ಭಾರತೀಯ ವೆಬ್‌ಸೈಟ್‌ಗಳ ಹ್ಯಾಕ್‌ಗೆ ಪಾಕ್‌, ಚೀನಾ ಪ್ರಯತ್ನ!

masthmagaa.com:

ಭಾರತದ ಪ್ರತಿಯೊಂದು ಹೆಜ್ಜೆ ಮೇಲೆ ಹದ್ದಿನ ಕಣ್ಣಿಡೋ ಪಾಕ್‌ ಮತ್ತು ಚೀನಾ ಇದೀಗ ಅಯೋಧ್ಯೆ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವೇಳೆ ಕುತಂತ್ರ ಹೂಡಿತ್ತು ಅನ್ನೋ ಮಾಹಿತಿ ಈಗ ಸಿಕ್ಕಿದೆ. ಜನವರಿ 22ರಂದು ನಡೆದ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ವೇಳೆ ಸಾಕಷ್ಟು ಭಾರತೀಯ ವೆಬ್‌ಸೈಟ್‌ಗಳನ್ನ ಹ್ಯಾಕರ್ಸ್‌ ಮತ್ತು ಸೈಬರ್‌ ಕ್ರಿಮಿನಲ್‌ಗಳು ಟಾರ್ಗೆಟ್‌ ಮಾಡಿದ್ದಾರೆ. ಪ್ರಮುಖವಾಗಿ ಚೀನಾ ಮತ್ತು ಪಾಕ್‌ ಹ್ಯಾಕರ್ಸ್‌ ಈ ಕೆಲಸ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ಹೀಗಂತ ಭಾರತೀಯ ಭದ್ರತಾ ಏಜೆನ್ಸಿಗಳು ಈಗ ಮಾಹಿತಿ ನೀಡಿವೆ. ರಾಮಮಂದಿರ, ಪ್ರಸಾರ್‌ ಭಾರತಿ ಮತ್ತು ಉತ್ತರ ಪ್ರದೇಶದ ಇತರೆ ಪ್ರಮುಖ ವೆಬ್‌ಸೈಟ್‌ಗಳು ಜನರಿಗೆ ಆ್ಯಕ್ಸೆಸ್‌ ಸಿಗದೇ ಇರೋ ಹಾಗೆ ಮಾಡಲು ಈ ಹ್ಯಾಕರ್‌ಗಳು ಪ್ರಯತ್ನಿಸಿದ್ದಾರೆ. ಪ್ರಾಣ ಪ್ರತಿಷ್ಠಾಪನೆ ವೇಳೆ ಇಂತದ್ದೊಂದು ಘಟನೆ ನಡೆಯುತ್ತೆ ಅನ್ನೋ ಅರಿವಿದ್ದ ಭದ್ರತಾ ಏಜೆನ್ಸಿಗಳು, ವೆಬ್‌ಸೈಟ್‌ಗಳನ್ನ ಮಾನಿಟರ್‌ ಮಾಡಿದ್ರು. ಈ ವೇಳೆ ವೆಬ್‌ಸೈಟ್‌ಗಳನ್ನ ಟಾರ್ಗೆಟ್‌ ಮಾಡೋಕೆ ಮುಂದಾದ ಸುಮಾರು 1,244 IP ಅಡ್ರೆಸ್‌ಗಳನ್ನ ಬ್ಲಾಕ್‌ ಮಾಡಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply