರಿಗೆ ಸೇನಾ ಗೌರವ ಕೊಡಲಾಗಿದೆ. ಅಲ್ಲದೆ ಸಂಘರ್ಷ ನಡೆಯಲು ಭಾರತವೇ ಕಾರಣ ಅಂತೆಲ್ಲಾ ಚೀನಾ ಸೇನೆಯ ಅಧಿಕೃತ ನ್ಯೂಸ್​ ಪೇಪರ್ ಪಿಎಲ್​ಎ ಡೈಲಿ ವರದಿ ಮಾಡಿದೆ. ಅಂದ್ಹಾಗೆ 2020ರ ಜೂನ್​ನಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಆದ್ರೆ ಚೀನಾ ತನ್ನ ಸೇನೆಯ 5 ಯೋಧರು ಮಾತ್ರ ಮೃತಪಟ್ಟಿದ್ದಾರೆ ಅಂತ ಹೇಳಿರೋದು ಎಷ್ಟು ಸತ್ಯನೋ ಅವರಿಗೇ ಗೊತ್ತು. ಯಾಕಂದ್ರೆ ಭಾರತೀಯ ಸೇನೆ ಮತ್ತು ವಿವಿಧ ಮಾಧ್ಯಮಗಳ ಪ್ರಕಾರ ಚೀನಾ ಸೇನೆಯ 40 ಯೋಧರು ಮೃತಪಟ್ಟಿರಬಹುದು ಅಂತ ಅಂದಾಜಿಸಲಾಗಿತ್ತು. ಇತ್ತೀಚೆಗೆ ರಷ್ಯಾದ TASS ಮಾಧ್ಯಮ ಕೂಡ 45 ಚೀನಿ ಯೋಧರು ಮೃತಪಟ್ಟಿದ್ದರು ಅಂತ ಹೇಳಿತ್ತು. ಆದ್ರೆ ಚೀನಾ ಮಾತ್ರ 5 ಅಂತಿದೆ.

ಇನ್ನು ಘಟನೆಗೆ ಭಾರತವೇ ಕಾರಣ ಅಂತ ಹೇಳಿರೋ ಚೀನಾ, 2020ರ ಏಪ್ರಿಲ್​ನಿಂದಲೂ ಭಾರತೀಯ ಸೇನೆಯು ಈ ಹಿಂದೆ ಎರಡೂ ಸೇನೆ ಮಾಡಿಕೊಂಡಿದ್ದ ಒಪ್ಪಂದವನ್ನ ಉಲ್ಲಂಘಿಸುತ್ತಿತ್ತು. ಹೀಗೆ ಗಡಿರೇಖೆ ದಾಟಿ ಬಂದ ಭಾರತೀಯ ಸೇನೆ ರಸ್ತೆ ಮತ್ತು ಸೇತುವೆಗಳನ್ನ ನಿರ್ಮಿಸಲು ಮುಂದಾಯ್ತು. ಈ ಮೂಲಕ ಬೇಕು ಅಂತಾನೇ ಸಂಘರ್ಷ ಸೃಷ್ಟಿಸಲು, ಯಥಾಸ್ಥಿತಿಯನ್ನ ಬದಲಾಯಿಸಲು ಪ್ರಯತ್ನಿಸಿತು. ಈ ಸಂಬಂಧ ಮಾತುಕತೆಗೆ ಚೀನಾ ಕಳಿಸಿದ್ದ ಯೋಧರ ಮೇಲೆ ಕಲ್ಲು, ದೊಣ್ಣೆ, ರಾಡ್​ಗಳಿಂದ ಭಾರತೀಯ ಯೋಧರು ದಾಳಿ ಮಾಡಿದ್ರು. ಪ್ರತಿಯಾಗಿ ಚೀನಾ ಸೇನೆ ಕೂಡ ದಾಳಿ ನಡೆಸಿತು. ಇದರಲ್ಲಿ ಭಾರತೀಯ ಸೇನೆ ಸೋಲ್ತು. ಭಾರತದ ಹಲವು ಸೈನಿಕರು ಓಡಿ ಹೋದ್ರು. ಸಾಕಷ್ಟು ಯೋಧರಿಗೆ ಗಾಯಗಾಳಾಯ್ತು, ಹಲವರು ಮೃತಪಟ್ಟರು ಅಂತ ಪಿಎಲ್​ಎ ಡೈಲಿ ವರದಿ ಮಾಡಿದೆ. ಆದ್ರೆ ಪ್ರಧಾನಿ ಮೋದಿಯಾಗಲೀ ಅಥವಾ ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್ ಆಗಲೀ ಸಂಸತ್​ನಲ್ಲಿ ಮಾತನಾಡುವಾಗ, ಚೀನಾ ನಮಗೆ ಮಾಡಿದ ಹಾನಿಗಿಂತ ನಮ್ಮ ಯೋಧರು ಅವರಿಗೆ ಮಾಡಿದ ಹಾನಿಯೇ ಹೆಚ್ಚು ಅಂತ ಹೇಳಿದ್ದರು.

-masthmagaa.com

Contact Us for Advertisement

Leave a Reply