ಉತ್ತರ ಕೊರಿಯಾದಿಂದ ಮತ್ತೊಮ್ಮೆ ಖಂಡಾಂತರ ಕ್ಷಿಪಣಿ ಪರೀಕ್ಷೆ!

masthmagaa.com:

ಉತ್ತರ ಕೊರಿಯಾ ಮತ್ತೆ ಖಂಡಾಂತರ ಕ್ಷಿಪಣಿಯನ್ನು ಉಡಾವಣೆ ಮಾಡಿದೆ. ದಕ್ಷಿಣ ಕೊರಿಯಾ ಸೇನೆ ಈ ಬಗ್ಗೆ ಮಾಹಿತಿ ನೀಡಿದ್ದು, ಉತ್ತರ ಕೊರಿಯಾ ಸಿಂಪೋದಿಂದ ಸಮುದ್ರಕ್ಕೆ ಒಂದು ಖಂಡಾಂತರ ಕ್ಷಿಪಣಿಯ ಪ್ರಯೋಗ ನಡೆಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಗುಪ್ತಚರ ಪಡೆ ಈ ಬಗ್ಗೆ ಮಾಹಿತಿ ಕಲೆ ಹಾಕೋ ಪ್ರಯತ್ನ ನಡೆಸ್ತಿವೆ ಅಂತ ತಿಳಿಸಿದೆ. ಸಿಂಪೋ ಉತ್ತರ ಕೊರಿಯಾದ ಪ್ರಮುಖ ನೌಕಾನೆಲೆಯಾಗಿದೆ. ಇತ್ತೀಚೆಗೆ ತೆಗೆದ ಉಪಗ್ರಹ ಚಿತ್ರಗಳಲ್ಲಿ ನೌಕಾನೆಲೆಯಲ್ಲಿ ಸಬ್​ಮರೀನ್​​ಗಳು ಪತ್ತೆಯಾಗಿದ್ದವು. ಜೊತೆಗೆ ಆಗಾಗ ಉತ್ತರ ಕೊರಿಯಾ ಜಲಾಂತರ್ಗಾಮಿ ನೌಕೆಯಿಂದ ಕ್ಷಿಪಣಿಗಳನ್ನು ಉಡಾವಣೆ ಮಾಡುತ್ತೆ ಅಂತ ವರದಿಗಳು ಬಂದಿದ್ವು. ಈಗಲೂ ಅದೇ ರೀತಿ ಸಬ್​ಮರೀನ್​​ ಮೂಲಕ ಕ್ಷಿಪಣಿ ಲಾಂಚ್ ಮಾಡಿರಬಹುದು ಅಂತ ತಜ್ಞರು ಅಂದಾಜಿಸಿದ್ದಾರೆ.

-masthmagaa.com

Contact Us for Advertisement

Leave a Reply