ಮತ್ತೆ ಹೊಸ ರಕ್ಷಣಾ ಸಚಿವನನ್ನ ನೇಮಿಸಿದ ಚೀನಾ ಸರ್ಕಾರ!

masthmagaa.com:

ಸಚಿವರನ್ನ ಮಕ್ಕಳಿಗೆ ಹಾಕೋ ಡೈಪರ್‌ ಚೇಂಜ್‌ ಮಾಡಿದಂತೆ ಚೇಂಜ್‌ ಮಾಡೋ ಡ್ರ್ಯಾಗನ್‌ ಚೀನಾ ಈಗ ಹೊಸ ರಕ್ಷಣಾ ಸಚಿವರನ್ನ ನೇಮಿಸಿದೆ. 4 ತಿಂಗಳ ಹಿಂದೆ ದಿಢೀರ್‌ ನಾಪತ್ತೆಯಾಗಿದ್ದ ಸಚಿವನ ಸ್ಥಾನಕ್ಕೆ ಈಗ ಮಾಜಿ ನೌಕಾ ಮುಖ್ಯಸ್ಥ ಡಾಂಗ್‌ ಜುನ್‌ ಅನ್ನೋವ್ರನ್ನ ತಂದಿದೆ. ತೈವಾನ್‌ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಪದೇ ಪದೇ ಕಿರಿಕ್‌ ಮಾಡಿ ಸಂಘರ್ಷ ಒಡ್ತಾ ಇರೋ ನಡುವೆಯೇ ಮಾಜಿ ನೌಕಾ ಮುಖ್ಯಸ್ಥನನ್ನ ಡಿಫೆನ್ಸ್‌ ಮಿನಿಸ್ಟರ್‌ ಮಾಡಿರೋದು ಗಮನಾರ್ಹವಾಗಿದೆ. ಅದ್ರಲ್ಲೂ ಈ ಡಾಂಗ್‌ ಜುನ್‌ ದಕ್ಷಿಣ ಚೀನಾ ಸಮುದ್ರ ನೊಡ್ಕೋಳ್ಳೋ ಚೀನಾದ ಸದರ್ನ್‌ ಥಿಯೇಟರ್‌ ಕಮಾಂಡ್‌ ಹಾಗು ತೈವಾನ್‌ನಲ್ಲಿ ತಂಟೆ ತೆಗೆಯೋ ಈಸ್ಟ್‌ ಸೀ ಫ್ಲೀಟ್‌ನ ವೈಸ್‌ ಕಮಾಂಡರ್‌ ಆಗಿದ್ದ. ನಂತ್ರ 2021ರಲ್ಲಿ ಈತನನ್ನ ಫುಲ್‌ ಜೆನರಲ್‌ನಾಗಿ ಮಾಡಲಾಯ್ತು. ಇನ್ನು ಇದಷ್ಟೇ ಅಲ್ಲದೇ ಷಿ ಜಿನ್‌ ಪಿಂಗ್‌ 9 ಹಿರಿಯ ಮಿಲಿಟರಿ ಅಧಿಕಾರಿಗಳನ್ನ ಬದಲಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply