ಉಘರ್ ಮುಸ್ಲಿಮರ ಆಸ್ತಿ ಹರಾಜು ಹಾಕ್ತಿರೋ ಚೀನಾ!

masthmagaa.com:

ಚೀನಾದಲ್ಲಿ ಒಂದು ಕಡೆ ಉಘರ್ ಮುಸ್ಲಿಮರನ್ನು ವಶಕ್ಕೆ ಪಡೆದು, ಚಿತ್ರ ಹಿಂಸೆ ನೀಡ್ತಿರೋ ಚೀನಾ, ಮತ್ತೊಂದ್ಕಡೆ ಅವರಿಗೆ ಸೇರಿದ ಆಸ್ತಿಪಾಸ್ತಿಯನ್ನು ಹರಾಜು ಹಾಕುತ್ತಿದೆ ಅಂತ ಗೊತ್ತಾಗಿದೆ. 2019ರಿಂದ ಈವರೆಗೆ ಅಧಿಕಾರಿಗಳು 8.4 ಕೋಟಿ ಡಾಲರ್ ಮೊತ್ತದ ಉಘರ್ ಮುಸ್ಲಿಮರಿಗೆ ಸೇರಿದ ಆಸ್ತಿಯನ್ನು ಹರಾಜು ಹಾಕಿದೆ. ಸ್ಥಳೀಯ ಕೋರ್ಟ್​​ಗಳು ಇ-ಕಾಮರ್ಸ್​ ವೆಬ್​ಸೈಟ್​​ಗಳ ಮೂಲಕ ಈ ಹರಾಜು ಪ್ರಕ್ರಿಯೆಯನ್ನು ನಡೆಸಿವೆ. ಉಘರ್ ಸಮುದಾಯದ ಜನರಿಗೆ ಸೇರಿದ ಆಸ್ತಿಯನ್ನು ನಾಶಪಡಿಸೋದು ಮತ್ತು ಉದ್ಯಮಿಗಳನ್ನು ಟಾರ್ಗೆಟ್ ಮಾಡೋದು ಈ ಹರಾಜಿನ ಉದ್ದೇಶವಾಗಿದೆ ಅಂತ ತೈವಾನ್ ಮಾಧ್ಯಮ ವರದಿ ಮಾಡಿದೆ. ಆ ರೀತಿ ಆಸ್ತಿ ಹರಾಜಾಗಿರೋರ ಪೈಕಿ ಅಬ್ದುಜೆಲಿಲ್ ಹೆಲಿಲ್ ಕೂಡ ಒಬ್ಬರು. ಇವರನ್ನು 2017ರಲ್ಲಿ ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿದ ಆರೋಪದಡಿಯಲ್ಲಿ ಅರೆಸ್ಟ್ ಮಾಡಲಾಗಿತ್ತು. ಇದೀಗ ಅವರ ಆಸ್ತಿಯನ್ನು 1.1 ಕೋಟಿ ಡಾಲರ್​ಗೆ ಸೇಲ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply